ಬಿಜೆಪಿಯಿಂದ ವಿಮುಖರಾಗಿರುವ ಹೆಚ್ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ ಒಡೆಯರ್

ಬಿಜೆಪಿಯಿಂದ ವಿಮುಖರಾಗಿರುವ ಹೆಚ್ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ ಒಡೆಯರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 03, 2024 | 6:44 PM

ಯದುವೀರ್ ಅವರು ವಿಶ್ವನಾಥ್ ಮನೆಗೆ ಬಂದಿದ್ದು ವಿಶೇಷ ಅನಿಸಲು ಕಾರಣವಿದೆ. ವಿಶ್ವನಾಥ್ ಕಳೆದ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಅವರ ಒಡನಾಟವೆಲ್ಲ ಕಾಂಗ್ರೆಸ್ ನಾಯಕರೊಂದಿಗಿದೆ. ಬಿಜೆಪಿ ನಾಯಕರನ್ನು ಅವರು ಒಂದೇ ಸಮ ಟೀಕಿಸುತ್ತಿರುತ್ತಾರೆ.

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ರಾಜಕೀಯಕ್ಕೆ ತೀರ ಹೊಸಬರಾದರೂ ರಾಜಕೀಯ ವರಸೆಗಳ ಬಗ್ಗೆ ತಿಳಿದುಕೊಂಡಿರುವಂತಿದೆ. ಇಂದು ಅವರು ನಾಮಪತ್ರ ಸಲ್ಲಿಸಿದ್ದನ್ನು ಬೆಳಗ್ಗೆ ವರದಿ ಮಾಡಿದ್ದೇವೆ. ಮಧ್ಯಾಹದ ಸಮಯ ಯದುವೀರ್ ಬಿಜೆಪಿಯ ವಿಧಾನ ಪರಿಷತ್ ಸದಸ್ಯ (MLC) ಹೆಚ್ ವಿಶ್ವನಾಥ್ (H Vishwanath) ಅವರ ಮನೆಗೆ ಭೇಟಿ ನೀಡಿದರು. ಹಿರಿಯ ನಾಯಕನ ಮನೆ ಹೆಣ್ಣುಮಕ್ಕಳು ಅರತಿ ಬೆಳಗಿ ಯದುವೀರ್ ರನ್ನು ಬರ ಮಾಡಿಕೊಂಡರು. ಕುಟುಂಬದ ಸದಸ್ಯರೊಬ್ಬರು ಬೋಕೆಯನ್ನು ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿಗೆ ನೀಡಿದರು. ಅವರನ್ನು ಬರಮಾಡಿಕೊಳ್ಳಲು ವಿಶ್ವನಾಥ್ ಮನೆಯಂಗಳಕ್ಕೆ ಬಂದರು. ಯದುವೀರ್ ಅವರು ವಿಶ್ವನಾಥ್ ಮನೆಗೆ ಬಂದಿದ್ದು ವಿಶೇಷ ಅನಿಸಲು ಕಾರಣವಿದೆ.

ವಿಶ್ವನಾಥ್ ಕಳೆದ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಅವರ ಒಡನಾಟವೆಲ್ಲ ಕಾಂಗ್ರೆಸ್ ನಾಯಕರೊಂದಿಗಿದೆ. ಬಿಜೆಪಿ ನಾಯಕರನ್ನು ಅವರು ಒಂದೇ ಸಮ ಟೀಕಿಸುತ್ತಿರುತ್ತಾರೆ. ಪರಿಸ್ಥಿತಿ ಹಾಗಿರುವಾಗ ಯದುವೀರ್ ಭೇಟಿ ಖಂಡಿತ ವಿಶೇಷ ಅನಿಸುತ್ತದೆ ಮತ್ತು ಅವರ ರಾಜಕೀಯ ವರಸೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಯದುವೀರ್ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ವಿಶ್ವನಾಥ್ ಮನೆಗೆ ಭೇಟಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ-ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ ನಡೆಯಲ್ಲ, ಎರಡು ಪಕ್ಷಗಳಿಗೂ ಪ್ರಯೋಜನವಿಲ್ಲ: ಹೆಚ್ ವಿಶ್ವನಾಥ್

Published on: Apr 03, 2024 06:43 PM