Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?

ಗಂಗಾಧರ​ ಬ. ಸಾಬೋಜಿ
|

Updated on: Apr 02, 2025 | 7:11 AM

ಬುಧವಾರದಂದು ಕಾಲಭೈರವನಿಗೆ ಪೂಜೆ ಸಲ್ಲಿಸುವುದು ಮತ್ತು ಅವಲಕ್ಕಿ-ಕಲ್ಲುಸಕ್ಕರೆ ಪಾಯಸ ನೈವೇದ್ಯ ಅರ್ಪಿಸುವುದು ದಾರಿದ್ರ್ಯ, ರೋಗ ಮತ್ತು ತೊಂದರೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಹೀಗೆ ಐದು ಬುಧವಾರಗಳ ಕಾಲ ಮಾಡುವುದರಿಂದ ಶಾಶ್ವತ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಏಪ್ರಿಲ್​ 02: ಕಾಲಭೈರವನು ಶಿವನ 64 ರೂಪಗಳಲ್ಲಿ ಒಂದು. ಕಾಲವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದಾನೆ ಎಂದು ನಂಬಲಾಗುತ್ತೆ. ಅನೇಕರು ಕಾಲಭೈರವನ ಆರಾಧನೆಯ ಮೂಲಕ ತಮ್ಮ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. ಬುಧವಾರದ ದಿನ ಕಾಲಭೈರವನಿಗೆ ಪೂಜೆ ಮತ್ತು ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಈ ನೈವೇದ್ಯದಲ್ಲಿ ಅವಲಕ್ಕಿ ಮತ್ತು ಕಲ್ಲುಸಕ್ಕರೆಯಿಂದ ತಯಾರಿಸಿದ ಪಾಯಸ ಪ್ರಮುಖವಾಗಿದೆ. ಈ ನೈವೇದ್ಯವನ್ನು ಶಿವ ದೇವಸ್ಥಾನದಲ್ಲಿ ಅರ್ಪಿಸಬಹುದು ಅಥವಾ ಮನೆಯಲ್ಲಿಯೇ ಅರ್ಪಿಸಿ ಪ್ರಾರ್ಥನೆ ಸಲ್ಲಿಸಬಹುದು. ಐದು ಬುಧವಾರಗಳು ಈ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿನ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗುತ್ತೆ.

ಮತ್ತಷ್ಟು ಅಧ್ಯಾತ್ಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.