ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​: ಚಿನ್ನದ ನೆಲದಲ್ಲಿ ಐಟಿ ಹಬ್ ಸೃಷ್ಟಿಸಲು​ ಮುಂದಾದ ಸರ್ಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 9:35 PM

ಕೆಜಿಎಫ್​ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದ್ದರು. ಅದಾದ ನಂತರ ಸರ್ಕಾರಗಳು ಇಲ್ಲಿ ಜನರ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ಆದರೆ ಎರಡು ದಶಕಗಳ ನಂತರ ಈಗ ಸರ್ಕಾರ ಕೆಜಿಎಫ್​ ಭಾಗದಲ್ಲಿ ಒಂದು ಭರವಸೆಯ ಯೋಜನೆಯೊಂದನ್ನು ಆರಂಭಿಸಿದೆ.

ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​: ಚಿನ್ನದ ನೆಲದಲ್ಲಿ ಐಟಿ ಹಬ್ ಸೃಷ್ಟಿಸಲು​ ಮುಂದಾದ ಸರ್ಕಾರ
ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​: ಚಿನ್ನದ ನೆಲದಲ್ಲಿ ಐಟಿ ಹಬ್ ಸೃಷ್ಟಿಸಲು​ ಮುಂದಾದ ಸರ್ಕಾರ
Follow us on

ಕೋಲಾರ, ಸೆಪ್ಟೆಂಬರ್​ 09: ಅದು ನೂರಾರು ವರ್ಷಗಳ ಕಾಲ ಚಿನ್ನವನ್ನು ಬೆಳೆದಂತ ನೆಲ, ಅದರೆ ಚಿನ್ನದ ಗಣಿಗೆ ಬೀಗ ಹಾಕಿದ ನಂತರ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಿದ್ದರು, ಆದರೆ 23 ವರ್ಷಗಳ ನಂತರ ಈಗ ಚಿನ್ನದ ನೆಲದಲ್ಲಿ ಹೊಸ ಭರವಸೆಯೊಂದು ಮೂಡಿದ್ದು ಚಿನ್ನದ ನೆಲ ಸದ್ಯ ಐಟಿ ಹಬ್ (IT hub)​ ಆಗಿ ಹೊರ ಹೊಮ್ಮುವ ಕಾಲ ಸನ್ನಿಹಿತವಾಗುತ್ತಿದೆ.

ಕೆಜಿಎಫ್ ನೆಲದಲ್ಲಿ ಯೋಜನೆ ಆರಂಭಿಸಲು ಮುಂದಾದ ಸರ್ಕಾರ

ಇಡೀ ವಿಶ್ವಕ್ಕೆ ನೂರಾರು ವರ್ಷಗಳ ಕಾಲ ತನ್ನೊಡಲಿಂದ ಚಿನ್ನವನ್ನು ಬಗೆದುಕೊಟ್ಟ ನೆಲ ಕೆಜಿಎಫ್​. ಆದರೆ ಹಲವು ಕಾರಣಗಳಿಂದ ನಷ್ಟದ ನೆಪಪೊಡ್ಡಿ ಕೆಜಿಎಫ್​ ಚಿನ್ನದ ಗಣಿಗೆ ಬೀಗ 23 ವರ್ಷಗಳ ಹಿಂದೆ ಬೀಗ ಹಾಕಲಾಗಿತ್ತು. ಇದರಿಂದ ಕೆಜಿಎಫ್​ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದ್ದರು. ಅದಾದ ನಂತರ ಸರ್ಕಾರಗಳು ಇಲ್ಲಿ ಜನರ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ಆದರೆ ಎರಡು ದಶಕಗಳ ನಂತರ ಈಗ ಸರ್ಕಾರ ಕೆಜಿಎಫ್​ ಭಾಗದಲ್ಲಿ ಒಂದು ಭರವಸೆಯ ಯೋಜನೆಯೊಂದನ್ನು ಆರಂಭಿಸಿದೆ.

ಇದನ್ನೂ ಓದಿ: ಕೋಲಾರದಲ್ಲಿ ನೈತಿಕ ಪೊಲೀಸ್​ಗಿರಿ: ಮುಸ್ಲಿಂ ಮಹಿಳೆಯನ್ನು ಬೈಕ್​ನಲ್ಲಿ ಕರೆದೊಯ್ಯುತ್ತಿದ್ದ ಯುವಕನಿಗೆ ಬೆದರಿಕೆ

ಕೆಜಿಎಫ್​ನಲ್ಲಿ ಉಪಯೋಗಿಸದೆ ಬೆಮೆಲ್​ ಕಂಪನಿಯ ವಶದಲ್ಲಿದ್ದ ಸುಮಾರು 973 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಮರಳಿ ತಮ್ಮ ವಶಕ್ಕೆ ಪಡೆದುಕೊಂಡಿತ್ತು. ಈಗ ಅದೇ 973 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಎಕರೆ 5 ಲಕ್ಷ ರೂ ಕಂದಾಯ ಇಲಾಖೆಗೆ ಪಾವತಿ ಮಾಡಿ ಭೂಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ. ಸದ್ಯ ಈ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ದಿ ಮಾಡುವ ಕೆಲಸವೂ ಆರಂಭವಾಗಿದೆ. ಇದರ ಜೊತೆ ಜೊತೆಗೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಹೊಸದಾಗಿ ಚೆನೈ-ಬೆಂಗಳುರು ಎಕ್ಸ್​ಪ್ರೆಕ್ಸ್ ಹೈವೇ ಕಾರಿಡಾರ್ ನಿರ್ಮಾಣ ಕೂಡ ಪೂರ್ಣವಾಗಿದೆ. ಹಾಗಾಗಿ ನೂತನ ಕೆಜಿಎಫ್​​ ಕೈಗಾರಿಕಾ ಪ್ರದೇಶದಲ್ಲಿ ಐಟಿ ಕಂಪನಿಗಳು ತನ್ನ ಕಂಪನಿಯನ್ನು ಆರಂಭ ಮಾಡಲು ಮನಸ್ಸು ಮಾಡುತ್ತಿದ್ದು ಈಗಾಗಲೇ ಹಲವು ವಿಶ್ವದ ಪ್ರತಿಷ್ಠಿತ ಐಟಿ ಕಂಪನಿಗಳು ಕೆಜಿಎಫ್​ನಲ್ಲಿ ತಮ್ಮ ಕಂಪನಿ ಆರಂಭಿಸಲು ಆಸಕ್ತಿ ಹೊಂದಿವೆ ಅನ್ನೋ ಮಾಹಿತಿ ಸಿಕ್ಕಿದೆ.

ಇನ್ನು ಕೆಜಿಎಫ್​ ಸದ್ಯದ ಮಾಹಿತಿ ಹಾಗೂ ಲೆಕ್ಕಾಚಾರದ ಪ್ರಕಾರ ಐಟಿ ಕಂಪನಿಗಳು ಹಾಗೂ ಮಲ್ಟಿ ನ್ಯಾಷನಲ್​ ಕಂಪನಿಗಳು ಕೆಜಿಎಫ್​ನಲ್ಲಿ ಹೂಡಿಕೆ ಮಾಡಲು ಆಸಕ್ತಿ ವಹಿಸಿವೆ. ಫಾಕ್ಸ್​ ಕಾನ್​, ಸೇರಿದಂತೆ ಐಟಿ ಇಂಡಸ್ಟ್ರಿಯಲ್​ ಹೆಡ್​ನ ಅಧಿಕಾರಿಗಳು ಕೂಡಾ ಕೆಜಿಎಫ್​ಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಇದು ಐಟಿ ಕಂಪನಿಗಳನ್ನು ಸ್ಥಾಪನೆ ಮಾಡಲು ಸೂಕ್ತ. ಬೆಂಗಳೂರಿನ ಟ್ರಾಫಿಕ್​ನ ಕಿರಿಕಿರಿಯಲ್ಲಿ ಸಿಲುಕುವ ಬದಲು ಯಾವುದೇ ಟ್ರಾಫಿಕ್​ ಇಲ್ಲದೆ ರಾಜಧಾನಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗಲು ಸೂಕ್ತ ಪ್ರದೇಶ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೇವಲ ಒಂದು ಗಂಟೆ ಸಮಯದಲ್ಲಿ ತಲುಪಬಹುದು, ಜೊತೆಗೆ ಚೆನೈ ಬಂದರಿಗೆ ತಲುಪಲು ಕೇವಲ ಎರಡು ಗಂಟೆ ಸಮಯ ಸಾಕು.

ಅದಲ್ಲದಕ್ಕೂ ಅತಿ ಮುಖ್ಯವಾಗಿ ಹೊಸದಾಗಿ ನಿರ್ಮಾಣವಾಗಿರುವ ಬೆಂಗಳುರು-ಚೆನೈ ಎಕ್ಸಪ್ರೆಕ್ಸ್ ಕಾರಿಡಾರ್ ಹೈವೇ ಕೂಡ ಕೆಜಿಎಫ್​ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಿರುವ ಕಾರಣ ಇದು ಕೈಗಾರಿಕಾ ವಲಯ ನಿರ್ಮಾಣಕ್ಕೆ ಸೂಕ್ತ ಎಂದ ನಿರ್ಧಾರಕ್ಕೆ ಬಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಕೆಜಿಎಫ್​ ಚಿನ್ನದ ನಾಡು ಐಟಿ ಕಂಪನಿಗಳ ಹಬ್​ ಆಗಿ ಮಾರ್ಪಾಟಾಗಲಿದೆ.

ಕೆಜಿಎಫ್​ನಲ್ಲಿ ಬೇರೆ ಬೇರೆ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಉದ್ಯೋಗವಕಾಶ ಸಿಗಲಿದೆ ಅನ್ನೋ ವಿಶ್ವಾಸ ಶಾಸಕಿ ರೂಪಕಲಾ ಅವರದ್ದು. ಅಲ್ಲದೇ ಕೆಜಿಎಫ್​ನಲ್ಲಿ ಇಂಟಿಗ್ರೇಟೆಡ್​ ಟೌನ್​ ಶಿಪ್​ ಕೂಡ ನಿರ್ಮಾಣವಾಗುತ್ತಿದ್ದು ಕೆಜಿಎಫ್​ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿವೆ ಅನ್ನೋ ವಿಶ್ವಾಸ ಶಾಸಕಿ ರೂಪಕಲಾ ಅವರ ಮಾತಾಗಿದೆ.

ಇದನ್ನೂ ಓದಿ: ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ತಕರಾರು: ಮರು ಎಣಿಕೆಗೆ ತಯಾರಿ, ಹಾಲಿ ಶಾಸಕರಿಗೆ ಶುರುವಾಯ್ತು ಟೆನ್ಷನ್

ಕೆಜಿಎಫ್​ನಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಿಂದಾಗಿ ಚಿನ್ನದ ಗಣಿ ಕಾರ್ಮಿಕರು ಸರ್ಕಾರಗಳು ನಮಗೆ ಪರ್ಯಾಯ ಉದ್ಯೋಗ ನೀಡಲಿಲ್ಲ, ಕೊನೆ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳಿಗಾದರೂ ಈಗ ಕೆಲಸ ಕೊಡಲು ಮುಂದಾಗುತ್ತಿವೆ ಅನ್ನೋ ನಿಟ್ಟುಸಿರು ಬಿಡುತ್ತಿದ್ದಾರೆ ಅನ್ನೋದೆ ಸಂತೋಷದ ವಿಷಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.