ಸ್ಯಾನಿಟೈಸರ್ ಎಂದು ಮೌತ್ ವಾಶ್ ಮಾರುತ್ತಿದ್ದವರು ಪೊಲೀಸ್ ವಶಕ್ಕೆ

ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮೊದಲು ಹಣ ಹಾಕಿಸಿಕೊಂಡು ನಂತರ ಡೆಲಿವರಿ ಕೊಡುತ್ತಿದ್ದರು. ಸಾಹಿಲ್ ಎಂಬುವವರಿಗೆ ಈ ಹಿಂದೆ ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಇಟ್ಟು ಮಾರಾಟ ಮಾಡಿದ್ದರ ಆರೋಪವೂ ಈ ವ್ಯಕ್ತಿಗಳ ಮೇಲಿತ್ತು.

ಸ್ಯಾನಿಟೈಸರ್ ಎಂದು ಮೌತ್ ವಾಶ್ ಮಾರುತ್ತಿದ್ದವರು ಪೊಲೀಸ್ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us
guruganesh bhat
|

Updated on: May 09, 2021 | 4:46 PM

ಬೆಂಗಳೂರು: ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಿನ್ನೆ ತಡರಾತ್ರಿ ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಾಸಿಪಾಳ್ಯದ ಹ್ಯಾರೀಸ್ ಎಂಬುವವರಿಗೆ ಸ್ಯಾನಿಟೈಸರ್ ಮಾರಾಟ ಮಾಡಲು ಬಂದಿದ್ದ ಇಬ್ಬರು ಯುವಕರು ಐದು ಲೀಟರ್ ಸ್ಯಾನಿಟೈಸರ್ ಬಾಟಲಿಗೆ 10 ಸಾವಿರ ಹಣವನ್ನು ನಿಗದಿಪಡಿಸಿದ್ದರು. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮೊದಲು ಹಣ ಹಾಕಿಸಿಕೊಂಡು ನಂತರ ಡೆಲಿವರಿ ಕೊಡುತ್ತಿದ್ದರು. ಸಾಹಿಲ್ ಎಂಬುವವರಿಗೆ ಈ ಹಿಂದೆ ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಇಟ್ಟು ಮಾರಾಟ ಮಾಡಿದ್ದರ ಆರೋಪವೂ ಈ ವ್ಯಕ್ತಿಗಳ ಮೇಲಿತ್ತು.

ಈ ಹಿಂದೆ ಮೋಸಹೋಗಿದ್ದ ಸಾಹಿಲ್, ಸುಧಾಮನಗರ ಮಾಜಿ ಕಾರ್ಪೊರೇಟರ್ ಆರ್.ವಿ ಯುವರಾಜ್​ಗೆ ಸ್ಯಾನಿಟೈಸರ್ ಹೆಸರಲ್ಲಿ ಮೌತ್ ವಾಶ್ ಮಾರಾಟ ಮಾಡ್ತಿರುವ ಬಗ್ಗೆ ವಿಷಯ ತಿಳಿಸಿದ್ದರು. ನಿನ್ನೆಯೂ ಇದೇ ರೀತಿ ನಕಲಿ ಸ್ಯಾನಿಟೈಸರ್ ಮಾರಾಟ ಮಾಡಲು ಕಲಾಸಿಪಾಳ್ಯಕ್ಕೆ ಆರೋಪಿಗಳು ಬಂದ ವೇಳೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೈಸೂರು ರಸ್ತೆಯ ಫ್ಯಾಕ್ಟರಿಯಿಂದ ನಕಲಿ ಸ್ಯಾನಿಟೈಸರ್ ತಂದು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೂಡಲೇ ದೇಶ ತೊರೆಯಿರಿ! ಕೋವಿಡ್-19 ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ವಿರುದ್ಧ ಸಿಟ್ಟಾದ ಮಾಲ್ಡೀವ್ಸ್‌ ಕ್ರೀಡಾ ಸಚಿವ

ಬೆಂಗಳೂರು ಸಂಕಷ್ಟದಲ್ಲಿದೆ, ಹೆಚ್ಚುವರಿ ಬೆಡ್, ಆಕ್ಸಿಜನ್ ಅಗತ್ಯ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

(Bengaluru Police arrest 2 people who sale mouth wash in the name of sanitiser)