ಹಿಂದಿನ ಮಹಾರಾಜರು ಮಾಡಿದ ಉತ್ತಮ ಕೆಲಸಗಳಿಂದಾಗಿ ಗೌರವಾದರಗಳು ಲಭ್ಯವಾಗುತ್ತಿವೆ: ಯದುವೀರ್ ಕೃಷ್ಣದತ್ ಒಡೆಯರ್
ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಅವರಿಗಿದೆ. ಯದುವೀರ್ ತಾನೊಬ್ಬ ಜನಸಾಮಾನ್ಯ ಅಂತ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಜನ ತನ್ನನ್ನು ಮಹಾರಾಜಾ ಅಂತ ಪರಿಗಣಿಸುತ್ತಿರುವುದು ಹಿಂದಿನ ಒಡೆಯರ್ ಅರಸರು ಮಾಡಿದ ಉತ್ತಮ ಕೆಲಸಗಳ ಫಲ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ.
ಮೈಸೂರು: ನಾವು ಈಗಾಗಲೇ ಹೇಳಿದಂತೆ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಬಲವಂತದ ರಾಜಕಾರಣಿ ಅಲ್ಲ ಅವರು ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಂಡೇ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಮೈಸೂರು-ಕೊಡಗು ಕ್ಷೇತ್ರದಿಂದ (Mysuru-Kodagu LS seat) ಸ್ಪರ್ಧಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅವರು ನಗರದ ಕುಕ್ಕರಹಳ್ಳಿ ಕೆರೆ ಪ್ರದೇಶದದಲ್ಲಿ ಮತಬೇಟೆಗೆ ಇಳಿದಾಗ ಟಿವಿ9 ಮಸೂರು ವರದಿಗಾರ ಅವರೊಂದಿಗೆ ಮಾತಾಡಿದ್ದಾರೆ. ಜನರಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳುವ ಯದುವೀರ್ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಅಭಿವೃದ್ಧಿಗೆ ನೀಲಿನಕ್ಷೆ ಕೂಡ ತಯಾರು ಮಾಡಿಕೊಂಡಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಬಹುಸಂಖ್ಯಾತ ಜನ ಬೇಸಾಯವನ್ನು ಅವಲಂಬಿಸಿರುವುದರಿಂದ ರೈತರ ಯೋಗಕ್ಷೇಮದ ಕಡೆ ಹೆಚ್ಚು ಒತ್ತು ಕೊಡಬೇಕಿದೆ ಎಂದು ಅವರು ಹೇಳುತ್ತಾರೆ. ಹಾಗೆಯೇ, ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಅವರಿಗಿದೆ. ಯದುವೀರ್ ತಾನೊಬ್ಬ ಜನಸಾಮಾನ್ಯ ಅಂತ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಜನ ತನ್ನನ್ನು ಮಹಾರಾಜಾ ಅಂತ ಪರಿಗಣಿಸುತ್ತಿರುವುದು ಹಿಂದಿನ ಒಡೆಯರ್ ಅರಸರು ಮಾಡಿದ ಉತ್ತಮ ಕೆಲಸಗಳ ಫಲ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಪರ್ಕದಲ್ಲಿರುವ ಪ್ರತಾಪ್ ಸಿಂಹ ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿದ್ದಾರೆ: ಯದುವೀರ್ ಕೃಷ್ಣದತ್ ಒಡೆಯರ್