ಪಾಳು ಬಿದ್ದ ಯಾದಗಿರಿಯ ಉದ್ಯಾನವನಗಳು; ಜನರ ಹಿಡಿ ಶಾಪ
ಪಿಲ್ಟರ್ ಬೆಡ್ ಬಳಿಯಿರುವ ಗಾರ್ಡ್ನಲ್ಲಿ ಸಾರ್ವಜನಿಕರು ಗಾರ್ಡನ್ ಜಾಗವನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಿಕೊಂಡಿದ್ದಾರೆ. ಇನ್ನು ಉಳಿದ ಗಾರ್ಡನ್ ಅಂತು ಕೇಳೋದು ಬೇಡ ಎನ್ನುವ ಸ್ಥಿತಿಗೆ ಬಂದಿದೆ. ಎಲ್ಲಿ ನೋಡಿದರು ಕಸದಿಂದ ತುಂಬಿದೆ.
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಬಡಾವಣೆಗೊಂದು ಉದ್ಯಾನವನಗಳಿವೆ. ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಉದ್ಯಾನವನಗಳನ್ನು ಮಾಡಲಾಗಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಹೆಸರಿಗೆ ಮಾತ್ರ ಉದ್ಯಾನವನಗಳಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪಾಳು ಬಿದ್ದು ಹಾಳಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರದ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ 30 ಕ್ಕೂ ಅಧಿಕ ಉದ್ಯಾನವನಗಳನ್ನು ಮಾಡಲಾಗಿದೆ. ಬಹತೇಕ ಉದ್ಯಾನವನಗಳು ಉಪಯೋಗಕ್ಕೆ ಬಾರದೆ ಪಾಳು ಬಿದ್ದಿವೆ. ವಿಶೇಷವಾಗಿ ಯಾದಗಿರಿ ನಗರದ ನಜರತ್ ಕಾಲೋನಿ, ಹೊಸಹಳ್ಳಿ ಕ್ರಾಸ್, ಪಿಲ್ಟರ್ ಬೆಡ್, ಬಸವೇಶ್ವರ ನಗರ ಸೇರಿದಂತೆ ನಾನಾ ಬಡಾವಣೆಯಲ್ಲಿರುವ ಉದ್ಯಾನವನಗಳು ಉಪಯೋಗಕ್ಕೆ ಬಾರದಂತಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಅಧಿಕಾರಿಗಳ ಗಾರ್ಡನ್ಗಳು ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತು ಗಮನ ಹರಿಸದೆ ಇರುವುದು ಪ್ರಮುಖ ಕಾರಣವಾಗಿದೆ. ಬಸವೇಶ್ವರ ನಗರದಲ್ಲಿರುವ ಗಾರ್ಡನ್ ಕಳೆದ ನಾಲ್ಕೈದು ವರ್ಷಗಳಿಂದ ಮುಳ್ಳುಗಂಟೆ ಬೆಳೆದು ನಿಂತಿವೆ. ಅಧಿಕಾರಿಗಳು ಕನಿಷ್ಟ ಪಕ್ಷ ಮುಳ್ಳು ಗಂಟೆಯನ್ನು ತೆಗೆಸುವ ಕೆಲಸ ಕೂಡ ಮಾಡಿಲ್ಲ. ಗಾರ್ಡನ್ ತುಂಬ ಹುಲ್ಲು ಕಡ್ಡಿ ಕಸದಿಂದ ತುಂಬಿ ಹೋಗಿದೆ. ಆದರೆ ಇಲ್ಲಿವರೆಗೂ ಅಧಿಕಾರಿಗಳು ಗಮನ ಹರಿಸದೆ ಇರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಿಲ್ಟರ್ ಬೆಡ್ ಬಳಿಯಿರುವ ಗಾರ್ಡ್ನಲ್ಲಿ ಸಾರ್ವಜನಿಕರು ಗಾರ್ಡನ್ ಜಾಗವನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಿಕೊಂಡಿದ್ದಾರೆ. ಉಳಿದ ಗಾರ್ಡನ್ ಅಂತು ಕೇಳೋದು ಬೇಡ ಎನ್ನುವ ಸ್ಥಿತಿಗೆ ಬಂದಿದೆ. ಎಲ್ಲಿ ನೋಡಿದರು ಕಸದಿಂದ ತುಂಬಿದೆ. ನಗರದಲ್ಲಿರುವ ಎಲ್ಲಾ ಗಾರ್ಡನ್ಗಳಲ್ಲಿ ಮಕ್ಕಳಿಗೋಸ್ಕರ ಇರುವ ಆಟ ಪಿಟೋಪಕರಣಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಸಂಜೆ ಮತ್ತು ಬೆಳಗ್ಗೆ ಹಿರಿಯರು ವಾಕ್ ಮಾಡಬೇಕು ಎಂದರೂ ಸಹ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಗಾರ್ಡನ್ ತುಂಬ ಮುಳ್ಳುಗಳು ಬೆಳೆದಿದ್ದು, ಜಾನುವಾರುಗಳು ಮೇಯುವಂತ ಸ್ಥಳವಾಗಿದೆ. ನಗರದಲ್ಲಿರುವ ಉದ್ಯಾನವನಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪುಂಡ ಪೋಕರಿಗಳ ತಾಣವಾಗಿದಂತೂ ಸುಳ್ಳಲ್ಲ. ನಗರದ ಜನ ಉದ್ಯಾನವನಕ್ಕೆ ಹೋಗಬೇಕು ಎಂದರೆ ಒಂದೆ ಒಂದು ಗಾರ್ಡ್ ಸರಿಯಾದ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ನಗರಸಭೆ ಅಧ್ಯಕ್ಷರಿಗೆ ಕೇಳಿದರೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಆದಷ್ಟು ಬೇಗ ಗಾರ್ಡನ್ಗಳು ಸಾರ್ವಜನಿಕರ ಉಪಯೋಗಕ್ಕೆ ಬರುವಂತ ಮಾಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ
ನಟಿ ಉಮಾಶ್ರೀ ತಮ್ಮ ‘ಅನುಭವ’ದಿಂದ ಕಳೆದುಕೊಂಡಿದ್ದು ಏನು ಗೊತ್ತಾ!?
ಕರಾವಳಿಯತ್ತ ಪ್ರವಾಸಿಗರನ್ನು ಸೆಳೆಯುವುದಕ್ಕೆ ವಿನೂತನ ಪ್ರಯತ್ನ
Published On - 5:05 pm, Mon, 22 March 21