ಬೆಳೆ ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್​: ಇಬ್ಬರು ವಂಚಕರು ಜೈಲುಪಾಲು

|

Updated on: Jan 18, 2020 | 12:28 PM

ಗದಗ: ನಂಬಿದ್ದ ಬೆಳೆ ಕೈಕೊಡ್ತು.. ಕನಸುಗಳೂ ನುಚ್ಚು ನೂರಾಯ್ತು.. ಮಾಡಿದ್ದ ಸಾಲವೂ ಹಾಗೆ ಉಳಿದುಬಿಡ್ತು. ಇಂತಹ ಟೈಮ್​ನಲ್ಲಿ ಸರ್ಕಾರ ಸಹಾಯ ಮಾಡುತ್ತೆ ಅಂತಾ ಇವರೆಲ್ಲಾ ಅಂದುಕೊಂಡಿದ್ರು. ಇವರ ಊಹೆಯಂತೆ ಸರ್ಕಾರವೂ ಸಹಾಯದನ ರಿಲೀಸ್ ಮಾಡಿತ್ತು. ಆದ್ರೆ, ಆ ಹಣ ಸೇರಿದ್ದು ಮಾತ್ರ ಬೇರೆಯವರಿಗೆ. ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್! ಮುಂಡರಗಿ ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲೂ ಭಾರಿ ಗೋಲ್​ಮಾಲ್ ಆಗಿದೆ. ಕಂದಾಯ ಇಲಾಖೆ ಸಿಬ್ಬಂದಿ ರೈತರ ಹೆಸರಿಗೆ ಬಂದ ಪರಿಹಾರ ಹಣವನ್ನ ಬೇರೆಯವರ ಹೆಸರಿಗೆ ಹಾಕಿ‌ ಲೂಟಿ […]

ಬೆಳೆ ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್​: ಇಬ್ಬರು ವಂಚಕರು ಜೈಲುಪಾಲು
Follow us on

ಗದಗ: ನಂಬಿದ್ದ ಬೆಳೆ ಕೈಕೊಡ್ತು.. ಕನಸುಗಳೂ ನುಚ್ಚು ನೂರಾಯ್ತು.. ಮಾಡಿದ್ದ ಸಾಲವೂ ಹಾಗೆ ಉಳಿದುಬಿಡ್ತು. ಇಂತಹ ಟೈಮ್​ನಲ್ಲಿ ಸರ್ಕಾರ ಸಹಾಯ ಮಾಡುತ್ತೆ ಅಂತಾ ಇವರೆಲ್ಲಾ ಅಂದುಕೊಂಡಿದ್ರು. ಇವರ ಊಹೆಯಂತೆ ಸರ್ಕಾರವೂ ಸಹಾಯದನ ರಿಲೀಸ್ ಮಾಡಿತ್ತು. ಆದ್ರೆ, ಆ ಹಣ ಸೇರಿದ್ದು ಮಾತ್ರ ಬೇರೆಯವರಿಗೆ.

ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್!
ಮುಂಡರಗಿ ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲೂ ಭಾರಿ ಗೋಲ್​ಮಾಲ್ ಆಗಿದೆ. ಕಂದಾಯ ಇಲಾಖೆ ಸಿಬ್ಬಂದಿ ರೈತರ ಹೆಸರಿಗೆ ಬಂದ ಪರಿಹಾರ ಹಣವನ್ನ ಬೇರೆಯವರ ಹೆಸರಿಗೆ ಹಾಕಿ‌ ಲೂಟಿ ಮಾಡಿದ್ದಾರೆ. ಮಲ್ಲಿಕಾರ್ಜುನಪುರ ಗ್ರಾಮದ ಮಂಜುನಾಥ ಮಾಲಿಪಾಟೀಲ‌ ಅನ್ನೋನು ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ‌ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದಾನೆ. ಜೊತೆಗೆ ವೆಂಕಟಾಪುರ ಗ್ರಾಮದ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ ಹಲಗೇರಿ‌ ಜೊತೆಗೂಡಿ ಡಾಟಾ ಎಂಟ್ರಿ ಕೆಲಸವನ್ನೂ ಸಹ ಮಾಡ್ತಿದ್ದ.

ಹಿಂಗಾರು ಬೆಳೆ ಪರಿಹಾರದಲ್ಲಿ ವಂಚನೆ:
ಡಾಟಾ ಎಂಟ್ರಿ ಕೆಲಸ ಮಾಡ್ತಿರುವಾಗ್ಲೇ, ಹೇಗೋ ಗ್ರಾಮ ಲೆಕ್ಕಾಧಿಕಾರಿಯ ಲಾಗಿನ್ ಮತ್ತು‌ ಪಾಸ್ ವರ್ಡ್ ಕದ್ದಿದ್ದಾನೆ. ಬಳಿಕ ಅದೇ ಗ್ರಾಮದ ತನ್ನ ಸ್ನೇಹಿತ ಮಲ್ಲಿಕಾರ್ಜುನ ಸಂಶಿ ಎಂಬಾತನ ಜೊತೆಗೂಡಿ ಮಾಡಬಾರದ ಕೆಲಸ ಮಾಡಿದ್ದಾನೆ. ಅಂದ್ರೆ, ಇಬ್ಬರು ಸೇರಿಕೊಂಡು 2018-19 ನೇ ಸಾಲಿನಲ್ಲಿ ವೆಂಕಟಾಪುರ ಗ್ರಾಮದ ಜಮೀನಿಗೆ ಸಂಬಂಧಿಸಿದ ಹಿಂಗಾರು ಬೆಳೆ ಪರಿಹಾರವನ್ನು ನುಂಗಿ ನೀರು ಕುಡಿದಿದ್ದಾರೆ. ಹಣವನ್ನ ಅರ್ಹ ಫಲಾನುಭವಿಗಳಿಗೆ ಹಾಕದೆ, ಜಮೀನೇ ಇಲ್ಲದಿರೋ ಖಾತೆಗಳಿಗೆ ಹಣ ಹಾಕಿದ್ದಾರಂತೆ.

ಇನ್ನು, ರೈತರಲ್ಲದ ಒಟ್ಟು 25 ಜನರ ಬ್ಯಾಂಕ್ ಖಾತೆಗಳಿಗೆ 5,95,330 ರೂಪಾಯಿ ಪರಿಹಾರದ‌ ಹಣವನ್ನು ಸಂದಾಯ ಮಾಡಿದ್ದಾರೆ. ಹೀಗಾಗಿ ರೈತರು ತಹಶೀಲ್ದಾರ್ ಬಳಿ ನಮ್ಮ ಹಣ ನಮಗೆ ಪೂರ್ತಿ ಸಿಗುವಂತೆ ಮಾಡಿ ಮನವಿ ಮಾಡ್ಕೊಂಡಿದ್ದಾರೆ. ಸದ್ಯ, ವಂಚನೆ ಆರೋಪದಡಿ ಮಲ್ಲಿಕಾರ್ಜುನ ಸಂಶಿ ಹಾಗೂ ಮಂಜುನಾಥ್ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡ್ಲಾಗಿತ್ತು. ಹೀಗಾಗಿ ಪೊಲೀಸರು ವಂಚಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.