ಬೆಂಗಳೂರು: ಕೊರೊನಾ ಎರಡನೇ ಅಲೆ ಅರ್ಭಟ ಎಲ್ಲಿಗೆ ಬಂದು ನಿಲ್ಲುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಕಳೆದ ಬಾರಿಗಿಂತ ಈ ಬಾರಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿದಿನ 10 ಸಾವಿರ ಗಡಿ ದಾಟುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಈಗಾಗಲೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರ ಒಂದೆಡೆ ಕೊರೊನಾ ಲಸಿಕೆಯನ್ನು ಪಡೆದುಕೊಳ್ಳಿ ಎಂದು ತಿಳಿ ಹೇಳುತ್ತಿದೆ. ಆದರೆ ಅದೇಕೋ ಏನೋ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಬೇಜಾವಬ್ದಾರಿ ತೋರುತ್ತಿದ್ದಾರೆ. ಈ ಮಧ್ಯೆ ಲಸಿಕೆ ಹಾಕಿಸಿಕೊಂಡವರು ಸಾವನ್ನಪ್ಪುತ್ತಿದ್ದಾರ? ಎಂಬ ಪ್ರಶ್ನೆ ಹಲವರಿಗೆ ಇದೆ.. ಈ ಬಗ್ಗೆ ಇಂದಿನ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್, ಶ್ವಾಸಕೋಶ ತಜ್ಞ ಡಾ.ಪವನ್, ಚಿತ್ರ ನಟಿ ಹರ್ಷಿಕಾ ಪೂಣಚ್ಚ ಮತ್ತು ಚಿತ್ರ ನಟಿ ಶೃತಿ ನಂದೀಶ್ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚರ್ಚೆಯನ್ನು ಆ್ಯಂಕರ್ ಹರಿಪ್ರಸಾದ್ ನಡೆಸಿಕೊಟ್ಟರು.
ಲಸಿಕೆ ಯಾವ ಸ್ವರೂಪದ ನೆರವಿಗೆ ನಿಂತಿದೆ. ಈಗಾಗಲೇ ಲಸಿಕೆ ಪಡೆದವರು ಕೊರೊನಾ ಎರಡನೇ ಅಲೆಯಿಂದ ಸುರಕ್ಷಿತರಾಗಿದ್ದಾರ? ಎಂದು ಕೇಳಲಾದ ಪ್ರಶ್ನೆಗೆ, ಈ ಲಸಿಕೆಯಿಂದ ಸಂಪೂರ್ಣವಾಗಿ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ದೊಡ್ಡ ಮಟ್ಟದ ಸಮಸ್ಯೆಯನ್ನು ತಡೆಯಲು ಸಾಧ್ಯವಿದೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್ ಅಭಿಪ್ರಾಯಪಟ್ಟರೆ, ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನವರು ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿಯನ್ನು ತಿಳಿದುಕೊಂಡಿದ್ದಾರೆ. ವ್ಯಾಕ್ಸಿನ್ ಪಡೆವರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳು ರವಾನೆಯಾಗಿತ್ತು. ಇದು ಜನರ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಸಾವಿನ ಸಂಖ್ಯೆ ಹೆಚ್ಚಾದಂತೆ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಜೊತೆಗೆ ಈಗಲೂ ಕೆಲವರು ಲಸಿಕೆ ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಇದು ತಪ್ಪು. ಧೈರ್ಯವಾಗಿ ಮುಂದೆ ಬಂದು ಲಸಿಕೆ ಪಡೆಯಬೇಕೆಂದು ತಿಳಿಸಿದರು.
ಸರ್ಕಾರಕ್ಕೆ ಜನರ ಬಗ್ಗೆ ಕೆಟ್ಟ ಯೋಚನೆಗಳು ಇರುವುದಿಲ್ಲ. ಕೊರೊನಾ ಮುಕ್ತರನ್ನಾಗಿ ಮಾಡಲು ಸರ್ಕಾರ ಕೂಡಾ ಶ್ರಮಿಸುತ್ತಿದೆ. ಹೀಗಾಗಿ ಸರ್ಕಾರಕ್ಕೆ ಶಾಪ ಹಾಕುವುದು ಸರಿಯಲ್ಲ. ಕಳೆದ ಬಾರಿ ಹೆಚ್ಚಾಗಿ 40 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಯುವ ಜನತೆಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ಕೊರೊನಾ ಬಗ್ಗೆ ನಿರ್ಲಕ್ಷ್ಯ ಮನೋಭಾವ ಬೇಡ. ಎಲ್ಲರೂ ಲಸಿಕೆ ಪಡೆದು ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ, ಪಾಲಿಸಬೇಕೆಂದು ಟಿವಿ9 ಮೂಲಕ ನಟಿ ಹರ್ಷಿಕಾ ಪೂಣಚ್ಚ ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ನಟಿ ಶೃತಿ ನಂದೀಶ್, ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಬಗ್ಗೆ ಈಗಾಗಲೇ ಸುಳ್ಳು ಮಾಹಿತಿ ಹರಡಿ ಜನರಲ್ಲಿ ಭಯ ಸೃಷ್ಟಿಸಿದೆ. ಆದರೆ ಲಸಿಕೆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ನಮ್ಮ ಮನೆಯ ಸದ್ಯಸ್ಯರೂ ಕೂಡಾ ಈಗಾಗಲೇ ಲಸಿಕೆ ಪಡೆದಿದ್ದಾರೆ. ಇದರಿಂದ ನಾನು ಲಸಿಕೆ ಪಡೆಯಲು ಮುಂದಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ
Preethi Zinta : ಮೊದಲ ಗೆಲುವು ಕಂಡ ಸನ್ರೈಸರ್ಸ್ ಹೈದರಾಬಾದ್; ಮತ್ತೆ ಸೋಲು ಅನುಭವಿಸಿದ ಪಂಜಾಬ್
ಟೋಕಿಯೊ ಒಲಿಂಪಿಕ್ಸ್ ಮೇಲೆ ಕೊರೊನಾ ಕರಿಛಾಯೆ! ಫ್ಲ್ಯಾಷ್‌ಲೈಟ್ ರಿಲೇ ನಿರ್ವಹಣಾ ಪೊಲೀಸ್ ಅಧಿಕಾರಿಗೆ ಕೊರೊನಾ ಧೃಡ
(Get vaccine experts said in Tv9 Digital Live)
Published On - 6:57 pm, Thu, 22 April 21