ವೇದಿಕೆ ಮೇಲೆ ಹೆಚ್ ಡಿ ಕುಮಾರಸ್ವಾಮಿ ಪಕ್ಕ ಕುಳಿತಿದ್ದ ಹೆಚ್ ವಿಶ್ವನಾಥ್ ರನ್ನು ಅರ್ಥಮಾಡಿಕೊಳ್ಳುವುದು ಕಷ್ಟ!

|

Updated on: Apr 06, 2024 | 5:16 PM

ವರು ಬಿಜೆಪಿಯಲ್ಲಿ ಮುಂದುವರೆದರೂ ಕಾಂಗ್ರೆಸ್ ನಾಯಕರ ಗುಣಗಾನ ಮಾಡೋದು ತಮ್ಮ ಪಕ್ಷದ ನಾಯಕರನ್ನು ತೆಗಳುವುದನ್ನು ನಿಲ್ಲಿಸಲಿಲ್ಲ. ಅವರ ಮತ್ತು ಅವರಷ್ಟೇ ಹಿರಿಯ ನಾಯಕ, ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ನಡುವೆ ನಡೆದ ಮಾತಿನ ಕಾಳಗ ಕನ್ನಡಿಗರು ಮರೆತಿರಲಾರರು.

ಮೈಸೂರು: ಮೀನಿನ ಹೆಜ್ಜೆ ಜಾಡು ಮತ್ತು ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಳ್ಳಲಾಗದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ ರಾಜ್ಯದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ (H Vishwanath) ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ ಅನಿಸುತ್ತೆ ಮಾರಾಯ್ರೇ. ತಮ್ಮ ಪಕ್ಷದ ನಾಯಕರನ್ನು ಅವರು ಯಾವ ಮಟ್ಟಿಗೆ ಟೀಕಿಸುತ್ತಾರೆಂದರೆ, ಇನ್ನೇನು ತೊರೆಬಿಡುತ್ತಾರೆ ಅಂತ ಭಾಸವಾಗುತ್ತದೆ. ಇಲ್ಲಿ ಕಾಣಿತ್ತಿರುವ ದೃಶ್ಯವನ್ನು ನೀವು ವಿಧಾನಭಾ ಚುನಾವಣೆಯ (Assembly polls ) ಸಂದರ್ಭದಲ್ಲಿ ಊಹಿಸಿಕೊಳ್ಳಬಹುದಿತ್ತೇ? ಆಗ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರೇಬಿಟ್ಟರು ಅಂತ ಅನಿಸಿತ್ತು. ಆದರೆ ಅವರು ಬಿಜೆಪಿಯಲ್ಲಿ ಮುಂದುವರೆದರೂ ಕಾಂಗ್ರೆಸ್ ನಾಯಕರ ಗುಣಗಾನ ಮಾಡೋದು ತಮ್ಮ ಪಕ್ಷದ ನಾಯಕರನ್ನು ತೆಗಳುವುದನ್ನು ನಿಲ್ಲಿಸಲಿಲ್ಲ. ಅವರ ಮತ್ತು ಅವರಷ್ಟೇ ಹಿರಿಯ ನಾಯಕ, ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ನಡುವೆ ನಡೆದ ಮಾತಿನ ಕಾಳಗ ಕನ್ನಡಿಗರು ಮರೆತಿರಲಾರರು. ಇವತ್ತು ನೋಡಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಜೊತೆ ವೇದಿಕೆಯಲ್ಲಿ ಕುಳಿತಿದ್ದಾರೆ. ಮಂಡ್ಯದಿಂದ ನೀವೇ ಸ್ಪರ್ಧಿಸಬೇಕು ಅಂತ ಅವರು ಕುಮಾರಸ್ವಾಮಿಯವರಿಗೆ ಫೋನ್ ಮಾಡಿ ತಿಳಿಸಿದ್ದರಂತೆ! ಮೊನ್ನೆ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್ ತಮ್ಮ ಮನೆಗೆ ಭೇಟಿ ನೀಡಿದ ಬಳಿಕ ವಿಶ್ವನಾಥ್ ಮನಪರಿವರ್ತನೆಯಾಯಿತೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ-ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ ನಡೆಯಲ್ಲ, ಎರಡು ಪಕ್ಷಗಳಿಗೂ ಪ್ರಯೋಜನವಿಲ್ಲ: ಹೆಚ್ ವಿಶ್ವನಾಥ್

Follow us on