120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾಪು ಲೈಟ್ ಹೌಸ್​​ಗೆ ಅಂಚೆ ಇಲಾಖೆಯಿಂದ ಗೌರವ

ಸ್ಯಾಟಲೈಟ್ ಆಧಾರಿತ ನೇಮಿಗೇಶನ್ ಸಿಸ್ಟಂ ಇಲ್ಲದಿದ್ದಾಗ ಈ ದ್ವೀಪ ಸ್ತಂಭವೇ ನೆರವಿಗೆ ಬರುತ್ತಿತ್ತು. ವಿಶೇಷವಾಗಿ ಬಂಡೆಯ ಮೇಲೆ ನಿರ್ಮಿತವಾಗಿ ಕಾಪು ದ್ವೀಪ ಸ್ತಂಭ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ.

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾಪು ಲೈಟ್ ಹೌಸ್​​ಗೆ ಅಂಚೆ ಇಲಾಖೆಯಿಂದ ಗೌರವ
ಶಾಶ್ವತ ಅಂಚೆ ಮೊಹರು
Follow us
| Updated By: preethi shettigar

Updated on:Aug 24, 2021 | 11:03 AM

ಉಡುಪಿ: 120 ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾಪು ಲೈಟ್ ಹೌಸ್​ಗೆ ಅಂಚೆ ಇಲಾಖೆ ಗೌರವ ಸೂಚಿಸಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಂಚೆ ಇಲಾಖೆ ಶಾಶ್ವತ ಅಂಚೆ ಮೊಹರು ನೀಡಿದೆ. 1901 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಕಾಪು ಸಮುದ್ರ ತಡಿ ಬಂಡೆ ಮೇಲೆ ದ್ವೀಪ ಸ್ತಂಭ ನಿರ್ಮಿಸಿತ್ತು.

ಸ್ಯಾಟಲೈಟ್ ಆಧಾರಿತ ನೇಮಿಗೇಶನ್ ಸಿಸ್ಟಂ ಇಲ್ಲದಿದ್ದಾಗ ಈ ದ್ವೀಪ ಸ್ತಂಭವೇ ನೆರವಿಗೆ ಬರುತ್ತಿತ್ತು. ವಿಶೇಷವಾಗಿ ಬಂಡೆಯ ಮೇಲೆ ನಿರ್ಮಿತವಾಗಿ ಕಾಪು ದ್ವೀಪ ಸ್ತಂಭ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ. ಇನ್ನು ಮುಂದೆ ಕಾಪು ಅಂಚೆ ಕಚೇರಿಯಲ್ಲಿ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರಾಗಿ ಸಿಗಲಿದೆ.

ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಎಂದರೇನು? ಅಂಚೆ ಚೀಟಿ ಸಂಗ್ರಹಣೆ ಮಾಡುವುದು ಕೇಲವರಿಗೆ ಒಂದು ಹವ್ಯಾಸವಾಗಿ ಬಿಟ್ಟಿದೆ. ಹೀಗಿರುವಾಗ ಕೆಲವೊಂದು ಅಂಚೆ ಕಚೇರಿಗಳಲ್ಲಿ ಆಯಾಯ ಪ್ರದೇಶಗಳ ವಿಶೇಷತೆಯನ್ನು ಒಳಗೊಂಡಂತೆ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಲಭ್ಯವಿದೆ. ಯಾವುದೇ ಶುಲ್ಕವನ್ನು ಪಾವತಿಸದೆ ಪತ್ರ ರವಾನೆಗೆ ಇವುಗಳನ್ನು ಬಳಸಬಹುದು.

ಕೊಪ್ಪಳ: ಹಿರೇಬೆಣಕಲ್ ಮೋರೇರ್ ತಟ್ಟಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಕ್ರಿಸ್ತ ಪೂರ್ವ 10ನೇ ಶತಮಾನಗಳಷ್ಟು ಹಳೆಯದಾದ ಹಿರೇಬೆಣಕಲ್‌ನ ಶಿಲಾಸಮಾಧಿಗಳು ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಮತ್ತೆ ಸೇರ್ಪಡೆಯಾಗಿವೆ. ಇತ್ತೀಚಿಗೆ ನಡೆದ ವಿಶ್ವಸಂಸ್ಥೆಯ ಯುನೆಸ್ಕೋ ಅಂಗ ಸಂಸ್ಥೆಯು ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರೇಬೆಣಕಲ್ ಬಳಿಯ ಆದಿಮಾನವರ ಶಿಲಾಸಮಾಧಿಗಳು ಇರುವ ಮೋರೇರ್ ತಟ್ಟಿ ಸೇರಿದೆ. ಭಾರತದ ಒಂಬತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ, ಯುನೆಸ್ಕೋ ಸಂಸ್ಥೆಗೆ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ವರದಿ ಸಲ್ಲಿಸಲಾಗಿತ್ತು. ಇವುಗಳಲ್ಲಿ ಆರು ಪ್ರಮುಖ ಸ್ಥಳಗಳಿಗೆ ಮಾತ್ರ ತಾತ್ಕಾಲಿಕ ಮಾನ್ಯತೆಯನ್ನು ಯುನೆಸ್ಕೋ ಸಂಸ್ಥೆ ನೀಡಿದೆ. ಆ ಮೂಲಕ ಈಗಾಗಲೇ ಭಾರತದಲ್ಲಿದ್ದ 30 ವಿಶ್ವಪಾರಂಪರಿಕ ಸ್ಥಳಗಳ ಜತೆಗೆ ಈಗ ಯುನೆಸ್ಕೋ ಅಂಗ ಸಂಸ್ಥೆ ಬಿಡುಗಡೆ ಮಾಡಿದ ಆರು ತಾಣಗಳನ್ನು ಸೇರಿವೆ. ಒಟ್ಟು 36 ತಾಣಗಳಿಗೆ ಸದ್ಯ ಮಾನ್ಯತೆ ಸಿಕ್ಕಂತಾಗಿದೆ.

ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಿಂದ ಸುಮಾರು 4 ಕಿ.ಮೀ ದೂರದಲ್ಲಿ ಈ ಹಿರೇಬೆಣಕಲ್ ಗ್ರಾಮವಿದ್ದು, ಸುಮಾರು 2 ಕಿ.ಮೀ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಎತ್ತರವಾದ ಬೆಟ್ಟದಲ್ಲೇ ಶಿಲಾಸಮಾಧಿಗಳಿವೆ. ಇಲ್ಲಿಂದ ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ ದೂರದಲ್ಲಿದ್ದರೆ. ತಾಲ್ಲೂಕು ಕೇಂದ್ರವಾದ ಗಂಗಾವತಿಯಿಂದ ಸುಮಾರು 10 ಕಿ.ಮೀ ಅಂತರದಲ್ಲಿದೆ. ಮೋರೇರ್ ತಟ್ಟಿ ಸುಮಾರು 600ಕ್ಕೂ ಅಧಿಕ ಶಿಲಾಸಮಾಧಿಗಳಿದ್ದವೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಸುಮಾರು 500 ಶಿಲಾಸಮಾಧಿಗಳು ಮಾತ್ರ ಉಳಿದಿದೆ ಮೂಲಗಳು ತಿಳಿಸಿವೆ.

ಪ್ರಾಚೀನ ಕಾಲದಲ್ಲಿ ಆದಿಮಾನವರು ಈ ಬೆಟ್ಟದ ಮೇಲೇಯೇ ವಾಸವಾಗಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ಇಲ್ಲಿ ದೊರೆತಿವೆ. ಅವರು ವಾಸವಾಗಿದ್ದ ಗುಹೆಗಳನ್ನು ಇಂದಿಗೂ ಸಹ ಇಲ್ಲಿ ವಿಕ್ಷಿಸಬಹುದು. ಕ್ರಿ. ಪೂ ಸುಮಾರು 1000 ರಿಂದ 2000ಕ್ಕೆ ಸಂಬಂಧಿಸಿದ ಶಿಲಾ-ತಾಮ್ರ ಯುಗಕ್ಕೆ ಸಂಬಂಧಪಟ್ಟ ಸಂಸ್ಕೃತಿಯ ಬೂದಿ ದಿಬ್ಬ, ಗುಹಾ ಚಿತ್ರಗಳು ಕೂಡ ಮೋರೇರ್ ತಟ್ಟಿಯಲ್ಲಿ ದೊರಕಿವೆ. ಇವುಗಳಲ್ಲದೇ ಆದಿಮಾನವರು ಉಪಯೋಗಿಸುತ್ತಿದ್ದ ಮಡಿಕೆ ಚೂರುಗಳು, ನೀಳಚಕ್ಕೆ, ಶಿಲಾಗಟ್ಟಿಗಳು ದೊರಕಿವೆ. ವಿಶೇಷವಾಗಿ ಅನೇಕ ಗವಿವರ್ಣ ಚಿತ್ರಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

1925 ರಲ್ಲಿ ಈ ಗವಿ ಚಿತ್ರಗಳನ್ನು ಮೊಟ್ಟ ಮೊದಲ ಬಾರಿಗೆ ಶೋಧಿಸಿದವರು ಆಂಗ್ಲ ಭೂರ್ಗಭಶಾಸ್ತಜ್ಞರಾದ ಲಿಯೋನಾರ್ಡ್ಮನ್ ಅವರು. ನಂತರದಲ್ಲಿ 1999 ರಲ್ಲಿ ಪುರಾತತ್ವ ಸಂಶೋಧಕರಾದ ಡಾ. ಅ.ಸುಂದರ ಅವರು ಮೋರೇರ್ ತಟ್ಟಿಯ ಚಿತ್ರಣವನ್ನು ಸಂಶೋಧಿಸಿದ್ದಾರೆ. ಬಳಿಕ ಡಾ.ಶರಣಬಸಪ್ಪ ಕೋಲ್ಕಾರ್ ಅವರೂ ಸಹ ಈ ಪರಿಸರದಲ್ಲಿರುವ ಅನೇಕ ಗವಿವರ್ಣ ಚಿತ್ರಗಳ ಮೇಲೆ ವಿಸ್ತಾರವಾದ ಅಧ್ಯಯನ ಮಾಡಿ, ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.

ಮೋರೇರ್ ತಟ್ಟಿಯಲ್ಲಿನ ಈ ಗವಿಗಳಲ್ಲಿ ಆದಿಮಾನವರು ತಮ್ಮ ಸಾಂಸ್ಕೃತಿಕ ಬದುಕುಗಳನ್ನು ಈ ಚಿತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ. ಅವುಗಳಲ್ಲಿ ಬಹಳ ಮುಖ್ಯವಾಗಿ ಭೇಟೆಯಾಡುವ, ನೃತ್ಯಮಾಡುವ ಮುಂತಾದ ಜೀವನ ಶೈಲಿಯ ಚಿತ್ರಗಳು ಅವರ ಜೀವನ ಶೈಲಿಯನ್ನು ಪರಿಚಯಿಸುತ್ತವೆ. ಹಂದಿ, ಹುಲಿ, ಗೂಳಿ, ನವಿಲು ಮುಂತಾದ ಪ್ರಾಣಿಗಳ ಚಿತ್ರಗಳನ್ನೂ ಸಹ ಬಿಡಿಸಿ ಅವರು ತಮ್ಮ ಕಲಾವಂತಿಕೆಯನ್ನು ಪ್ರಚುರಪಡಿಸಿದ್ದಾರೆ. ಇವುಗಳ ಕಾಲ ಕ್ರಿ.ಪೂ. ಸುಮಾರು 1000 ರಿಂದ 500 ವರ್ಷಗಳಕ್ಕೂ ಹಿಂದಿನವುಗಳೆಂದು ಈ ಚಿತ್ರಗಳ ಆಧಾರದ ಮೇಲೆ ಸಂಶೋಧಕರು ಊಹಿಸಿದ್ದಾರೆ.

ಇದನ್ನೂ ಓದಿ: ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ; ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ

ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!

Published On - 10:47 am, Tue, 24 August 21

ತಾಜಾ ಸುದ್ದಿ
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ