AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡಗೀತೆ ಅವಧಿ ಸೀಮಿತಗೊಳಿಸುವ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡುತ್ತೇವೆ: ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್

ತಾಯಿ ಭುವನೇಶ್ವರಿ ಫೋಟೋ ರಾಜ್ಯಾದ್ಯಂತ ಒಂದೇ ರೀತಿ ಇರಬೇಕು. ಒಂದೊಂದು ಊರಲ್ಲಿ ಒಂದೊಂದು ರೀತಿ ಇದೆ. ಆದಷ್ಟು ಬೇಗ ಈ ವಿಚಾರ ಇತ್ಯರ್ಥಗೊಳಿಸಲಿದ್ದೇವೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ನಾಡಗೀತೆ ಅವಧಿ ಸೀಮಿತಗೊಳಿಸುವ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡುತ್ತೇವೆ: ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್
ಸುನಿಲ್ ಕುಮಾರ್ (ಸಂಗ್ರಹ ಚಿತ್ರ)
TV9 Web
| Updated By: preethi shettigar|

Updated on:Aug 23, 2021 | 1:36 PM

Share

ಉಡುಪಿ: ನಾಡಗೀತೆಯನ್ನು ಸೀಮಿತಗೊಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ಸುನಿಲ್ ಕುಮಾರ್, ನಾಡಗೀತೆಯನ್ನು ಎಷ್ಟು ನಿಮಿಷಕ್ಕೆ ಸೀಮಿತಗೊಳಿಸಬೇಕು? ನಾಡಗೀತೆಯ ಸಂಗೀತ ಯಾವ ರೀತಿ ಇರಬೇಕು? ಎಂದು ಚರ್ಚಿಸುತ್ತೇವೆ. ಕನ್ನಡ ಭುವನೇಶ್ವರಿಯ ಫೋಟೋ ಯಾವ ರೀತಿ ಇರಬೇಕು ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ತಾಯಿ ಭುವನೇಶ್ವರಿ ಫೋಟೋ ರಾಜ್ಯಾದ್ಯಂತ ಒಂದೇ ರೀತಿ ಇರಬೇಕು. ಒಂದೊಂದು ಊರಲ್ಲಿ ಒಂದೊಂದು ರೀತಿ ಇದೆ. ಆದಷ್ಟು ಬೇಗ ಈ ವಿಚಾರ ಇತ್ಯರ್ಥಗೊಳಿಸಲಿದ್ದೇವೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬಳಿಕ ವಿದ್ಯುತ್ ಬಿಲ್ ಪ್ರಿಪೇಯ್ಡ್ ಮೀಟರ್ ವಿಚಾರ ಮಾತನಾಡಿದ ಅವರು, ಈ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆಯಷ್ಟೇ. ಸ್ಮಾರ್ಟ್ ಮೀಟರ್ ಮತ್ತು ಪ್ರಿಪೇಡ್ ಮೀಟರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಧಕ ಭಾದಕ ಯೋಚಿಸಿ ನಿರ್ಧರಿಸುತ್ತೇನೆ ಎಂದು ತಿಳಿಸಿದರು.

ಬಳಿಕ ವಿವಿಧ ಜಯಂತಿಗಳ ಆಚರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವರಾದ ಸುನಿಲ್ ಕುಮಾರ್ ಮಾತನಾಡಿದ್ದು, ಶುಕ್ರವಾರ ಕನ್ನಡ ಸಂಸ್ಕೃತಿ ಇಲಾಖೆಯ ಸಭೆ ಇದೆ. ವಿವಿಧ ಜಯಂತಿಗಳನ್ನು ಸೀಮಿತಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ಮಾಡುತ್ತೇವೆ. ಕನ್ನಡ ಸಂಸ್ಕೃತಿ, ಯುವಜನಸೇವೆ ಮತ್ತು ಶಿಕ್ಷಣ ಇಲಾಖೆ ಒಟ್ಟಾಗಿ ಜಯಂತಿ ಆಚರಣೆ ಮಾಡಬಹುದು ಎಂದು ಹೇಳಿದರು.

ಹೆಚ್ಚು ಅರ್ಥಪೂರ್ಣ ಜಯಂತಿಗಳ ಆಚರಣೆಗೆ ಒತ್ತು ನೀಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ನಾಡಿನಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಅಧಿವೇಶನದ ಒಳಗಾಗಿ ಕಾರ್ಯಕ್ರಮದ ರೂಪುರೇಷೆ ಅಂತಿಮ ಸ್ವರೂಪ ಪಡೆಯಲಿದೆ ಎಂದು ಸಚಿವರಾದ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ನಾರಾಯಣಗುರುಗಳ ಹೆಸರಲ್ಲಿ ನಿಗಮ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ನಾರಾಯಣ ಗುರುಗಳ ಹೆಸರಲ್ಲಿ ನಿಗಮ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಿಗಮದ ಸ್ವರೂಪ ಶೀಘ್ರ ಚರ್ಚಿಸುತ್ತೇವೆ. ಆ ಮೂಲಕ ನಿಗಮದ ವ್ಯಾಪ್ತಿ, ಅನುದಾನ ವಿಚಾರ ನಿರ್ಧರಿಸುತ್ತೇವೆ. ಶೀಘ್ರ ನಿಗಮ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬಳಿಕ ತಾಲಿಬಾನ್ ಸಂಸ್ಕೃತಿ ಮತ್ತು ಬಿಜೆಪಿ ಸಂಸ್ಕೃತಿಗೆ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್​ ಮಾಡಿದ ಟ್ವೀಟ್​ಗೆ ಸಚಿವರಾದ ಸುನಿಲ್ ಕುಮಾರ್ ಉತ್ತರ ನೀಡಿದ್ದು, ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್ ಟೀಕೆ ಮಾಡಿದೆ. ಆಶೀರ್ವಾದ ಕಳೆದುಕೊಂಡವರು ಈ ರೀತಿ ಮಾತನಾಡುತ್ತಾರೆ. ಜನ ಕಳೆದ ಹತ್ತು ವರ್ಷಗಳಿಂದ ನಮಗೆ ನಿರಂತರ ಆಶೀರ್ವಾದ ಮಾಡಿದ್ದಾರೆ. ಜನರ ಭಾವನೆಗಳಿಂದ ದೂರಾದವರು ಈ ರೀತಿ ಟೀಕಿಸುತ್ತಾರೆ. ಸದ್ಯ ಅಘಾನಿಸ್ತಾನದ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ನರೇಂದ್ರ ಮೋದಿ ಈ ದೇಶದ ನೇತೃತ್ವ ವಹಿಸದಿದ್ದರೆ ಏನಾಗುತ್ತಿತ್ತು? ಕಾಂಗ್ರೆಸ್ ನೇತೃತ್ವದ ಇದ್ದಿದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು ? ಈ ಬಗ್ಗೆ ಜನ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: Sunil Kumar: ಆರ್​ಎಸ್​ಎಸ್​, ಎಬಿವಿಪಿ ಹಿನ್ನೆಲೆಯುಳ್ಳ ಸುನಿಲ್ ಕುಮಾರ್​ಗೆ ಲಭಿಸಿತು ಇಂಧನ ಖಾತೆ

ಕನ್ನಡ ಪುಸ್ತಕ ಕೊಡಿ ಎಂದ ನೂತನ ಸಚಿವ ಸುನಿಲ್ ಕುಮಾರ್ ಈಗ ಕಲಾವಿದರೊಂದಿಗೆ ಕಾಫಿ ಕುಡಿಯಲಿದ್ದಾರೆ!

Published On - 1:20 pm, Mon, 23 August 21

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ