ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ

| Updated By: ವಿವೇಕ ಬಿರಾದಾರ

Updated on: Jul 25, 2022 | 8:51 PM

ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ.

ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಸರ್ಕಾರ (Basavaraj Bommai) ಆದೇಶ ಹೊರಡಿಸಿದೆ. ಜುಲೈ 12 ರಂದು ರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಅವರು 47 ನಿಗಮ ಮಂಡಳಿಯ (Corporation boards) ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು ಮಾಡಿ ಆದೇಶ ಹೊರಡಿಸಿದ್ದರು.

ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಅವರ ಆದೇಶದ ಹಿನ್ನೆಲೆಯಲ್ಲಿ ಸಿಎಸ್ ಕಚೇರಿಯಿಂದ ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ​ ಸೂಚನೆ ನೀಡಲಾಗಿತ್ತು.

ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಆಯ್ಕೆಯಾದ ಅಧ್ಯಕ್ಷರ ಪಟ್ಟಿ

1. ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್

2. ಕಾಡುಗೊಲ್ಲ ಅಭಿವೃದ್ಧಿ ನಿಗಮ -ಚಂಗಾವರ ಮಾರಣ್ಣ

3. ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ -ಎಂ.ಕೆ.ವಾಸುದೇವ್

4. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ -ಎಂ.ಕೆ.ಶ್ರೀನಿವಾಸ್

5. ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎನ್.ಎಂ. ರವಿನಾರಾಯಣ ರೆಡ್ಡಿ

6. ರೇಷ್ಮೆ ಮಾರಾಟ ಮಂಡಳಿ -ಬಿ‌.ಸಿ.ನಾರಾಯಣಸ್ವಾಮಿ

7. ಲಿಂಬೆ ಅಭಿವೃದ್ಧಿ ಮಂಡಳಿ -ಚಂದ್ರಶೇಖರ ಕವಟಗಿ

8. ರಾಜ್ಯ ಗೇರು ಅಭಿವೃದ್ಧಿ ನಿಗಮ -ಮಣಿರಾಜ ಶೆಟ್ಟಿ

9. ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ -ಗೋವಿಂದಜಟ್ಟಪ್ಪ ನಾಯ್ಕ

10. ಮೈಸೂರು ಮೃಗಾಲಯ ಪ್ರಾಧಿಕಾರ -ಎಂ.ಶಿವಕುಮಾರ್

11. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ -ಎನ್.ರೇವಣಪ್ಪ ಕೋಳಗಿ

12. ರೇಷ್ಮೆ ಉದ್ಯಮಗಳ ನಿಗಮ -ಎಂ.ಗೌತಮ್ ಗೌಡ

13. ಜೀವ ವೈವಿಧ್ಯ ಮಂಡಳಿ -ಎ‌ನ್.ಎಂ.ರವಿ ಕಾಳಪ್ಪ

14. ಮೀನುಗಾರಿಕೆ ಅಭಿವೃದ್ಧಿ ನಿಗಮ -ಎ.ವಿ.ತೀರ್ಥರಾಮ

15. ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್ ಕೆ

16. ಕಾಡುಗೋಲ್ಲ ಅಭಿವೃದ್ಧಿ ನಿಗಮ ನಿಯಮಿತ. ಬೆಂಗಳೂರು -ಚಂಗಾವರ ಮಾರಣ್ಣ

17. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು -ಎಂ.ಕೆ ಶ್ರೀನಿವಾಸ್

18. ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ನಿ ಬೆಂಗಳೂರು – ಎಂ.ಕೆ ವಾಸುದೇವ್

19. ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ನಿಗಮ – ರಘು ಕೌಟಿಲ್ಯ

20. ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ – ಎಂ.ಎಸ್. ಕರಿಗೌಡ್ರ

21. ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ –  ವಿರೂಪಾಕ್ಷ ಗೌಡ

22. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ – ಧರ್ಮಣ್ಣ ದೊಡ್ಡಮನಿ

23. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ -ಕೆ.ವಿ.ನಾಗರಾಜ್

24. ಕರಕುಶಲ ಅಭಿವೃದ್ಧಿ ನಿಗಮ -ಮಾರುತಿ ಮಲ್ಲಪ್ಪ ಅಷ್ಟಗಿ

25. ಕಾಡಾ(ತುಂಗಭದ್ರಾ ಯೋಜನೆ) -ಕೊಲ್ಲಾ ಶೇಷಗಿರಿ ರಾವ್

26. ಕಾಡಾ(ಕಾವೇರಿ ಜಲಾನಯನ ಯೋಜನೆ) -ಜಿ.ನಿಜಗುಣರಾಜು

27. ಮದ್ಯಪಾನ ಸಂಯಮ ಮಂಡಳಿ – ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ

28. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಎಂ. ಸರವಣ

29. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – ಕೆ.ಪಿ. ವೆಂಕಟೇಶ್

ಈ ಹಿಂದೆ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿಗೆ ಮತ್ತೆ ಅಧ್ಯಕ್ಷ ಸ್ಥಾ‌ನ ದೊರೆತಿದೆ.

Published On - 8:51 pm, Mon, 25 July 22