ಲೋಕಸಭಾ ಚುನಾವಣೆ ಮುಗಿಯುವವರೆಗೆ ಅಪ್ಪ-ಮಗನ ರಿಪೇರಿ ಕೆಲಸವನ್ನು ಬೇರೆಯವರಿಗೆ ವಹಿಸಿಕೊಟ್ಟಿದ್ದೇನೆ: ಬಸನಗೌಡ ಯತ್ನಾಳ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಈಗ ಯಾವುದೇ ನೈತಿಕತೆ ಉಳಿದಿಲ್ಲ, ಮೊದಲಿಂದಲೂ ಹಿಂದೂತ್ವನ್ನು ವಿರೋಧ ಮಾಡಿಕೊಂಡ ಬಂದ ಅವರು ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉಮೇದುವಾರರು ಸೋತರೆ ಸಿದ್ದರಾಮಯ್ಯ ತಲೆದಂಡ ನಿಶ್ಚಿತ ಎಂದು ಯತ್ನಾಳ್ ಹೇಳಿದರು.
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Pujari) ಪರ ಉಡುಪಿಯಲ್ಲಿ ಪ್ರಚಾರ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಪ್ಪ ಮಗನನ್ನು (ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ) ರಿಪೇರಿ ಮಾಡುವ ಕೆಲಸವನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆಯವರಿಗೆ ವಹಿಸಿಕೊಟ್ಟಿರುವೆ ಎಂದು ಹೇಳಿದರು. ಪರೋಕ್ಷವಾಗಿ ಅವರು ಆ ಕೆಲಸವನ್ನು ಕೆಎಸ್ ಈಶ್ವರಪ್ಪ (KS Eshwarappa) ಮಾಡುತ್ತಿದ್ದಾರೆ ಎಂದರು. ಸಾಮಾನ್ಯವಾಗಿ ಜಾತಿ ಬಗ್ಗೆ ಮಾತಾಡದ ಕಾಂಗ್ರೆಸ್ ನಾಯಕರು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯ ಜಾತಿಯನ್ನೇ ಮುಖ್ಯ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಕೇಳಿದಾಗ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಈಗ ಯಾವುದೇ ನೈತಿಕತೆ ಉಳಿದಿಲ್ಲ, ಮೊದಲಿಂದಲೂ ಹಿಂದೂತ್ವನ್ನು ವಿರೋಧ ಮಾಡಿಕೊಂಡ ಬಂದ ಅವರು ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉಮೇದುವಾರರು ಸೋತರೆ ಸಿದ್ದರಾಮಯ್ಯ ತಲೆದಂಡ ನಿಶ್ಚಿತ, ಹಾಗಾಗೇ ಅವರು ಹತಾಶರಾಗಿ ತಮ್ಮ ಕೈಹಿಡಿಯಿರಿ ಅಂತ ಮತದಾರರ ಬಳಿ ಅವಲತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಧಾನಿ ಮೋದಿ ಅಧಿಕಾರದ ಮೊದಲ 10 ವರ್ಷ ಕೇವಲ ಟ್ರೇಲರ್, ಮುಂದಿನ 5 ವರ್ಷಗಳಲ್ಲಿ ಪೂರ್ತಿ ಪಿಕ್ಟರ್ ಅನಾವರಣ: ಬಸನಗೌಡ ಯತ್ನಾಳ್