ಬೆಂಗಳೂರು: ನಗರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಇಂದು ರಾಜ್ಯಪಾಲ ವಜೂಬಾಯಿ ವಾಲಾ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಮುಕ್ತಾಯದ ಹೊತ್ತಿಗೆ ಸಿಎಂ ಯಡಿಯೂರಪ್ಪ ಕೂಡ ಲಾಕ್ಡೌನ್ ಪರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇರವಾಗಿಯೇ ಲಾಕ್ಡೌನ್ ಸಲಹೆ ನೀಡಿದ್ದರು. ಹಾಗೇ ರಾಜ್ಯಪಾಲರೂ ಕೂಡ ಇದನ್ನೇ ಹೇಳಿದ್ದಾರೆ.
ಲಾಕ್ ಡೌನ್ ಮಾಡುವುದಾದರೆ ಮಾಡಿ, ನಮಗೆ ಬೇಕಿರುವುದು ಆರೋಗ್ಯಪೂರ್ಣ ಕರ್ನಾಟಕ. ಲಾಕ್ಡೌನ್ ಸೇರಿ ಯಾವುದೇ ರೀತಿಯ ಕಠಿಣ ಕ್ರಮವನ್ನಾದರೂ ತೆಗೆದುಕೊಳ್ಳಿ ಎಂದು ರಾಜ್ಯಪಾಲರು ಸಭೆಯಲ್ಲಿ ತಿಳಿಸಿದ್ದಾರೆ. ಈ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ಜನರು ಸಹ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಲಾಕ್ಡೌನ್ ಬಗ್ಗೆ ಜನರಿಗೆ ಹೆದರಿಕೆ ಇದೆ. ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ಸಿಎಂ ಯಡಿಯೂರಪ್ಪ ಸ್ವತಂತ್ರವಾಗಿದ್ದಾರೆ ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಯಡಿಯೂರಪ್ಪನವರೂ ಸಹ ಲಾಕ್ಡೌನ್ ಸಲಹೆಯನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಸಚಿವರ ಜತೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕಾಗಿ ನಿಷೇಧಾಜ್ಞೆ ಜಾರಿ ಮಾಡಲು ಸಿದ್ದರಾಮಯ್ಯ ಸಲಹೆ; ಸಭೆಯಲ್ಲಿ ರಾಜ್ಯಪಾಲರ ನೇತೃತ್ವದ ಬಗ್ಗೆ ಅಸಮಾಧಾನ
Published On - 7:24 pm, Tue, 20 April 21