ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿಬಿದ್ದಿದ್ದ ಯುವಕ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಆತ್ಮಹತ್ಯೆ
ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯ ಜತೆ ಸಿಕ್ಕಿಬಿದ್ದಿದ್ದ ಯುವಕ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ್ ಎಂದು ಗುರುತಿಸಲಾದ ಯುವಕನನ್ನು ವಶಕ್ಕೆ ಪಡೆಯಲಾಗಿತ್ತು. ಸೋಮವಾರ ಸಂಜೆ ಪೊಲೀಸರು ಕೋಳಿಕ್ಕೋಡ್‌ನಿಂದ ಗೋಕುಲ್ ಮತ್ತು ಬಾಲಕಿಯನ್ನು ವಶಕ್ಕೆ ಪಡೆದುಕೊಂಡು ನಂತರ ವಯನಾಡಿನ ಕಲ್ಪೆಟ್ಟಾ ಪೊಲೀಸ್ ಠಾಣೆಗೆ ಕರೆತಂದರು.

ತಿರುವನಂತಪುರಂ, ಏಪ್ರಿಲ್ 2: ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿಬಿದ್ದಿದ್ದ ಯುವಕ ಪೊಲೀಸ್ ಠಾಣೆ(Police Station)ಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಘಟನೆ ಕೇರಳದ ವಯನಾಡಿನ ಅಂಬಲವಯಲ್ ಪ್ರದೇಶದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ್ ಎಂದು ಗುರುತಿಸಲಾದ ಯುವಕನನ್ನು ವಶಕ್ಕೆ ಪಡೆಯಲಾಗಿತ್ತು. ಸೋಮವಾರ ಸಂಜೆ ಪೊಲೀಸರು ಕೋಳಿಕ್ಕೋಡ್‌ನಿಂದ ಗೋಕುಲ್ ಮತ್ತು ಬಾಲಕಿಯನ್ನು ವಶಕ್ಕೆ ಪಡೆದುಕೊಂಡು ನಂತರ ವಯನಾಡಿನ ಕಲ್ಪೆಟ್ಟಾ ಪೊಲೀಸ್ ಠಾಣೆಗೆ ಕರೆತಂದರು.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಗೋಕುಲ್ ಅಪ್ರಾಪ್ತ ಬಾಲಕಿಯೊಂದಿಗೆ ಪತ್ತೆಯಾಗಿದ್ದರಿಂದ ಆತನನ್ನು ವಶಕ್ಕೆ ಪಡೆಯಲಾಯಿತು. ಬಾಲಕಿಯ ಬಗ್ಗೆ ವ್ಯಕ್ತಿಯೊಬ್ಬರು ಕಾಣೆಯಾಗಿರುವ ದೂರು ನೀಡಿದ್ದರು ಎಂದು ಅಧಿಕಾರಿ ಹೇಳಿದರು.
ಕಲ್ಪೆಟ್ಟಾಗೆ ಕರೆತಂದ ಸ್ವಲ್ಪ ಸಮಯದ ನಂತರ ಬಾಲಕಿಯನ್ನು ಸಖಿಗೆ ಸ್ಥಳಾಂತರಿಸಲಾಯಿತು, ಆದರೆ ಗೋಕುಲ್‌ನನ್ನು ಠಾಣೆಯಲ್ಲಿಯೇ ಬಂಧಿಸಲಾಯಿತು. ರಾತ್ರಿಯ ಸಮಯವಾದ್ದರಿಂದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ.
ಮತ್ತಷ್ಟು ಓದಿ: ಮಗುವಾಗಿದ್ದಾಗ ಅಪಹರಣ, ತನ್ನ ಪ್ರಕರಣದ ಆರೋಪಿಗಳಿಗೆ 17 ವರ್ಷಗಳ ಬಳಿಕ ಶಿಕ್ಷೆ ಕೊಡಿಸಿದ ವಕೀಲ
ಈ ಪ್ರಕರಣದಲ್ಲಿ ಗೋಕುಲ್ ಆರೋಪಿಯಲ್ಲ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ವಿಚಾರಣೆ ಮತ್ತು ವಿವರಗಳನ್ನು ಸಂಗ್ರಹಿಸಲು ಠಾಣೆಯಲ್ಲಿ ಬಂಧಿಸಲಾಯಿತು.
ಮಂಗಳವಾರ ಮುಂಜಾನೆ ಗೋಕುಲ್ ಶೌಚಾಲಯಕ್ಕೆ ಹೋಗಿದ್ದ, ಆದರೆ, ಸ್ವಲ್ಪ ಸಮಯದ ನಂತರವೂ ಅವನು ಹಿಂತಿರುಗದಿದ್ದಾಗ, ಕಾನ್‌ಸ್ಟೆಬಲ್‌ಗಳು ಅವನನ್ನು ಹುಡುಕಲು ಹೋದರು. ನಂತರ ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಗೋಕುಲ್ ತನ್ನ ಶರ್ಟ್ ಬಳಸಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ