ಶಾಸಕ ರಾಮಣ್ಣ ಲಮಾಣಿಯಿಂದ ನಾಡಗೀತೆಗೆ ಅವಮಾನ; ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರ ಆಕ್ರೋಶ

| Updated By: preethi shettigar

Updated on: Mar 13, 2022 | 6:11 PM

ನಾಡಗೀತೆ ಹಾಡುವಾಗ ಸಾರಿಗೆ ಸಚಿವ ಬಿ.ಶ್ರೀರಾಮುಲು ಜತೆ ಮಾತನಾಡಲು ಮುಂದಾಗಿದ್ದಾರೆ. ಶಾಸಕ ರಾಮಣ್ಣ ಲಮಾಣಿಯವರ ಈ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರಾಮಣ್ಣ ಲಮಾಣಿಯಿಂದ ನಾಡಗೀತೆಗೆ ಅವಮಾನ; ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರ ಆಕ್ರೋಶ
Follow us on

ಗದಗ: ಜಿಲ್ಲೆಯ ಶಿರಹಟ್ಟಿಯಲ್ಲಿ ಕೆಎಸ್​ಆರ್​ಟಿಸಿ ಬಸ್(KSRTC Bus) ಡಿಪೋ ಉದ್ಘಾಟನೆ ವೇಳೆ ಬಿಜೆಪಿ ಶಾಸಕ ರಾಮಣ್ಣ ಲಮಾಣಿಯವರು ನಾಡಗೀತೆಗೆ ಅವಮಾನ ಮಾಡಿದ್ದಾರೆ. ನಾಡಗೀತೆ ಹಾಡುವಾಗ ಸಾರಿಗೆ ಸಚಿವ ಬಿ.ಶ್ರೀರಾಮುಲು ಜತೆ ಮಾತನಾಡಲು ಮುಂದಾಗಿದ್ದಾರೆ. ಶಾಸಕ ರಾಮಣ್ಣ ಲಮಾಣಿಯವರ(MLA Ramanna Lamani) ಈ ವರ್ತನೆಗೆ ಸಾರ್ವಜನಿಕರು(Public) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಸಾಮಾನ್ಯ ವ್ಯಕ್ತಿಯೂ ನಾಡಗೀತೆಗೆ ಗೌರವ ನೀಡ್ತಾನೆ. ಆದರೆ ಈ ಎಂಎಲ್ಎ ಸಾಹೇಬ್ರಿಗೆ ಮಾತ್ರ ನಾಡಗೀತೆಗೆ ಗೌರವ ನೀಡಬೇಕು ಅನ್ನೋ ಕನಿಷ್ಠ ಪರಿಜ್ಞಾನವೇ ಇಲ್ಲದಂತೆ ಕಾಣುತ್ತದೆ. ಈ ಹಿಂದೆಯೂ ನಾಡಗೀತೆ ಹಾಡುವಾಗ ಪುಸ್ತಕ ಓದುವ ಮೂಲಕ ಅವಮಾನ ಮಾಡಿದ್ದರು. ಈಗ ಮತ್ತೆ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡಗೀತೆ ಹಾಡುವಾಗ ಶಾಸಕ ರಾಮಣ್ಣ ಲಮಾಣಿ ಪಕ್ಕದಲ್ಲೇ ನಿಂತಿದ್ದ ಸಚಿವ ಶ್ರೀರಾಮುಲು ಅವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಲು ಯತ್ನಿಸಿದ್ದಾರೆ. ಇಡೀ ಸಮಾರಂಭದಲ್ಲಿ ಸಣ್ಣಮಕ್ಕಳಿಂದ ಎಲ್ಲರೂ ಸಾವಧಾನ ಸ್ಥಿತಿಯಲ್ಲಿ ನಿಂತು ನಾಡಗೀತೆಗೆ ಗೌರವ ನೀಡುವಾಗ ಜವಾಬ್ದಾರಿಯುತ ಶಾಸಕರು, ಸಚಿವರನ್ನು ಮಾತನಾಡಿಸುವ ಯತ್ನ ಮಾಡುವ ಮೂಲಕ ನಾಡಗೀತೆಗೆ ಅವಮಾನ ಮಾಡಿದ್ದಾರೆ.

ಈ ಹಿಂದೆಯೂ ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲೂ ನಾಡಗೀತೆ ಹಾಡುವಾಗ ಪುಸ್ತಕ ಓದುವ ಮೂಲಕ ಅವಮಾನ ಮಾಡಿದ್ರು. ಈಗ ಮತ್ತೆ ನಾಡಗೀತೆಗೆ ಅವಮಾನ ಮಾಡುವ ಮೂಲಕ ಬೇಜವಾಬ್ದಾರಿಯಿಂದ ವರ್ತನೆ ತೋರಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ಜವಾಬ್ದಾರಿ ಸ್ಥಾನದಲ್ಲಿ ಇರುವ ಶಾಸಕ ರಾಮಣ್ಣ ಬೇಜವಾಬ್ದಾರಿ ವರ್ತನೆಗೆ ಶಿರಹಟ್ಟಿ ಪಟ್ಟಣದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಮಕ್ಕಳಿಗೆ ಇರುವಷ್ಟು ಕನಿಷ್ಠ ಜ್ಞಾನವಿಲ್ಲ ಅಂತ ಕಿಡಿಕಾರಿದ್ದಾರೆ. ನಾಡಗೀತೆ ಅವಮಾನ ಮಾಡಿದ ಶಾಸಕ ಕನ್ನಡನಾಡಿನ ಜನರ ಕ್ಷಮೆ ಕೇಳಬೇಕು ಎಂದು ಸ್ಥಳೀಯರಾದ ಶರಣು ಗೂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ಹಳ್ಳಿ ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್, ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ

ಇದು ಒಂದು ಬಾವಿಯ ಕಥೆ; ನೀರು ಕೊಡಲು ತಾತ್ಸಾರ, ಅವಮಾನ.. ಕೂಲಿ ಕೆಲಸ ಮಾಡಿಕೊಂಡು ಬಂದು ಬಾವಿ ತೋಡಿದ ದಂಪತಿ

 

 

Published On - 5:42 pm, Sun, 13 March 22