ಬಲು ಸೂಕ್ಷ್ಮ ಠಾಣೆಗೆ ಪಿಎಸ್ಐ ವರ್ಗಾವಣೆ ಆಗಿದ್ದರೂ ಕ್ಷೇತ್ರದ ಬಿಜೆಪಿ ಶಾಸಕ ಬೇಡ ಅನ್ನುತ್ತಿದ್ದಾರಂತೆ! ಏನಿದರ ಸೂಕ್ಷ್ಮ?

| Updated By: ಸಾಧು ಶ್ರೀನಾಥ್​

Updated on: Feb 01, 2024 | 10:45 AM

ಹೌದು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯೋಸೆಫ್ ಜಮುಲಾ ಅನ್ನೋ ಪಿಎಸ್ಐ ಜೂನ್ ತಿಂಗಳಲ್ಲಿ ವರ್ಗಾವಣೆಯಾಗಿ ಠಾಣೆಗೆ ಹಾಜರಾಗಿದ್ರು. ಆದ್ರೆ, ಇದು ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಇರುಸುಮುರುಸು ತಂದಿದೆಯಂತೆ. ಈ ಪಿಎಸ್ಐ ಮೇಲೆ ಶಾಸಕರು ಆರೋಪ ಮಾಡಿದ್ದಾರಂತೆ. ಈ ಮಧ್ಯೆ, ಶಾಸಕ ಚಂದ್ರು ಲಮಾಣಿ ಕಿರುಕುಳವೇ ನಮ್ಮ ಠಾಣೆ ಅನಾಥವಾಗಲು ಕಾರಣ ಅಂತ ಲಕ್ಷ್ಮೇಶ್ವರ ಪಟ್ಟಣದ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲು ಸೂಕ್ಷ್ಮ ಠಾಣೆಗೆ ಪಿಎಸ್ಐ ವರ್ಗಾವಣೆ ಆಗಿದ್ದರೂ ಕ್ಷೇತ್ರದ ಬಿಜೆಪಿ ಶಾಸಕ ಬೇಡ ಅನ್ನುತ್ತಿದ್ದಾರಂತೆ! ಏನಿದರ ಸೂಕ್ಷ್ಮ?
ಠಾಣೆಗೆ ಪಿಎಸ್ಐ ವರ್ಗಾವಣೆ ಆಗಿದ್ದರೂ ಕ್ಷೇತ್ರದ ಬಿಜೆಪಿ ಶಾಸಕ ಬೇಡ ಅನ್ನುತ್ತಿದ್ದಾರೆ!
Follow us on

ಜಿಲ್ಲೆಯಲ್ಲಿನ ಆ ಪಟ್ಟಣ ಬಲು ಸೂಕ್ಷ್ಮವಾಗಿದೆ. ಈ ಹಿಂದೆ ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಟ್ಟಹಾಸ ಮರೆದಿದ್ರು. ಇಂಥ ಸೂಕ್ಷ್ಮ ಪೊಲೀಸ್ ಠಾಣೆಗೆ ಕಳೆದ 28 ದಿನಗಳಿಂದ ಕಾನೂನು ಸುವ್ಯಸ್ಥೆ ಪಿಎಸ್ಐ ಇಲ್ಲ. ಬೆಳಗಾವಿ ಐಜಿಪಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದರೂ ಠಾಣೆಗೆ ಹಾಜರಾಗಲು ಪಿಎಸ್ಐ ಒದ್ದಾಡುತ್ತಿದ್ದಾರೆ. ಆ ಪಿಎಸ್ಐಗೆ ಠಾಣೆ ಹಾಜರಾಗೋಕೆ ಬಿಡ್ತಿಲ್ಲ. ಕ್ಷೇತ್ರದ ಶಾಸಕರೇ ಇದಕ್ಕೆ ಕಾರಣ ಅಂತ ಕ್ಷೇತ್ರದ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕ ಹಾಗೂ ಸೋತ ಅಭ್ಯರ್ಥಿಗಳ ಪ್ರತಿಷ್ಠೆಗೆ ಪಿಎಸ್ಐ ವಿಲವಿಲ ಅಂತಿದ್ದಾರೆ. ಕೂಡಲೇ ಠಾಣೆಗೆ ಪಿಎಸ್ಐ ನೇಮಕ ಮಾಡಬೇಕು. ಇಲ್ಲಾಂದ್ರೆ ಹೋರಾಟ ಮಾಡುವುದಾಗಿ ಜನ ಎಚ್ಚರಿಕೆ ನೀಡಿದ್ದಾರೆ.

ವರ್ಗವಾದ ಲಕ್ಷ್ಮೇಶ್ವರ ಠಾಣೆಗೆ ಹಾಜರಾಗಲು ಪಿಎಸ್ಐ ಒದ್ದಾಟ…! ನಿತ್ಯ ಎಸ್ಪಿ ಕಚೇರಿಗೆ ಅಲೆದು ಅಲೆದು ಸುಸ್ತಾದ ಅಧಿಕಾರಿ…! ಪಿಎಸ್ಐ ಜಾಯಿನ್ ಮಾಡಿಕೊಳ್ಳದಂತೆ ಎಸ್ಪಿಗೆ ಕ್ಷೇತ್ರದ ಶಾಸಕರ ಒತ್ತಡ ಆರೋಪ..! ಬಿಜೆಪಿ ಶಾಸಕ ಹಾಗೂ ಕಾಂಗ್ರೆಸ್ ಸೋತ ಅಭ್ಯರ್ಥಿಗಳ ಗುದ್ದಾಟದಲ್ಲಿ ಅಧಿಕಾರಿ ವಿಲವಿಲ…! ಹಾಲಿ ಶಾಸಕ ಬಿಜೆಪಿ, ಸೋತ ಅಭ್ಯರ್ಥಿ ಕಾಂಗ್ರೆಸ್ ಇಬ್ಬರ ನಡುವೆ ಪಿಎಸ್ಐ ಪೀಕಲಾಟ..! ಇದು ಈ ಸುದ್ದಿಯ ವೃತ್ತಾಂತ.

ಎಸ್.. ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಅಧಿಕಾರಿಗಳು ಕೆಲಸ ಮಾಡೋದು ಕಷ್ಟ ಕಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದೇ ಈ ಕ್ಷೇತ್ರದ ಅಧಿಕಾರಿಗಳಿಗೆ ಸಾಕುಬೇಕಾಗಿ ಹೋಗಿದೆ. ಯಾಕಪ್ಪ ಈ ಕ್ಷೇತ್ರಕ್ಕೆ ವರ್ಗವಾಗಿ ಬಂದಿದ್ದೇನೆ ಅಂತಿದ್ದಾರೆ. ಹೌದು ಗದಗ ಜಿಲ್ಲೆಯಲ್ಲಿ ಅತೀ ಸೂಕ್ಷ್ಮ ಪೊಲೀಸ್ ಠಾಣೆ ಅಂದ್ರೆ ಅದು ಲಕ್ಷ್ಮೇಶ್ವರ ಪೊಲೀಸ್ ಠಾಣೆ. ಇಲ್ಲಿ ಈ ಹಿಂದೆ ಕೋಮುಗಲಭೆ, ಹಾಡಹಗಲೇ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆಯಂತಹ ಘಟನೆಗಳು ನಡೆದಿದೆ.

ಅಷ್ಟೇ ಅಲ್ಲ ಪೊಲೀಸ್ ಠಾಣೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ರು. ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಈಗ ಅದೇ ಪೊಲೀಸ್ ಠಾಣೆಗೆ ಲಾ ಅಂಡ್ ಆರ್ಡರ್ ಪಿಎಸ್ಐ ಇಲ್ಲದಂತಾಗಿದೆ. ತಿಂಗಳಿಂದ ಪಿಎಸ್ಐ ಇಲ್ಲದೇ ಇನ್ ಚಾರ್ಜ್ ಅಧಿಕಾರಿ ಮೇಲೆ ಠಾಣೆ ನಡೆದಿದೆ. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಕಾಂಗ್ರೆಸ್ ಸೋತ ಅಭ್ಯರ್ಥಿ ಸುಜಾತಾ ದೊಡ್ಡಮನಿ ನಡುವಿನ ಗುದ್ದಾಟ ಈಗ ಅಧಿಕಾರಿಗಳಿಗೆ ಪಿಕಲಾಟ ತಂದಿಟ್ಟಿದೆ.

ಹೌದು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯೋಸೆಫ್ ಜಮುಲಾ ಅನ್ನೋ ಪಿಎಸ್ಐ 17, ಜೂನ್ 2024 ರಂದು ವರ್ಗಾವಣೆಯಾಗಿ ಠಾಣೆಗೆ ಹಾಜರಾಗಿದ್ರು. ಆದ್ರೆ, ಇದು ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಇರುಸುಮುರುಸು ತಂದಿದೆಯಂತೆ. ಈ ಪಿಎಸ್ಐ ಮೇಲೆ ಶಾಸಕರು ಆರೋಪ ಮಾಡಿದ್ದಾರಂತೆ. ಶಾಸಕ ಚಂದ್ರು ಲಮಾಣಿ ಕಿರುಕುಳವೇ ನಮ್ಮ ಠಾಣೆ ಅನಾಥವಾಗಲು ಕಾರಣ ಅಂತ ಲಕ್ಷ್ಮೇಶ್ವರ ಪಟ್ಟಣದ ಜನ್ರು ಶಾಸಕ ಚಂದ್ರು ಲಮಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಸಕರ ಕಿರುಕುಳ ಆರೋಪ ಒತ್ತಡ ಕಾರಣದಿಂದ ಜನವರಿ 4ರಂದು ಲಕ್ಷ್ಮೇಶ್ವರ ಠಾಣೆಯಿಂದ ಬಿಡುಗಡೆಗೊಳಿಸಲಾಗಿದೆಯಂತೆ. ಬಳಿಕ ಶಾಸಕ ಚಂದ್ರ ಲಮಾಣಿ ಪಿಎಸ್ಐ ಶಿವಾನಂದ ಲಮಾಣಿ ಎಂಬುವರನ್ನು ವರ್ಗ ಮಾಡಿಸಿಕೊಂಡಿದ್ದಾರಂತೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಈ ಪಿಎಸ್ಐ ಅವ್ರುನ್ನ ಸೇವೆಗೆ ಹಾಜರು ಪಡಿಸಿಕೊಳ್ಳದಂತೆ ಮೇಲಾಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರಂತೆ.

ಈಗ ಮತ್ತೆ ಈ ಮೊದಲು ಇದ್ದ ಯೋಸೆಫ್ ಜಮುಲಾ ಅವ್ರನ್ನೇ 2024 ಜನವರಿ 10 ರಂದು ಬೆಳಗಾವಿ ಐಜಿಪಿ ಅವ್ರು ಲಕ್ಷ್ಮೇಶ್ವರ ಪೊಲೀಸ್ ಠಾಣೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಆದ್ರೆ, ಬರೋಬ್ಬರಿ 28 ದಿನಗಳೇ ಕಳೆದ್ರೂ ಯೋಸೆಫ್ ಜಮುಲಾ ಅವ್ರನ್ನು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಹಾಜರು ಪಡಿಸಿಕೊಂಡಿಲ್ಲ. ಹೀಗಾಗಿ ಲಕ್ಷ್ಮೇಶ್ವರ ಠಾಣೆ ಹಾಜರಾಗಲು ಕಳೆದ 28 ದಿನಗಳಿಂದ ಪಿಎಸ್ಐ ಯೋಸೆಫ್ ಜಮುಲಾ ಎಸ್ಪಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದ್ರೆ, ಇನ್ನೂ ಜಾಯಿನ್ ಮಾಡಿಕೊಂಡಿಲ್ಲ. ಕಾರಣ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಒತ್ತಡವೇ ಕಾರಣ ಅಂತ ಲಕ್ಷ್ಮೇಶ್ವರ ಜನ್ರು ಆರೋಪಿಸಿದ್ದಾರೆ. ಹಾಲಿ ಶಾಸಕರು ಹಾಗೂ ಸೋತ ಅಭ್ಯರ್ಥಿ ಪ್ರತಿಷ್ಠೆಗೆ ಅಧಿಕಾರಿ ವರ್ಗ ವಿಲವಿಲ ಅಂತಿದಿದೆ.

ಪಿಎಸ್ಐ ಯೋಶೋಪ್ ವಿರುದ್ಧ ಸಾಕಷ್ಟು ದೂರುಗಳು ಇದ್ದವು. ಸರಿಯಾರಿ ಕರ್ತವ್ಯ ನಿಭಾಯಿಸುತ್ತಿಲ್ಲ. ಸಾರ್ವಜನಿಕರು, ಸಿಬ್ಬಂದಿಗಳ ಜೊತೆ ವರ್ತನೆ ಸರಿಯಾಗಿಲ್ಲ ಅನ್ನೋ ಆರೋಪಗಳು ಇದ್ದವು. ಹೀಗಾಗಿ ಅಧಿಕಾರಿಗಳ ವರದಿ ಹಿನ್ನೆಯಲ್ಲಿ ಠಾಣೆ ಹಾಜರು ಮಾಡಿಕೊಂಡಿಲ್ಲ. ಶೀಘ್ರವೇ ಲಕ್ಷ್ಮೆಶ್ವರ ಪೊಲೀಸ್ ಠಾಣೆಗೆ ಪಿಎಸ್ಐ ನೇಮಕವಾಗಲಿದ್ದಾರೆ ಅಂತ ಎಸ್ಪಿ ಬಿಎಸ್ ನೇಮಗೌಡ ಹೇಳಿದ್ದಾರೆ.

ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್ ಸೋತ ಅಭ್ಯರ್ಥಿ ನಡುವಿನ ಗುದ್ದಾಟಕ್ಕೆ ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಲಕ್ಷ್ಮೇಶ್ವರ ಸೂಕ್ಷ್ಮ ಪೊಲೀಸ್ ಠಾಣೆಗೆ ಪಿಎಸ್ಐ ಹುದ್ದೆ ಖಾಲಿ ಇದೆ. ಸಧ್ಯಕ್ಕೆ ಶಿರಹಟ್ಟಿ ಪಿಎಸ್ಐ ಅವ್ರನ್ನು ಪ್ರಭಾರಿಯಾಗಿ ನೇಮಕ ಮಾಡಿದ್ದಾರೆ. ಆದ್ರೆ, ಶಿರಹಟ್ಟಿ ಕೂಡ ದೊಡ್ಡ ಪೊಲೀಸ್ ಠಾಣೆ ಇದರ ಜೊತೆಗೆ ಲಕ್ಷ್ಮೇಶ್ವರ ಠಾಣೆ ಜವಾಬ್ದಾರಿ ಹೊತ್ತಿರೋ ಪಿಎಸ್ಐ ಒದ್ದಾಡುತ್ತಿದ್ದಾರೆ. ಇನ್ನಾದ್ರೂ ಉಸ್ತುವಾರಿ ಸಚಿವರು, ಮೇಲಾಧಿಕಾರಿಗಳು ಅಧಿಕಾರಿಗಳ ಒದ್ದಾಟ, ಕಿರುಕುಳಕ್ಕೆ ಕಡಿವಾಣ ಹಾಕಬೇಕಿದೆ.