ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯ ವಿರುದ್ಧ, ಸಚಿವ ಸಿ.ಸಿ.ಪಾಟೀಲ್ ವಗ್ದಾಳಿ

| Updated By: ವಿವೇಕ ಬಿರಾದಾರ

Updated on: Aug 20, 2022 | 5:20 PM

ವಿಪಕ್ಷ ನಾಯಕ ಸಿದ್ದರಾಮಯ್ಯ ಈಗ ಸುಳ್ಳು ಹೇಳುತ್ತಿದ್ದಾರೆ. ನಿನ್ನೆ ಹೇಳಿದ್ದಾರೆ, ಇವತ್ತು ಹಾಗೇ ಹೇಳಿಲ್ಲ ಅಂದ್ರೆ ಏನು ಅರ್ಥ? ಎಂದು ಗದಗದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯ ವಿರುದ್ಧ, ಸಚಿವ ಸಿ.ಸಿ.ಪಾಟೀಲ್ ವಗ್ದಾಳಿ
ಸಚಿವ ಸಿ ಸಿ ಪಾಟೀಲ್​
Follow us on

ಗದಗ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಈಗ ಸುಳ್ಳು ಹೇಳುತ್ತಿದ್ದಾರೆ. ನಿನ್ನೆ ಹೇಳಿದ್ದಾರೆ, ಇವತ್ತು ಹಾಗೇ ಹೇಳಿಲ್ಲ ಅಂದ್ರೆ ಏನು ಅರ್ಥ? ಎಂದು ಗದಗದಲ್ಲಿ (Gadag) ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ (CC Patil) ಪ್ರಶ್ನಿಸಿದ್ದಾರೆ. ಲಿಂಗಾಯತ ಧರ್ಮ ವಿಭಜನೆ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ತದ್ವಿರುದ್ಧವಾಗಿ ಹೇಳಿಕೆ ಕೊಡುತ್ತಿದ್ದಾರೆ. ರಾಜಕೀಯ ನಾಯಕರು ದ್ವಂದ್ವದಲ್ಲಿ ಇರಬಾರದು ಎಂದು ಎಚ್ಚರಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪರ ಹೆಸರನ್ನು ತಂದಿದ್ದಾರೆ. ಅದಕ್ಕೆ ಶಾಮನೂರು ಶಿವಶಂಕರಪ್ಪನವರೇ ಪ್ರತಿಕ್ರಿಯೆ ನೀಡುತ್ತಾರೆ. ಸಿದ್ದರಾಮಯ್ಯ ಅವರು ಯಾಕೇ ವಿಚಲಿತರಾಗುತ್ತಾರೆ ಅಂದರೇ, ಡಿ.ಕೆ ಶಿವಕುಮಾರ ಸಿಎಂ ಆಗಲು ಸಹಕಾರ ಇರುತ್ತೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ​​ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ ವಿಚಾರವಾಗಿ ಮಾತನಾಡಿದ ಅವರು ಪವರ್​ಫುಲ್​ ಪೋಸ್ಟ್ ಕೊಟ್ಟಿದ್ದಕ್ಕೆ ಕಾಂಗ್ರೆಸ್​ಗೆ ಸಂಕಟ ಆಗಿದೆ. ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಒಡೆದ ವಿಚಾರವಾಗಿ ಮಾತನಾಡಿದ ಅವರು ನಾನು ಅತ್ಯಂತ ನೋವಿನಿಂದ ಹೇಳ್ತೀನಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದನ್ನು ತೀವ್ರವಾಗಿ ಖಂಡಿಸಿದರು.

ಆ ಮೊಟ್ಟೆಯನ್ನು ನಮ್ಮ ಪಕ್ಷದವರು ಎಸೆದರು, ತಾವಾಗಿಯೇ ಒಗೆಸಿಕೊಂಡರು ಅದು ತನಿಖೆಯಿಂದ ಹೊರ ಬರಲಿ. ವಿರೋಧ ಪಕ್ಷದ ನಾಯಕರಿಗೆ ಭದ್ರತೆ ನೀಡುವಲ್ಲಿ ನಮ್ಮ ಸರ್ಕಾರ ಲೋಪ ಮಾಡಿಲ್ಲ. ಮೊಟ್ಟೆ ಎಸೆದಿರುವದನ್ನು ಕಾಂಗ್ರೆಸ್​ನವರು ಯಾವ ರೀತಿ ರಾಜಕೀಯ ಮಾಡುತ್ತಾ ಇದ್ದಾರೆ. ಏನು ಕಾಶ್ಮೀರದಲ್ಲಿ ವೀರ ಯೋಧರಿಗೆ ಪಾಕಿಸ್ತಾನ ಶಲ್ ಬಂದು ಪಡೆದು ಸಾಯಿತ್ತಾರಲ್ಲಾ, ಒಂದು ಮೊಟ್ಟೆಗೆ ಇಷ್ಟು ಹೆದರಿದರೇ, ಪಕ್ಕದ ಕೇರಳದಿಂದ ಬಿಡುಗಡೆ ಮಾಡಿ ಸಾವಿರಾರು ಜನರನ್ನು ಬಿಟ್ಟಿದ್ದಾರಲ್ಲಾ.? ಎಂದು ಪ್ರಶ್ನಿಸಿದರು.

ನೀವು ಮುಖ್ಯ ಮಂತ್ರಿ ಇದ್ದಾಗ ಎಷ್ಟು ಹಿಂದು ಕಾರ್ಯಕರ್ತರ ಹತ್ಯೆ ಆಯ್ತು ಅವಾಗ. ಬರೀ ಒಂದೊ ಮೊಟ್ಟೆಗೆ ಹೆದರುತ್ತಿದ್ದರಿ, ತತ್ತಿ ಮೇಲೆ‌ ರಾಜಕೀಯ ಮಾಡುವ ಪರಿಸ್ಥಿತಿ ಕಾಂಗ್ರೆಸ್ ಬಂದಿದ್ದು ಸೂಚನಿಯ. ಕೊಡಗಿನಲ್ಲಿ ವಿಶೇಷವಾಗಿ ಟಿಪ್ಪು ಸುಲ್ತಾನ್ ಬಗ್ಗೆ ಅಪಾರವಾದ ವಿರೋಧವಿದೆ. ಸಾರ್ವಕರ್ ಹಾಗೂ ಟಿಪ್ಪು ವಿರೋಧ ನಡೆಯುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಕಾನೂನು ಸುವ್ಯವಸ್ಥೆ ಹಾಳಾಗಲಿ ಎನ್ನುವ ಉದ್ದೇಶದಿಂದಲೇ ಹೋಗಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಜವಾಬ್ದಾರಿಯುಯ ನಾಯಕರಾದವರು ಪ್ರಚಾರಕ್ಕಾಗಿ ಏನು ಮಾಡಬಾರದು. ವೀರ ಸಾರ್ವಕರ್ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಪ್ರಮುಖರು ಕೀಳು ಮಟ್ಟದ ಭಾಷೆಯಲ್ಲಿ ಪ್ರತಿನಿತ್ಯ ಮಾತನಾಡ್ತಾರೆ. ದೇಶಕ್ಕಾಗಿ ಹೋರಾಟ ಮಾಡದ ತ್ಯಾಗ ಬಲಿದಾನ ಮಾಡಿದ ಕುಟುಂಬಗಳು ನೆನಪಿಗೆ ಬರೋದಿಲ್ಲ. ದೇಶಪ್ರೇಮಿ ಅಂತಾ ಕರೆಯದಿದ್ದರೂ ತೊಂದರೆ ಇಲ್ಲಾ, ದೇಶ ದ್ರೋಹಿ ಅಂತಾ ಕರೆದರೆ ಅದು ಇತಿಹಾಸಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಜೈಲು ಸೇರಿದವರನ್ನ ಮಹಾನ್ ನಾಯಕರು ಅಂತೀರಿ. 28 ವರ್ಷ ಜೈಲಿನಲ್ಲಿ ಕಳೆದ ಮಹಾನ್ ನಾಯಕನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಾಂಗ್ರೆಸ್ ಸ್ಪಷ್ಟ ಪಡಿಸಿಲಿ. ತಿಹಾರ್ ಜೈಲಿನಿಂದ ಹೊರ ಬಂದಾಗ ಯಾವ ರೀತಿ ಮೆರವಣಿಗೆ ಮಾಡಿದ್ದೀರಿ. ಸಿದ್ದರಾಮಯ್ಯ ನೆನಪಿಸಿಕೊಳ್ಳಬೇಕು. ಇತಿಹಾಸ ಮೆಲಕು ಹಾಕಿ ಎಂದು ಚಾಟಿ ಬೀಸಿದರು.

ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿದ್ದೀರಿ, ಸಾಕ್ಷಿ ಚಿತ್ರ ಬಿಡುಗಡೆ ಮಾಡಿದ ಇಂದಿರಾ ಗಾಂಧಿ ಬಗ್ಗೆ ಏನ್ ಹೇಳುತ್ತೀರಿ. ಇಲೆಕ್ಟ್ರಾನಿಕ್ ಮೀಡಿಯಾ ಇದೆ. ಕೇಳುವವರಿದ್ದಾರೆ ಅಂತಾ ಬಾಯಿಗೆ ಬಂದಂತೆ ಮಾತಾಡೋದಲ್ಲ ಎಂದು ಕಿಡಿಕಾರಿದರು.

Published On - 5:20 pm, Sat, 20 August 22