AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷ ಸೆಲೆಬ್ರೇಷನ್‌ಗೆ ಕಡಲನಗರಿ ರೆಸಾರ್ಟ್‌ಗಳಿಗೆ ಫುಲ್ ಡಿಮ್ಯಾಂಡ್, 10 ದಿನ ಮುಂಚೆನೇ ಆನ್​ಲೈನ್‌ ಬುಕಿಂಗ್ ಕ್ಲೋಸ್

ಹೊಸ ವರ್ಷ ಇನ್ನೇನು ಬಂದೇ ಬಿಡ್ತು ಅನ್ನೋ ಹೊತ್ತಿಗೆ ಉತ್ತರಕನ್ನಡ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳು ಫುಲ್ ಆಗೋದು ಕಾಮನ್. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಇನ್ನೂ ಹತ್ತು ದಿನ ಬಾಕಿ ಇರೋವಾಗ್ಲೇ ತುಂಬಿ ತುಳುಕುತ್ತಿರೋದು ಮಾತ್ರವಲ್ಲದೇ ಬುಕಿಂಗ್ ಕೂಡ ಕ್ಲೋಸ್ ಆಗಿದೆ.

ಹೊಸವರ್ಷ ಸೆಲೆಬ್ರೇಷನ್‌ಗೆ ಕಡಲನಗರಿ ರೆಸಾರ್ಟ್‌ಗಳಿಗೆ ಫುಲ್ ಡಿಮ್ಯಾಂಡ್, 10 ದಿನ ಮುಂಚೆನೇ ಆನ್​ಲೈನ್‌ ಬುಕಿಂಗ್ ಕ್ಲೋಸ್
ಹತ್ತು ದಿನ ಬಾಕಿ ಇರೋವಾಗ್ಲೇ ಉತ್ತರಕನ್ನಡ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳು ಫುಲ್
ಆಯೇಷಾ ಬಾನು
|

Updated on: Dec 22, 2020 | 9:20 AM

Share

ಕಾರವಾರ: ಕಡಲ ನಗರಿ ಉತ್ತರಕನ್ನಡ.. ಪ್ರವಾಸಿಗರ ಹಾಟ್ ಫೇವರಿಟ್​.. ಮಳೆಗಾಲವಿರಲಿ, ಚಳಿಗಾಲವೇ ಬರಲಿ, ಬಿರು ಬಿಸಿಲೇ ಇರಲಿ, ಇಲ್ಲಿಗೆ ಮುಗಿಬೀಳೋ ಪ್ರವಾಸಿಗರಿಗೇನೂ ಕಮ್ಮಿ ಇಲ್ಲ. ಆದ್ರೆ ಈ ಬಾರಿ ಕೊರೊನಾದಿಂದ ಬಹಳ ಲಾಸ್ ಅನುಭವಿಸಿದ್ದ ರೆಸಾರ್ಟ್, ಹೋಮ್ ಸ್ಟೇ ಮಾಲೀಕರಿಗೆ ಈಗ ಸುಗ್ಗಿ ಶುರುವಾಗಿದೆ.

ಅದರಲ್ಲೂ ಹೊಸ ವರ್ಷ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗದ ಬಹುತೇಕ ರೆಸಾರ್ಟ್​ಗಳು ತುಂಬಿ ತುಳುಕುತ್ತಿವೆ. ಈಗಾಗಲೇ ಜಿಲ್ಲೆಯ ಎಲ್ಲಾ ಹೋಮ್ ಸ್ಟೇ, ರೆಸಾರ್ಟ್​​ಗಳು ಫುಲ್ ಆಗಿದ್ದು , ಆನ್​ಲೈನ್‌ ಬುಕಿಂಗ್ ಕೂಡ ಕ್ಲೋಸ್ ಆಗಿದೆ.

ಕೊರೊನಾಗೆ ತತ್ತರಿಸಿದ್ದ ಮಾಲೀಕರಲ್ಲಿ ಉತ್ಸಾಹ ಪ್ರತಿ ಬಾರಿ ವರ್ಷಾಂತ್ಯಕ್ಕೂ ಮುನ್ನ ಇಲ್ಲಿನ ಕಾಡಿನಲ್ಲಿರುವ ಮತ್ತು ಸಮುದ್ರತೀರದ ರೆಸಾರ್ಟ್‌ಗಳು ತುಂಬಿ ತುಳುಕುವುದು ಸಹಜ. ಆದ್ರೆ ಈ ಬಾರಿ 10 ದಿನಕ್ಕೂ ಮುನ್ನವೇ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಜನ ಭರ್ತಿಯಾಗಿದ್ದನ್ನ ನೋಡಿದ್ರೆ ಜನ ಕೊರೊನಾ ನಡುವೆ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ರೆಡಿಯಾದಂತೆ ಕಾಣಿಸ್ತಿದೆ. ಇದರಿಂದ ಕೊರೊನಾದಿಂದ ವರ್ಷವಿಡೀ ಖಾಲಿ ಇದ್ದ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿಗೆ ಹೊಸ ರಂಗು ಬಂದಿದೆ. ಇನ್ನು ಜಿಲ್ಲೆಗೆ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೂಡ ಕ್ರಮ ತೆಗೆದುಕೊಂಡಿದೆ.

ಒಟ್ನಲ್ಲಿ ಕೊರೊನಾದಿಂದ ಕಂಗೆಟ್ಟ ಜನ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಉತ್ತರಕನ್ನಡದತ್ತ ಹೆಜ್ಜೆ ಹಾಕುತ್ತಿದ್ದು, ರೆಸಾರ್ಟ್‌, ಹೋಂ ಸ್ಟೇಗಳು ತುಂಬಿ ತುಳುಕುತ್ತಿವೆ. ಜಿಲ್ಲೆಗೆ ಬರುವ ಪ್ರವಾಸಿಗರು ಸೆಲೆಬ್ರೇಷನ್ ನಡುವೆ ಕೊರೊನಾ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಏಕೈಕ ಡಾಲ್ಫಿನ್ ಸೆಂಟರ್​ ಕಾರವಾರದಲ್ಲಿ!