ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!
ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ ಪತ್ರ, ಎಲ್ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ. ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ. ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. […]
ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ ಪತ್ರ, ಎಲ್ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ.
ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ.
ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. ಕೊಡಗು ಡಿಸಿ, ಎಸ್ಪಿಗೆ ಸೇವಾ ಕೇಂದ್ರದಿಂದ ದೂರು ಸಲ್ಲಿಕೆಯಾಗಿದೆ. ಪೋಸ್ಟ್ ಮ್ಯಾನ್ ಮಹೇಶ್ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
Published On - 1:12 pm, Sat, 25 April 20