ಮೃತ ತಮ್ಮನ ನೋಡಲು ಬಂದ ಅಕ್ಕನಿಗೆ ಹೃದಯಾಘಾತ: ಸಾವಿನಲ್ಲಿ ಬಂದಾದ ಒಡಹುಟ್ಟಿದವರು

| Updated By: ಆಯೇಷಾ ಬಾನು

Updated on: Jul 19, 2022 | 10:51 PM

ಈರಪ್ಪನವರ ಅಂತ್ಯ ಸಂಸ್ಕಾರ ನರಗುಂದ ಪಟ್ಟಣದ ರುದ್ರಭೂಮಿಯಲ್ಲಿ ನಡೆದಿದ್ದು ಸಹೋದರಿ ಬಾಳವ್ವ ಸಿದ್ನಾಳ ಶವವನ್ನು ಕುಟುಂಬಸ್ಥರು ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ.

ಮೃತ ತಮ್ಮನ ನೋಡಲು ಬಂದ ಅಕ್ಕನಿಗೆ ಹೃದಯಾಘಾತ: ಸಾವಿನಲ್ಲಿ ಬಂದಾದ ಒಡಹುಟ್ಟಿದವರು
ಈರಪ್ಪ ಬೆಳವಣಿಕಿ, ಬಾಳವ್ವ ಸಿದ್ನಾಳ
Follow us on

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಒಡಹುಟ್ಟಿದವರು ಸಾವಿನಲ್ಲೂ ಒಂದಾಗಿದ್ದಾರೆ. ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಾಗ ಅಕ್ಕನಿಗೆ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದಾರೆ.

ನರಗುಂದ ಪಟ್ಟಣದ ಕಸಬಾ ಓಣಿ ನಿವಾಸಿಯಾದ ಈರಪ್ಪ ಬೆಳವಣಿಕಿ (65) ಅವರಿಗೆ ಅನಾರೋಗ್ಯ ಹಿನ್ನಲೆ ಮೃತಪಟ್ಟಿದ್ದರು. ಹೀಗಾಗಿ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆದಿತ್ತು. ತಮ್ಮನ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಸಹೋದರಿ ಬಾಳವ್ವ ಸಿದ್ನಾಳ (80) ತಮ್ಮನ್ನ ಶವ ನೋಡಲು ಆಗಮಿಸಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಮ್ಮ ಈರಪ್ಪನವರ ಅಂತ್ಯ ಸಂಸ್ಕಾರ ನರಗುಂದ ಪಟ್ಟಣದ ರುದ್ರಭೂಮಿಯಲ್ಲಿ ನಡೆದಿದ್ದು ಸಹೋದರಿ ಬಾಳವ್ವ ಸಿದ್ನಾಳ ಶವವನ್ನು ಕುಟುಂಬಸ್ಥರು ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮಕ್ಕೆ ಶವ ತೆಗೆದುಕೊಂಡು ಹೋಗಲಾಗಿದೆ. ಅಕ್ಕ ತಮ್ಮ ಸಾವು ಕಂಡು ನರಗುಂದ ಪಟ್ಟಣದ ಜನರು ಭಾವುಕರಾಗಿದ್ದಾರೆ.

ಕುರಿಗಾಹಿ ಮೇಲೆ ಚಿರತೆ ದಾಳಿ

ವಿಜಯನಗರ: ಕುರಿಗಾಹಿ ಯುವಕನ ಮೇಲೆ ಚಿರತೆ ದಾಳಿ ಮಾಡಿದ್ದು, ಯುವಕ ಕೈಯಲ್ಲಿದ್ದ ಕೊಡಲಿಯಿಂದ ರಕ್ಷಣೆ ಪಡೆದುಕೊಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕೂಗಾರ್ ಕರಿಬಸಪ್ಪ (21) ನಿಗೆ ಗಾಯಗಳಾಗಿವೆ.

ಕುರಿ ಮೇಯಿಸುವಾಗ ಇದ್ದಕ್ಕಿದ್ದಂತೆ ಚಿರತೆ ದಾಳಿ ಮಾಡಿದೆ. ಕೂಡಲೆ ಕುರಿಗಾಹಿ ಕೊಡಲಿಯನ್ನ ಚಿರತೆ ಕಡೆ ಬಿಸಿದ ಹಿನ್ನೆಲೆ ಬಚಾವ್ ಆಗಿದ್ದಾನೆ. ಗಾಯಗೊಂಡ ಕುರಿಗಾಹಿಗೆ ತೆಲಗಿ ಹಾಗೂ ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹಲವಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ‘

ದರೋಡೆ ಹೊಂಚು ಹಾಕಿದ್ದ ಆರೋಪಿಗಳ ಬಂಧನ

ರಾಮನಗರ: ಚನ್ನಪಟ್ಟಣ ತಾಲೂಕಿನ ಮುಳ್ಳಿಕೆರೆ ಗ್ರಾಮದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಗಳನ್ನು ಅಕ್ಕೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯರಾಮು, ಅಶೋಕ್, ಮಂಜು, ಅರುಣ್ ಕುಮಾರ್, ಸುರೇಶ್, ಕೆಂಪೇಗೌಡನನ್ನು ಬಂಧಿತ ಆರೋಪಿಗಳು. ಬಂಧಿತರಿಂದ ಲಾಂಗ್, ಡ್ಯಾಗರ್​, ದೊಣ್ಣೆ, ಖಾರದ ಪುಡಿ ಪ್ಯಾಕೆಟ್, ಒಂದು ಕಾರನ್ನು ಪೊಲೀಸ್​ರು ಜಪ್ತಿ ಮಾಡಿದ್ದಾರೆ.

Published On - 9:10 pm, Tue, 19 July 22