ಗದಗ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಕುಡಕರ ಅವಾಂತರ; ಕಾಟಾಚಾರಕ್ಕೆ ಅರ್ಧಂಬರ್ಧ ಸ್ವಚ್ಛ ಮಾಡಿದ ಆಡಳಿತ ಮಂಡಳಿ

| Updated By: sandhya thejappa

Updated on: Aug 23, 2021 | 10:41 AM

ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಹೀಗಾಗಿ ಶಾಲೆ ಆಡಳಿತ ಮಂಡಳಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ಶಾಲೆಗಳನ್ನು ಸ್ಯಾನಿಟೈಸ್ ಮಾಡಬೇಕು ಅಂತ ಸರ್ಕಾರ ಕೂಡ ಸೂಚಿಸದೆ.

ಗದಗ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಕುಡಕರ ಅವಾಂತರ; ಕಾಟಾಚಾರಕ್ಕೆ ಅರ್ಧಂಬರ್ಧ ಸ್ವಚ್ಛ ಮಾಡಿದ ಆಡಳಿತ ಮಂಡಳಿ
ಗದಗ ಮುನ್ಸಿಪಲ್ ಹೈಸ್ಕೂಲ್, ಶಾಲೆ ಆವರಣದಲ್ಲಿ ಬಿದ್ದಿರುವ ಕಸಗಳು
Follow us on

ಗದಗ: ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷಗಳ ನಂತರ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ (ಆಗಸ್ಟ್ 23) ಆರಂಭವಾಗುತ್ತಿದೆ. ರಾಜ್ಯದ 5 ಜಿಲ್ಲೆಗಳು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆಯ ಬಾಗಿಲು ತೆರೆಯುತ್ತಿದೆ. ಈಗಾಗಲೇ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಜೋರಾಗಿ ನಡೆಯುತ್ತಿದೆ. ಆದರೆ ಗದಗ ಜಿಲ್ಲೆಯ ಮುನ್ಸಿಪಲ್ ಹೈಸ್ಕೂಲ್ನ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಶಾಲೆಗಳು ಬಂದ್ ಆಗಿದ್ದ ಕಾರಣ ಮಧ್ಯ ಪ್ರಿಯರು ಕುಡಿದ ಬಾಟಲಿಗಳನ್ನು ಶಾಲೆ ಆವರಣದಲ್ಲಿ ಹಾಕಿದ್ದಾರೆ. ಸಿಗರೇಟ್ ಪ್ಯಾಕ್, ಗ್ಲಾಸ್, ತಿಂಡಿ ಪೊಟ್ಟಣಗಳು ಶಾಲೆ ಆವರಣದಲ್ಲಿ ಬಿದ್ದಿವೆ. ಆದರೆ ಇಂದಿನಿಂದ ಶಾಲೆ ಆರಂಭವಾಗುತ್ತಿದ್ದರೂ ಶಾಲೆಯನ್ನು ಸ್ವಚ್ಛ ಮಾಡದೆ ಆಡಳಿತ ಮಂಡಳಿ ಬೇಜವಾಬ್ದಾರಿ ತೋರಿದೆ.

ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಹೀಗಾಗಿ ಶಾಲೆ ಆಡಳಿತ ಮಂಡಳಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ಶಾಲೆಗಳನ್ನು ಸ್ಯಾನಿಟೈಸ್ ಮಾಡಬೇಕು ಅಂತ ಸರ್ಕಾರ ಕೂಡ ಸೂಚಿಸದೆ. ಹೀಗಿದ್ದೂ ಜಿಲ್ಲೆಯ ಮುನ್ಸಿಪಲ್ ಹೈಸ್ಕೂಲ್ ಆಡಳಿತ ಮಂಡಳಿಯವರು ಬೇಜವಾಬ್ದಾರಿ ತೋರಿದ್ದಾರೆ. ಕಾಟಾಚಾರಕ್ಕೆ ಅರ್ಧಂಬರ್ಧ ಸ್ವಚ್ಛತೆ ಮಾಡಿ ಕೈತೊಳೆದಕೊಂಡಿದೆ.

ಶಿಕ್ಷಕರ ನಿರ್ಲಕ್ಷ್ಯ
ಇನ್ನು ಬೆಳಗಾವಿ ನಗರದ ವಡಗಾವಿ ಪಬ್ಲಿಕ್ ಪಿಯು ಕಾಲೇಜಿನಲ್ಲಿ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆ. ಕಾಲೇಜಿನ ಕೊಠಡಿ ಸ್ಯಾನಿಟೈಸ್ ಮಾಡದೆ ಬೇಜವಾಬ್ದಾರಿ ಮೆರೆದಿದ್ದಾರೆ. ಕಾಲೇಜು ಕೊಠಡಿಗೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಧೂಳು ಸ್ವಾಗತ ನೀಡಿದೆ. ಡೆಸ್ಕ್ಗಳು ಸ್ವಚ್ಛವಾಗದ ಕಾರಣ ವಿದ್ಯಾರ್ಥಿಗಳೇ ಬಟ್ಟೆಯಿಂದ ಸ್ವಚ್ಛಗೊಳಿಸಿಕೊಂಡಿದ್ದಾರೆ.

ಇದನ್ನೂ ಓದಿ

ಶಾಲೆ ಆರಂಭ: ಕೊರೊನಾ ಬಗ್ಗೆಯೇ ಮಕ್ಕಳಿಗೆ ಮೊದಲ ಪಾಠ; ಜಾಗೃತಿ ಮೂಡಿಸುತ್ತಿರುವ ಶಿಕ್ಷಕರು

ಶಿವಮೊಗ್ಗ: ಹದಗೆಟ್ಟಿರುವ ರಸ್ತೆಯಿಂದಲೇ ವಿಡಿಯೋ ಮಾಡಿ, ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ವಿದ್ಯಾರ್ಥಿ ಮನವಿ

(school Administration has not cleaned up the municipal high school campus in gadag)