ಗದಗ: ದುಷ್ಕರ್ಮಿಗಳ ಕಿರುಕುಳದಿಂದ ಪೊಲೀಸ್ ಪೇದೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಪೊಲೀಸ್ ಕಾನಸ್ಟೇಬಲ್ ಅಜ್ಜನಗೌಡ ಪಾಟೀಲ್ ಮೃತ ದುರ್ದೈವಿ. ಪೊಲೀಸ್ ಕಾನಸ್ಟೇಬಲ್ ಅಜ್ಜನಗೌಡ ಅವರು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಕಾನಸ್ಟೇಬಲ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕಿರುಕುಳ ಕೊಟ್ಟ ಕಿರಾತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ಅಜ್ಜನಗೌಡ ಅವರು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ, ಕುಟುಂಬದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ನಾವು ಅನುಕೂಲಸ್ಥರೇ. ಯಾಕಾಗಿ ಹೀಗೆ ಮಾಡಿಕೊಂಡನೋ ಗೊತ್ತಿಲ್ಲ. ಯಾವುದೋ ಕೇಸ್ ಹಿಡಿದಿದ್ದನಂತೆ. ಅದರಿಂದ ಹೀಗೆ ಆಗಿರಬಹುದು ಎಂದು ಕಾನಸ್ಟೇಬಲ್ ಅಜ್ಜನಗೌಡ ಕುಟುಂಬಸ್ಥರು ಟಿವಿ9 ಗೆ ತಿಳಿಸಿದ್ದಾರೆ.
ಪೊಲೀಸ್ ಗೌರವದೊಂದಿಗೆ ಪೊಲೀಸ್ ಪೇದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಡಿವೈಎಸ್ಪಿ ಶಿವಾನಂದ, ಸಿಪಿಐ ರವಿಕುಮಾರ್ ಕಪ್ಪತ್ತನವರ ಸೇರಿ ನೂರಾರು ಪೊಲೀಸ್ ಇಲಾಖೆ ಸಿಬ್ಬಂದಿ ಭಾಗಿ ಕಾನಸ್ಟೇಬಲ್ ಅಜ್ಜನಗೌಡ ಅವರ ಅಂತ್ಯಕ್ರಿಯೆ ವೇಳೆ ಹಾಜರಿದ್ದರು.
ಸಾಲದ ಕಂತು ಕಟ್ಟಿಲ್ಲವೆಂದು ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ನಡುರಸ್ತೆಯಲ್ಲೇ ಬೈಕಿಗೆ ಬೆಂಕಿ ಹಚ್ಚಿ ಎಸ್ಕೇಪ್!
ಯಲಹಂಕ: ಬೈಕ್ ಸಾಲದ ಫೈನಾನ್ಸ್ ಕಂತು ಕಟ್ಟಿಲ್ಲ ಅಂತಾ ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ನಡುರಸ್ತೆಯಲ್ಲೇ ಬೈಕಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕ ತಾಲೂಕಿನ ಸುರದೇನಪುರ ಗೇಟ್ ಬಳಿ ಈ ಘಟನೆ ನಡೆದಿದೆ. ಹೊಸ ಪಲ್ಸರ್ ಬೈಕ್ ಗೆ ಬೆಂಕಿ ಹಚ್ಚಿ, ಫೈನಾನ್ಸ್ ಕಂಪನಿ ಖದೀಮರು ಪರಾರಿಯಾಗಿದ್ದಾರೆ. ಅಂದಹಾಗೆ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯ ಬೈಕಿಗೆ ಈ ದುರವಸ್ಥೆ ಒದಗಿಬಂದಿದೆ.
ದೊಡ್ಡಬಳ್ಳಾಪುರ ಮೂಲಕ ಯಲಹಂಕ ಕಡೆ ಬರ್ತಿರುವಾಗ ಬೈಕ್ ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ. ಈ ವೇಳೆ ಒಂದೇ ಕಂತಿನದು ಕಟ್ಟುವುದಾಗಿ ಹೇಳಿದ್ದಕ್ಕೆ ಇಬ್ಬರ ನಡುವೆ ಜಗಳ ಜೋರಾಗಿದೆ. ಈ ವೇಳೆ ವಸೂಲಿಗೆ ಬಂದಿದ್ದವರು ಬೆಂಕಿ ಹಚ್ಚಿ, ಎಸ್ಕೇಪ್ ಆದರು ಎಂದು ಆರೋಪಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪಲ್ಸರ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೀಗ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಬೈಕ್ ಮಾಲೀಕರು ದೂರು ನೀಡಿದ್ದಾರೆ. ಫೈನಾನ್ಸ್ ಸಿಬ್ಬಂದಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿರೋದಾಗಿ ದೂರು ನೀಡಲಾಗಿದೆ.
Also Read:
ಅಪಹೃತ ಮೇಯರ್ ಬಿಡುಗಡೆಗೆ ರಷ್ಯಾದ 9 ಸೈನಿಕರನ್ನು ಬಿಡುಗಡೆ ಮಾಡಿದ ಉಕ್ರೇನ್, ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ
Also Read:
ಧೂಳೆಬ್ಬಿಸಲು ತಯಾರಾದ Oppo K10
Published On - 1:34 pm, Thu, 17 March 22