ಗದಗ, ಅ.23: ಆ ಹುಡಗಿ ಬಡತನದ ಬೆಂಕಿಯಲ್ಲಿ ಅರಳಿ ರಾಷ್ಟ್ರಮಟ್ಟದ ಸೈಕ್ಲಿಂಗ್ ನಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. ಆಕೆ ಸಾಧನೆ ಗುರ್ತಿಸಿ ಖೇಲೋ ಇಂಡಿಯಾ ಕ್ಯಾಂಪ್ ಗೆ ಆಯ್ಕೆಯಾಗಿದ್ದಾಳೆ (Gadag cyclist). ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಈಗ ಸನ್ನದ್ಧಳಾಗಿದ್ದಾಳೆ. ಆದರೆ, ಈಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅಗತ್ಯವಿರುವ ಸೈಕಲ್ ಗಾಗಿ ಪರದಾಡುತ್ತಿದ್ದಳು. ಈ ಹುಡುಗಿ ಕನಸು ಈಗ ಟಿವಿ9 ಈಡೇರಿಸಿದೆ (TV9 Kannada). ಅಂದಿನ ಸಿಎಂ ಬಬಸವರಾಜ ಬೊಮ್ಮಾಯಿ (Basavaraj Bommai) ಟಿವಿ9 ಸ್ಟುಡಿಯೋದಲ್ಲಿ ನೀಡಿದ ಭರವಸೆಯಂತೆ ಸೈಕಲ್ ಕೊಡಸಿದ್ದಾರೆ. ಈಗ ಈಕೆ ಏಷಿಯನ್ MTB ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 30 ರಾಷ್ಟ್ರಗಳ ಸೈಕ್ಲಿಸ್ಟ್ ಗಳ ಜೊತೆ ಸೆಣಸಾಡಲು ಸಜ್ಜಾಗಿದ್ದಾಳೆ. ನನ್ನ ಈ ಸಾಧನೆಗೆ ಟಿವಿ9 ಆಸರೆಯೇ ಕಾರಣ ಅಂತ ನೆನೆದಿದ್ದಾಳೆ. ಏಷಿಯನ್ ಚಾಂಪಿಯನ್ ಶಿಪ್ನಲ್ಲಿ ಭಾರತ ವಿಜಯ ಪತಾಕೆ ಹಾರಿಸಲಿ ಅಂತ ಕರುನಾಡಿನ ಜನರು ಹಾರೈಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ನಿವಾಸಿ ಪವಿತ್ರಾ ಕುರ್ತಕೋಟಿ ಎಂಬ ಹುಡುಗಿ ಬಡತದ ಬೆಂಕಿಯಲ್ಲಿ ಅರಳಿದ ಪ್ರತಿಭೆ. ಕಡುಬಡತನದ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾಳ ತಂದೆ ಕೂಲಿ ಕೆಲಸ ಮಾಡಿದ್ರೆ, ತಾಯಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಏನಾದರೂ ಸಾಧನೆ ಮಾಡಬೇಕು ಅಂತಾ 16 ವರ್ಷದ ಪವಿತ್ರಾ ನಿರಂತರ ಪರಿಶ್ರಮ ಪಟ್ಟಿದ್ದಾಳೆ. ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. 2021ರಲ್ಲಿ ಮುದ್ರಣ ಕಾಶಿ ಗದಗ ಜಿಲ್ಲೆಯಿಂದ ಪವಿತ್ರಾ ಖೋಲೋ ಇಂಡಿಯಾ ಕ್ಯಾಂಪ್ ಗೆ ಆಯ್ಕೆಯಾಗಿದ್ಲು. ಆದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಹೈಕ್ವಾಲಿಟಿ ಸೈಕಲ್ ಇಲ್ಲದೇ ಪರದಾಡುತ್ತಿದ್ಲು. ಹಣ ಕೊಟ್ಟು ಸೈಕಲ್ ಖರೀದಿ ಮಾಡುವ ಸ್ಥಿತಿ ಇರಲಿಲ್ಲ. ಬಡತನ ಅನ್ನೋದು ಖೇಲೋ ಇಂಡಿಯಾ ಕ್ಯಾಂಪ್ ಹೋಗಲು ಅಡ್ಡಿಯಾಗಿತ್ತು. ಆಗ ಈ ಸಾಧಕಿಯ ಬಗ್ಗೆ ತರಬೇತುದಾರ ಅನಂತ ದೇಸಾಯಿ ಟಿವಿ9 ಗಮನಕ್ಕೆ ತಂದ್ರು. ಟಿವಿ9 ಬಾಲಕಿಯ ಪ್ರತಿಭೆ ಗುರ್ತಿಸಿ ಸೆಪ್ಟೆಂಬರ್ 9 ರಂದು ಟಿವಿ9 ಸಿಎಂ ಸ್ಪಿಕಿಂಗ್ ವಿಶೇಷ ಕಾರ್ಯಕ್ರಮದಲ್ಲಿ ಪ್ರವಿತ್ರಾ ಕುರ್ತಕೋಟಿ ಹುಡುಗಿಯ ಸಂಕಷ್ಟದ ಬಗ್ಗೆ ವಿಸ್ತೃತ ವರದಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿತ್ತು.
ಆಗ ತಕ್ಷಣ ಟಿವಿ9 ಸ್ಟುಡಿಯೋದಲ್ಲೇ ಬಾಲಕಿ ಪವಿತ್ರಾಗೆ ಸುಮಾರು 8ಲಕ್ಷ ಮೌಲ್ಯದ ಸೈಕಲ್ ಕೊಡಿಸುವುದಾಗಿ ಸಿಎಂ ಘೋಷಣೆ ಮಾಡಿದ್ರು. ಕ್ರೀಡಾ ಇಲಾಖೆ ಮೂಲಕ ಸೈಕಲ್ ಕೊಡಿಸುವ ಮೂಲಕ ಗದಗ ಬಾಲಕಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗದಗ, ಕರ್ನಾಟಕ ಕೀರ್ತಿ ಪತಾಕೆ ಹಾರಿಸಲು ಎಲ್ಲಾ ರೀತಿ ಸಹಾಯ ಮಾಡುವುದಾಗಿ ಸಿಎಂ ಹೇಳಿದ್ರು. ಹೇಳಿದಂತೆ ಪವಿತ್ರಾ ಕುರ್ತಕೋಟಿಗೆ ಅತ್ಯಾಧುನಿಕ ಸೈಕಲ್ ನೀಡಲಾಗಿತ್ತು. ಅಂದು ಟಿವಿ9 ಹಾಗೂ ಸರ್ಕಾರ ಸಹಾಯಕ್ಕೆ ಕೃತಜ್ನತೆ ಸಲ್ಲಿಸಿದ ಪವಿತ್ರಾ ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸ್ತಿನಿ ಎಂದಿದ್ಲು. ಈ ಏಷಿಯನ್ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ರಾಜ್ಯದ ಏಕೈಕ ಹುಡಗಿಯಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಈ ಸಾಧನೆಗೆ ಟಿವಿ9 ಆಸರೆಯೇ ಕಾರಣ ಅಂತ ಅಂತರಾಷ್ಟ್ರೀಯ ಸೈಕ್ಲಿಸ್ಟ್ ಪವಿತ್ರಾ ಕುರ್ತಕೊಟಿ ಟಿವಿ9 ಹಾಗೂ ಸರ್ಕಾರದ ಸಹಾಯ ನೆನೆದಿದ್ದಾಳೆ. ಏಷಿಯನ್ ಶಿಪ್ ನಲ್ಲೂ ಭಾರತ ಕೀರ್ತಿ ಪತಾಕೆ ಹಾರಿಸ್ತೆನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: ಖೇಲೋ ಇಂಡಿಯಾದಲ್ಲಿ ಮಿಂಚಲು ಬಡತನ ಅಡ್ಡಿ: ಬಾಲಕಿಗೆ ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ
ಇದೇ ತಿಂಗಳ 26 ರಿಂದ 29ರವರೆಗೆ ಕೇರಳ ರಾಜ್ಯದ ತ್ರೀವೆಂದರಂನ ಮೊನ್ನುಮುಡಿ ಹಿಲ್ಸ್ ನಲ್ಲಿ ನಡೆಯಲಿರುವ ಏಷಿಯನ್ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾಳೆ. ಏಶಿಯನ್ ಶಿಪ್ ಆಯ್ಕೆಯಾದ ರಾಜ್ಯದ ಏಕೈಕ ಹುಡುಗಿಯಾಗಿ ಮಿಂಚಿದ್ದಾಳೆ. ಈ ಏಷಿಯನ್ ಶಿಪ್ ನಲ್ಲಿ 30 ರಾಷ್ಟ್ರಗಳ ಸೈಕ್ಲಿಸ್ಟ್ ಗಳು ಭಾಗಿಯಾಗಲಿದ್ದಾರೆ. 30 ರಾಷ್ಟ್ರಗಳ ಸೈಕ್ಲಿಸ್ಟ್ ಗಳ ಜೊತೆ ಕರುನಾಡಿನ ಬೆಡಗಿ ಪವಿತ್ರಾ ಸೆಣಸಾಡಲು ಸಜ್ಜಾಗಿದ್ದಾಳೆ. ಎಂಟಿಬಿ ಸೈಕ್ಲಿಂಗ್ ಅಂದ್ರೆ ದುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತದೆ. ಜೀವ ಕೈಯಲ್ಲಿ ಹಿಡಿದುಕೊಂಡು ಹೋರಾಟ ಮಾಡಬೇಕು. ಕರುನಾಡಿನ ಬೆಡಗಿ ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಧ್ವಜ ಹಾರಿಸಲು ಮೊನ್ನುಮುಡಿ ಹಿಲ್ಸ್ ನಲ್ಲಿ ಈಗ ಕಸರತ್ತು ನಡೆಸಿದ್ದಾಳೆ. ಏಷಿಯನ್ ಶಿಪ್ ಎಂಟಿಬಿ ಸೈಕ್ಲಿಂಗ್ ನ ಆಯ್ಕೆಯಲ್ಲಿ ಭಾರತ ದೇಶದ ಸೈಕ್ಲಿಸ್ಟ್ ಗಳಲ್ಲಿ ತೀವ್ರ ಪೈಪೊಟಿ ಇತ್ತು. ಈಗಾಗಲೇ ಖೇಲೋ ಇಂಡಿಯಾ ಕ್ಯಾಂಪ್ ಗೆ ಆಯ್ಕೆಯಾಗಿದ್ದ ಪವಿತ್ರಾ. ಕಷ್ಟಪಟ್ಟು ಅಭ್ಯಾಸ ಮಾಡಿದ್ದಾಳೆ. ಹೀಗಾಗಿ ಏಷಿಯನ್ ಶಿಪ್ ಎಂಟಿಬಿ ಸೈಕ್ಲಿಂಗ್ ಗೆ ಆಯ್ಕೆಯಾಗಿದ್ದಾಳೆ. ಹೀಗಾಗಿ ಗದಗ ಜಿಲ್ಲೆ ಹಾಗೂ ರಾಜ್ಯದ ಸೈಕ್ಲಿಸ್ಟ್ ಗಳ ವಲಯದಲ್ಲಿ ಪವಿತ್ರಾ ಆಯ್ಕೆಯಾಗಿದ್ದು, ಸಂತಸ ಮೂಡಿಸಿದೆ.
ಪವಿತ್ರಾ ಆಯ್ಕೆ ಬಗ್ಗೆ ತರಬೇತುದಾರ ಅನಂತ ದೇಸಾಯಿ ಮಾತನಾಡಿದ್ದು, ಟಿವಿ9 ಸಿಎಂ ಸ್ಪಿಕಿಂಗ್ ವಿಶೇಷ ಕಾರ್ಯಕ್ರಮ ಆರಂಭ ಆಗುತ್ತಿದ್ದಂತೆ ಪವಿತ್ರಾ ಕುರ್ತಕೋಟಿ ತಂದೆ, ತಾಯಿ, ಸಹೋದರ ಹಾಗೂ ಸೈಕ್ಲಿಸ್ಟ್ ಸಹೋದ್ಯೋಗಿಗಳು ಸಮೂಹಿಕವಾಗಿ ಟಿವಿ9 ವಿಕ್ಷಣೆ ಮಾಡ್ತಾಯಿದ್ರು. ಸೈಕಲ್ ಕೊಡಿಸಿ ಅನ್ನೋದ ಪವಿತ್ರಾ ಮನವಿಗೆ ಸಿಎಂ ಏನ್ ಹೇಳ್ತಾರೋ ಅನ್ನೋ ಕುತೂಹಲದಿಂದ ಇಡೀ ಕುಟುಂಬ ಟಿವಿ9 ವೀಕ್ಷಣೆ ಮಾಡಿದ್ರು. ನಮ್ಮ ಮಗಳಿಗೆ ಸೈಕಲ್ ಕೊಡಿಸಿದ್ರೆ ಸಾಕಪ್ಪಾ ಅಂತ ಮನಸ್ಸಿನಲ್ಲಿ ತಾಯಿ ಚಡಪಡಿಕೆ. ಸಿಎಂ ಏನ್ ಹೇಳ್ತಾರೋ ಅನ್ನೋ ಢವಢವ. ಆದ್ರೆ, ಯಾವಾಗ ಟಿವಿ9ನಲ್ಲಿ ಪವಿತ್ರಾಳ ಬಡತನ, ಸಂಕಷ್ಟ ಸ್ಥಿತಿ ಟಿವಿ9 ಎಳೆ ಎಳೆಯಾಗಿ ಬಿತ್ತರಿಸಿದನ್ನು ನೋಡಿದ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಹಿಂದೂ ಮುಂದೂ ನೋಡದೇ ಈ ಬಡ ಬಾಲಕಿಯ ಸಾಧನೆಗೆ ಸರ್ಕಾರವೂ ಸಾಥ್ ನೀಡಿದೆ. ಈ ಹುಡಗಿಗೆ 8ಲಕ್ಷ ಮೌಲ್ಯದ ಸೈಕಲ್ ಕೊಡಿಸುವುದಾಗಿ ಟಿವಿ9 ಸ್ಟುಡಿಯೋದಲ್ಲಿ ಘೋಷಣೆ ಮಾಡಿದ್ರು.
ಅಷ್ಟೇ ಅಲ್ಲ ಆ ಬಡ ಸೈಕ್ಲಿಸ್ಟ್ ಕುಟುಂಬಕ್ಕೆ ಏನೆಲ್ಲಾ ಸಹಾಯ, ಸಹಕಾರ ಬೇಕೋ ಸರ್ಕಾರ ಎಲ್ಲ ನೀಡುವುದಾಗಿ ಹೇಳಿದ್ರು. ದೆಹಲಿಯ ಖೇಲೋ ಇಂಡಿಯಾ ಕ್ಯಾಂಪ್ ಗೆ ಹೋಗಲು ಎಲ್ಲ ವ್ಯವಸ್ಥೆ ಮಾಡುವ ಭರವಸೆ ಸಿಎಂ ನೀಡುತ್ತಿದ್ದಂತೆ ಪವಿತ್ರಾಳ ಕುಟುಂಬದಲ್ಲಿ ಎಲ್ಲಿಲ್ಲ ಸಂತಸ, ಸಂಭ್ರಮ. ಪವಿತ್ರಾ ತಾಯಿ ರೇಣುಕಾ ಕೂಡ ಟಿವಿ9 ಹಾಗೂ ಸಿಎಂ ಅವ್ರಿಗೆ ಅಭಿನಂದನೆ ಸಲ್ಲಿಸಿದ್ರು. ನಮ್ಮ ಬಡತನ, ಮಗಳ ಸಾಧನೆ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವ್ರು ಮಗಳಿಗೆ ಸೈಕಲ್ ಕೊಡಿಸುವುದಾಗಿ ಹೇಳಿದ್ದಾರೆ. ಟಿವಿ9 ನನ್ನ ಮಗಳ ಭವಿಷ್ಯದಲ್ಲಿ ಬೆಳಕಾಗಲಿ ಎಂದ್ರು. ಸರ್ಕಾರ, ಸಿಎಂ ಸಾಹೇಬ್ರು ನನ್ನ ಆಸೆ ಈಡೇರಿಸಿದ್ದಾರೆ. ಹೀಗಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗದಗ, ಕರ್ನಾಟಕದ ಕೀರ್ತಿ ತರುವುದಾಗಿ ಅಂದು ಪವಿತ್ರಾ ಶಪಥ ಮಾಡಿದ್ಲು. ಅದರಂತೆ ಈಗ ಶ್ರಮಪಟ್ಟು ಏಷಿಯನ್ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ ಅಂತ ತರಬೇತುದಾರ ಸೈಕ್ಲಿಸ್ಟ್ ಪವಿತ್ರಾ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಗದಗ ಹುಡಗಿ ಅಂತರಾಷ್ಟ್ರ ಮಟ್ಟದ ಏಷಿಯನ್ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಕ್ಕೆ ಗದಗ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಗದಗಿನ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಮಾಡಿದ್ದು, ಸಂತಸ ತಂದಿದೆ. ಏಷಿಯನ್ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲೂ ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ ಅಂತ ಶುಭಹಾರಿಸಿದ್ದಾರೆ. ಕ್ರೀಡಾ ಇಲಾಖೆ ಉಪನಿರ್ದೇಶಕ ಶರಣು ಗೋಗೆರಿ ಸೇರಿದಂತೆ ತರಬೇತುದಾರರು, ಸೈಕ್ಲಿಸ್ಟ್ ಗಳು, ಅಭಿಮಾನಿಗಳು ಗದಗ ಹುಡಗಿ ಏಷಿಯನ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದು ಬರಲಿ ಅಂತ ಹಾರೈಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ