ಬಿಪಿಎಲ್ ಕಾರ್ಡ್​​​​ದಾರರಿಗೆ ಆಹಾರ ಇಲಾಖೆ ಗುಡ್ ನ್ಯೂಸ್; ಹೊಸ ಕಾರ್ಡ್​​ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಸಾಧ್ಯತೆ

| Updated By: Ganapathi Sharma

Updated on: Sep 09, 2023 | 12:49 PM

BPL Card; ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಕಾರ್ಡ್​​ಗಳನ್ನು ವಿತರಣೆ ಮಾಡಿದರೆ, ಹೊಸ ಕಾರ್ಡ್​​​ಗಳಿಗೆ ಅವಕಾಶ ನೀಡಬಹುದಾಗಿದೆ. ಸದ್ಯ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದೇ, ಅರ್ಜಿ ಸಲ್ಲಿಕೆ ಮಾಡಿದ ಕಾರ್ಡ್​​ಗಳೂ ಸಿಗದೆ ಜನ ರೋಸಿ ಹೋಗಿದ್ದಾರೆ.

ಬಿಪಿಎಲ್ ಕಾರ್ಡ್​​​​ದಾರರಿಗೆ ಆಹಾರ ಇಲಾಖೆ ಗುಡ್ ನ್ಯೂಸ್; ಹೊಸ ಕಾರ್ಡ್​​ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 9: ಬಿಪಿಎಲ್ ಕಾರ್ಡ್​​​​ದಾರರಿಗೆ (BPL Card) ಆಹಾರ ಇಲಾಖೆ (Food Department) ಗುಡ್ ನ್ಯೂಸ್ ನೀಡುವ ಸುಳಿವು ನೀಡಿದೆ. ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಲ್ಲಿಕೆಯಾಗಿರುವ 3 ಲಕ್ಷ ಎಪಿಎಲ್ ಕಾರ್ಡ್ ಅರ್ಜಿಗಳಲ್ಲಿ ಶೇ 75ರ ದೃಢೀಕರಣ ಪೂರ್ಣಗೊಂಡಿದೆ. ಸದ್ಯದಲ್ಲೆ ಈ ಕಾರ್ಡ್​​​ಗಳನ್ನು ವಿತರಣೆ ಮಾಡುವ ಸಾಧ್ಯತೆ ಇದೆ.

ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಕಾರ್ಡ್​​ಗಳನ್ನು ವಿತರಣೆ ಮಾಡಿದರೆ, ಹೊಸ ಕಾರ್ಡ್​​​ಗಳಿಗೆ ಅವಕಾಶ ನೀಡಬಹುದಾಗಿದೆ. ಸದ್ಯ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದೇ, ಅರ್ಜಿ ಸಲ್ಲಿಕೆ ಮಾಡಿದ ಕಾರ್ಡ್​​ಗಳೂ ಸಿಗದೆ ಜನ ರೋಸಿ ಹೋಗಿದ್ದಾರೆ.

ಈ ಮಧ್ಯೆ, ಬಿಪಿಎಲ್ ಕಾರ್ಡ್​​ಗಳಲ್ಲಿ ಮೃತಪಟ್ಟಿರುವ ಫಲಾನುಭವಿಗಳ ಹೆಸರುಗಳನ್ನು ಡಿಲೀಟ್ ಮಾಡಿಸುವುದಲ್ಲದೇ ಆಹಾರ ಇಲಾಖೆಯ ಕಾಯ್ದೆಗಳನ್ನು ಉಲ್ಲಂಘಿಸಿ ಬಳಸುತ್ತಿದ್ದ ಫಲಾನುಭವಿಗಳನ್ನ ಪತ್ತೆ ಮಾಡಲಾಗುತ್ತಿದೆ. ಕಳೆದ ತಿಂಗಳಷ್ಟೇ 5 ಲಕ್ಷಕ್ಕೂ ಹೆಚ್ಚು ಕಾರ್ಡ್​​​ಗಳನ್ನು ರದ್ದು ಮಾಡಲಾಗಿತ್ತು. ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಮಿತಿಯನ್ನು ಮೀರಿದ್ದರಿಂದ ಹೊಸ ಆರ್ಜಿ ಸಲ್ಲಿಕೆಗೆ ಅವಾಕಾಶ ನೀಡಿರಲಿಲ್ಲ.

ಇದನ್ನೂ ಓದಿ: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಶಾಕ್!

ಇತ್ತೀಚೆಗಷ್ಟೇ ತಿದ್ದುಪಡಿಗೆ ಅವಕಾಶ ನೀಡಿದ್ದ ಸರ್ಕಾರ

ಬಿಪಿಎಲ್​ ಕಾರ್ಡ್​ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರೆ ಗೃಹಲಕ್ಷ್ಮೀ ಯೋಜನೆಯಿಂದ ಆ ಕುಟುಂಬದ ಮಹಿಳೆಯರು ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ ಸರ್ಕಾರ ಅನುಮತಿ ನೀಡಿತ್ತು. ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ಮಹಿಳಾ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಆದ್ರೆ, ಆಹಾರ ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇದ್ದಾರೆ ಎಂಬುದು ದಾಖಲೆಗಳಿಂದ ತಿಳಿದುಬಂದಿತ್ತು. ಹೀಗಾಗಿ ಸರ್ಕಾರ ತಿದ್ದುಪಡಿಗೆ ಅವಕಾಶ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ