ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು

|

Updated on: May 09, 2021 | 4:44 PM

ಹಾವೇರಿ ನಗರದ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಕ್ರಿಮಿನಾಲಜಿಯಲ್ಲಿ ಎಂಎ ಪದವಿ ಪಡೆದು ಸೆಟ್ ಪರೀಕ್ಷೆ ಪಾಸಾಗಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಆರ್ಭಟ ಶುರುವಾದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಸರಕಾರ ಅತಿಥಿ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಿತ್ತು.

ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು
ಮಾವಿನ ಹಣ್ಣು ವ್ಯಾಪಾರ
Follow us on

ಹಾವೇರಿ: ಕೊರೊನಾ ಅದೆಷ್ಟೋ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದವರ ಪಾಡಂತೂ ಹೇಳತೀರದು. ಕೊರೊನಾ ಆರ್ಭಟ ಶುರುವಾದ ನಂತರದ ಕೆಲವು ತಿಂಗಳುಗಳಿಂದ ಅತಿಥಿ ಉಪನ್ಯಾಸರಿಗೆ ಸಂಬಳವೂ ಇಲ್ಲದೆ, ಕೆಲಸವೂ ಇಲ್ಲದಂತಾಗಿದೆ. ಹೀಗಾಗಿ ಹೊಟ್ಟೆಪಾಡಿಗೆ ಕೆಲವರು ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದಾರೆ.

ಹಾವೇರಿ ನಗರದ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಕ್ರಿಮಿನಾಲಜಿಯಲ್ಲಿ ಎಂಎ ಪದವಿ ಪಡೆದು ಸೆಟ್ ಪರೀಕ್ಷೆ ಪಾಸಾಗಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಆರ್ಭಟ ಶುರುವಾದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಸರಕಾರ ಅತಿಥಿ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಿತ್ತು. ನಂತರದಲ್ಲಿ ಶೇಕಡಾ ಐವತ್ತರಷ್ಟು ಅತಿಥಿ ಉಪನ್ಯಾಸಕರನ್ನು ಮಾತ್ರ ವಾಪಸ್ ಕರೆದುಕೊಂಡಿತು. ಕೊರೊನಾ ಮೊದಲನೇ ಅಲೆ ಆರಂಭದ ನಂತರದಿಂದ ಅತಿಥಿ ಉಪನ್ಯಾಸಕರಿಗೆ ಎಲ್ಲಿಲ್ಲದ ಸಮಸ್ಯೆ ಎದುರಾಯಿತು. ಆಗ ಸರಕಾರ ಕೆಲವು ತಿಂಗಳ ಸಂಬಳ ನೀಡಿತು. ಆದರೆ ಈಗ ಕೆಲವು ತಿಂಗಳುಗಳಿಂದ ಸಂಬಳವೂ ಇಲ್ಲ, ನೂರಾರು ಜನ ಅತಿಥಿ ಉಪನ್ಯಾಸಕರಿಗೆ ಕೆಲಸವೂ ಇಲ್ಲದಂತಾಗಿದೆ. ಹೀಗಾಗಿ ಹೊಟ್ಟೆಪಾಡಿಗೆ ಹಾಗೂ ಕುಟುಂಬ ನಿರ್ವಹಣೆಗೆ ಕೆಲವರು ಹಣ್ಣು ಮಾರಾಟ ಮಾಡಿದರೆ, ಮತ್ತೆ ಕೆಲವರು ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿನ ಅತಿಥಿ ಉಪನ್ಯಾಸಕರ ಪೈಕಿ ಇಪ್ಪತ್ತಕ್ಕೂ ಅಧಿಕ ಜನರು ವಿವಿಧ ತಾಲೂಕುಗಳಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಗಾರೆ ಕೆಲಸ ಮಾಡಿಕೊಂಡಿದ್ದರೆ, ಕೆಲವರು ಊರೂರು ತಿರುಗಾಡಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಕಷ್ಟಪಟ್ಟು ಸ್ನಾತಕೋತ್ತರ ಪದವಿ ಪಡೆದು, ಪರೀಕ್ಷೆಗಳನ್ನೂ ಪಾಸಾಗಿ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರಿಗೆ ಈಗ ಇಂತಹ ಪರಿಸ್ಥಿತಿ ಎದುರಾಗಿದೆ.

ಉದ್ಯೋಗ ಖಾತ್ರಿ

ಆಗಾಗ ಕಾಲೇಜುಗಳು ನಡೆದರೂ ಸರಕಾರ ಮೊದಲು ಕಾರ್ಯನಿರ್ವಹಿಸುತ್ತಿದ್ದವರಲ್ಲಿ ಶೇಕಡಾ ಐವತ್ತರಷ್ಟು ಅತಿಥಿ ಉಪನ್ಯಾಸಕರನ್ನು ಮರಳಿ ಕಾಲೇಜಿಗೆ ಕರೆದುಕೊಂಡಿತು. ಕೊರೊನಾ ಸಮಯದಲ್ಲಿ ಕೆಲವು ತಿಂಗಳುಗಳ ಸಂಬಳ ನೀಡಿತು. ನಂತರದಲ್ಲಿ ಸಂಬಳವೂ ಇಲ್ಲದಂತಾಗಿ.. ನೂರಾರು ಜನ ಅತಿಥಿ ಉಪನ್ಯಾಸಕರು ಕೆಲಸವಿಲ್ಲದಂತಾಗಿ.. ಕುಟುಂಬದ ನಿರ್ವಹಣೆಗಾಗಿ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ಸರಕಾರ ಸುಮಾರು ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರಿಗೆ ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ದಾವಿಸಬೇಕಿದೆ. ಅತಿಥಿ ಉಪನ್ಯಾಸಕರ ಕುಟುಂಬ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಪ್ಯಾಕೇಜ್ ಘೋಷಣೆ ಮಾಡಬೇಕಿದೆ.

ಜಿಲ್ಲೆಯಲ್ಲಿ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಕೆಲಸ, ಕಾಳು ಕಡಿ ವ್ಯಾಪಾರ ಅದು ಇದು ಅಂತಾ ಕೆಲಸ ಮಾಡುತ್ತಿರುವವರ ಪೈಕಿ ಕೆಲವರು ಎಂಎ ಮುಗಿಸಿ ಸೆಟ್ ಪಾಸಾದವರಿದ್ದಾರೆ. ಎಂಎ, ಪಿಎಚ್ ಡಿ ಪದವಿ ಪಡೆದವರಿದ್ದಾರೆ. ಆದರೆ ಸರಕಾರದ ನೆರವು ಸಿಗದೆ ಈಗ ಏನೆಲ್ಲ ಪದವಿ ಪಡೆದಿದ್ದರೂ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೂಡಲೆ ಸರಕಾರ ರಾಜ್ಯದ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ನೆರವಿಗೆ ದಾವಿಸಬೇಕಿದೆ.

ಇದನ್ನೂ ಓದಿ

ಆನ್​​ಲೈನ್​ನಲ್ಲಿ ಆರ್ಡರ್​ ಮಾಡಿದರೆ ಮನೆಬಾಗಿಲಿಗೆ ಬರುತ್ತದೆ ವೈದ್ಯಕೀಯ ಆಕ್ಸಿಜನ್​ ಸಿಲಿಂಡರ್​; ಈ ಜಿಲ್ಲೆಯಲ್ಲಿ ವಿನೂತನ ಕ್ರಮ

ಚಿತ್ರದುರ್ಗದಲ್ಲಿ ಮನೆಯೊಳಗೆ ನುಗ್ಗಿದ ಚಿರತೆ; ಸ್ಥಳಕ್ಕೆ ಜಮಾಯಿಸಿದ ಸಾವಿರಾರು ಜನ

(Guest lecturers are working on the mango fruit business and Udyoga Khatri work at haveri)