ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಎದುರಾಳಿ ಅಭ್ಯರ್ಥಿ ತನ್ನ ಪ್ರತಿ ಸ್ಪರ್ಧಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ಜೇವರ್ಗಿ ತಾಲೂಕಿನ ಚನ್ನೂರು ಗ್ರಾಮದಲ್ಲಿ ನಡೆದಿದೆ.
ಚುನಾವಣೆ ಅಭ್ಯರ್ಥಿಯಾಗಿ ಮಹಾಲಕ್ಷ್ಮಿ ಸ್ಪರ್ಧಿಸಿದ್ದರು. ಇವರ ಎದುರಾಳಿಯಾಗಿ ಬೀರಲಿಂಗ ಪೂಜಾರಿಯ ತಾಯಿ ಪ್ರತಿಸ್ಪರ್ಧಿಯಾಗಿ ನಿಂತಿದ್ದರು. ಪರಸ್ಪರ ಪೈಪೋಟಿ ಇದ್ದ ಕಾರಣ ಮಹಾಲಕ್ಷ್ಮಿ ಗಂಡ ಶರಣಪ್ಪ ಪೂಜಾರಿಯನ್ನು ಪಂಚಾಯಿತಿಗೆ ಕರೆದೊಯ್ದು ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದಾರಂತೆ.
ಮಹಾಲಕ್ಷ್ಮಿ ನಾಮಪತ್ರ ಹಿಂಪಡೆಯದೇ ಹೋದರೆ ನಿನ್ನ ಮನೆ ಬಳಿ ನನ್ನವರು ಇದ್ದಾರೆ. ನಿನ್ನ ಹೆಂಡತಿಯನ್ನು ಸುಮ್ಮನೆ ಬಿಡೋದಿಲ್ಲ. ಪ್ರಾಣಾಪಾಯದಿಂದ ಪಾರಾಗಬೇಕೆಂದರೆ ನಾಮಪತ್ರವನ್ನು ಹಿಂಪೆಡೆಯುವಂತೆ ನಿನ್ನ ಪತ್ನಿಗೆ ಹೇಳು ಎಂದು ಬೆದರಿಕೆ ಒಡ್ಡಲಾಗಿದೆ. ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published On - 8:45 am, Tue, 22 December 20