AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ತೆರಳಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ತೆರಳಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 4:01 PM

Share

ಸರ್ದಾರ್ ವಲ್ಲಬ್ ಭಾಯ್ ಪಟೇಲ್ ನಂತರ ಭಾರತದ ಉಕ್ಕಿನ ಮನುಷ್ಯ ಎನಿಸಿಕೊಂಡಿರುವ ಅಮಿತ್ ಶಾ ಅವರ ಕರೆಯ ಮೇರೆಗೆ ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ ಈಶ್ಪರಪ್ಪ ಫೋನಲ್ಲಿ ಮಾತಾಡುವಾಗಲೇ ಎಲ್ಲ ವಿಷಯ ತಿಳಿಸಿದ್ದೇನೆ, ಅದೆಲ್ಲವನ್ನು ಮತ್ತೊಮ್ಮೆ ಅವರಿಗೆ ಮುಖಾಮುಖಿಯಾಗಿ ವಿವರಿಸುತ್ತೇನೆ ಎಂದರು.

ಶಿವಮೊಗ್ಗ: ನಿನ್ನೆ ಸುದ್ದಿಗೊಷ್ಟಿಯೊಂದರಲ್ಲಿ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮನ್ನು ದೆಹಲಿಗೆ ಬಂದು ಕಾಣುವಂತೆ ಫೋನ್ ಮಾಡಿ ಹೇಳಿದ್ದನ್ನು ಮಧ್ಯಮದವರಿಗೆ ತಿಳಿಸಿದ್ದರು. ಇದು ಶಿವಮೊಗ್ಗದಿಂದ ದೆಹಲಿಗೆ ವಿಮಾನ ಹತ್ತುವ ಮೊದಲು ಪತ್ರಕರ್ತರೊಂದಿಗೆ ಮಾತಾಡಿದ ಅವರು, ಸರ್ದಾರ್ ವಲ್ಲಬ್ ಭಾಯ್ ಪಟೇಲ್ ನಂತರ ಭಾರತದ ಉಕ್ಕಿನ ಮನುಷ್ಯ (Iron Man) ಎನಿಸಿಕೊಂಡಿರುವ ಅಮಿತ್ ಶಾ ಅವರ ಕರೆಯ ಮೇರೆಗೆ ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದರು. ಫೋನಲ್ಲಿ ಮಾತಾಡುವಾಗಲೇ ಎಲ್ಲ ವಿಷಯ ತಿಳಿಸಿದ್ದೇನೆ, ಅದೆಲ್ಲವನ್ನು ಮತ್ತೊಮ್ಮೆ ಅವರಿಗೆ ಮುಖಾಮುಖಿಯಾಗಿ ವಿವರಿಸುತ್ತೇನೆ ಎಂದು ಹೇಳಿದ ಅವರು ತಮ್ಮ ಕಾರ್ಯಕರ್ತರು ತಾನು ಬಂದ ಕೂಡಲೇ ಪ್ರಚಾರ ಕಾರ್ಯ ಆರಂಭಿಸೋಣ ಎಂದಿದ್ದಾರೆ ಎಂದರು. ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆ ಅಂತ ಗೊತ್ತಿಲ್ಲ, ಅದರೆ ಅವರು ಪಕ್ಷದ ಹಿರಿಯರಾಗಿರುವುದರಿಂದ ಅವರ ಮಾತಿಗೆ ಗೌರವ ನೀಡಿ ದೆಹಲಿಗೆ ಹೊಗುತ್ತಿರುವುದಾಗಿ ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಾಪ್ ಸಿಂಹನಂಥ ರಾಷ್ಟ್ರಭಕ್ತ ಮತ್ತು ಹಿಂದೂತ್ವವಾದಿಯನ್ನು ಯಾರೂ ಖಂಡಿಸಲಾಗದು: ಕೆ ಎಸ್ ಈಶ್ವರಪ್ಪ