ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ, ಕೀಳು ಅಭಿರುಚಿಯಿಂದ ಕೂಡಿದೆ: ಶಾಸಕ ಜಮೀರ್ ಅಹ್ಮದ್ಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತರಾಟೆ

ಕಾಂಗ್ರೆಸ್ ಪಕ್ಷಕ್ಕೆ ತೃಪ್ತಿದಾಯಕವಾಗುವಂತೆ ಶಿಸ್ತುಪಾಲನೆ ಕಾಪಾಡಬೇಕು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಎತ್ತಿಹಿಡಿಯಬೇಕು ಎಂದು ಪತ್ರದ ಮೂಲಕ ಶಾಸಕ ಜಮೀರ್ ಅಹ್ಮದ್ಗೆ ಸುರ್ಜೇವಾಲ ಎಚ್ಚರಿಕೆ ಕೊಟ್ಟಿದ್ದಾರೆ.

ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ, ಕೀಳು ಅಭಿರುಚಿಯಿಂದ ಕೂಡಿದೆ: ಶಾಸಕ ಜಮೀರ್ ಅಹ್ಮದ್ಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತರಾಟೆ
ಜಮೀರ್ ಅಹ್ಮದ್​ ಖಾನ್
TV9kannada Web Team

| Edited By: Ayesha Banu

Jul 25, 2022 | 9:10 PM

ಬೆಂಗಳೂರು: ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ, ಕೀಳು ಅಭಿರುಚಿಯಿಂದ ಕೂಡಿದೆ ಎಂದು ಜಮೀರ್ ಅಹ್ಮದ್​ ಖಾನ್​ಗೆ(Zameer Ahmed Khan) ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Surjewala) ಎಚ್ಚರಿಕೆ ಪತ್ರ ಬರೆದಿದ್ದಾರೆ. ಸುದೀರ್ಘ ಪತ್ರದ ಮೂಲಕ ಜಮೀರ್ ಅಹ್ಮದ್ಗೆ ಸುರ್ಜೇವಾಲ ಎಚ್ಚರಿಕೆ ಕೊಟ್ಟಿದ್ದಾರೆ.

ನಿಮ್ಮಂತ ಹಿರಿಯ ನಾಯಕರು ಪಕ್ಷದ ಲಕ್ಷ್ಮಣ ರೇಖೆಯೊಳೆಗೆ ಇರುವುದನ್ನ ಪಕ್ಷ ನೀರಿಕ್ಷೆ ಮಾಡಿತ್ತದೆ. ಅನಾವಶ್ಯಕ ಹೇಳಿಕೆಯು ವಿವಾದ ಹಾಗೂ ಕಹಿಯಾದ ವಾತಾವರಣ ಸೃಷ್ಟಿಸುತ್ತಿದೆ. ಭಾರತೀಯ ಕಾಂಗ್ರೆಸ್ ಪಕ್ಷ ನಿಮ್ಮಿಂದ ಇಂತಹ ಹೇಳಿಕೆಯನ್ನ ನಿರೀಕ್ಷೆ ಮಾಡುವುದಿಲ್ಲ. ನಿಮ್ಮ ಅನಾವಶ್ಯಕ ಹೇಳಿಕೆಯು ತಪ್ಪು ಸಂದೇಶ ಹಾಗೂ ಅಭಿಪ್ರಾಯವನ್ನ ಸೃಷ್ಟಿಸಿದೆ. ಎಲ್ಲ ಜಾತಿ, ಜನಾಂಗ, ಸಮೂಹವನ್ನ ಒಳಗೊಳ್ಳುವುದು ಕಾಂಗ್ರೆಸ್ ಪಕ್ಷ ಹುಟ್ಟಿನಿಂದ ಬಂದ ಸಿದ್ದಾಂತ. ಈ ಸಿದ್ದಾಂತದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ. ಈ ಮೂಲಕ ನಿಮಗೆ ನಾವು ತಿಳಿಯ ಬಯಸುವುದು ಎನೇಂದರೆ ಸಾರ್ಜಜನಿಕ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಪಕ್ಷಕ್ಕೆ ತೃಪ್ತಿದಾಯಕವಾಗುವಂತೆ ಶಿಸ್ತುಪಾಲನೆ ಕಾಪಾಡಬೇಕು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಎತ್ತಿಹಿಡಿಯಬೇಕು ಎಂದು ಪತ್ರದ ಮೂಲಕ ಶಾಸಕ ಜಮೀರ್ ಅಹ್ಮದ್ಗೆ ಸುರ್ಜೇವಾಲ ಎಚ್ಚರಿಕೆ ಕೊಟ್ಟಿದ್ದಾರೆ.

Randeep surjewala

ಯಾವುದೇ ಸಮುದಾಯದ ಬಗ್ಗೆ ನಾನು ಕೆಟ್ಟದಾಗಿ ಮಾತಾಡಿಲ್ಲ

ಎಐಸಿಸಿಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವುದೇ ಸಮುದಾಯದ ಬಗ್ಗೆ ನಾನು ಕೆಟ್ಟದಾಗಿ ಮಾತಾಡಿಲ್ಲ. ನಾನು ಒಕ್ಕಲಿಗರ ಅಭಿಮಾನಿ ಎಂದು ದಾವಣಗೆರೆಯಲ್ಲಿ ಶಾಸಕ ಜಮೀರ್ ಅಹ್ಮದ್‌ಖಾನ್‌ ಹೇಳಿದ್ದಾರೆ. ನಾನೇನು ತಪ್ಪು ಮಾತನಾಡಿಲ್ಲ ನನ್ನ ಗುರುಗಳು ಒಕ್ಕಲಿಗ ಸ್ವಾಮಿಜಿ. 2005ರಲ್ಲಿ ನನ್ನ ಗೆಲುವಿಗೆ ದೇವೆಗೌಡ್ರು ಕಾರಣ. ಯಾವ ಜಾತಿಯ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ ಎಂದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada