ಪ್ರತಾಪ್ ಸಿಂಹನಂಥ ರಾಷ್ಟ್ರಭಕ್ತ ಮತ್ತು ಹಿಂದೂತ್ವವಾದಿಯನ್ನು ಯಾರೂ ಖಂಡಿಸಲಾಗದು: ಕೆ ಎಸ್ ಈಶ್ವರಪ್ಪ

ಪ್ರತಾಪ್ ಸಿಂಹನಂಥ ರಾಷ್ಟ್ರಭಕ್ತ ಮತ್ತು ಹಿಂದೂತ್ವವಾದಿಯನ್ನು ಯಾರೂ ಖಂಡಿಸಲಾಗದು: ಕೆ ಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2023 | 5:50 PM

ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ, ಅಲಹಾಬಾದ್ ಉಚ್ಚ ನ್ಯಾಯಾಲಯವು ಮಥುರಾದಲ್ಲಿತರುವ ಶಾಹಿ ಈದ್ಗಾ ದರ್ಗಾದ ಸರ್ವೇ ನಡೆಸಲು ನೀಡಿರುವ ಆದೇಶವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಲ್ಲ ಎಂದು ಹೇಳಿದ ಈಶ್ವರಪ್ಪ, ಕೇವಲ ರಾಷ್ಟ್ರಭಕ್ತ ಮುಸಲ್ಮಾನರು ಮಾತ್ರ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತಾರೆ, ಕಾಂಗ್ರೆಸ್ ನಾಯಕರಂಥ ರಾಷ್ಟ್ರವಿರೋಧಿ ಮುಸಲ್ಮಾನರು ತೀರ್ಪನ್ನು ವಿರೋಧಿಸುತ್ತಾರೆ ಎಂದರು.

ಶಿವಮೊಗ್ಗ: ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಸಂಸತ್ ಭವನದ (Parliament House) ಭಾರೀ ಭದ್ರತೆಯ ಹೊರತಾಗಿಯೂ ಕಿಡಿಗೇಡಿ ಯುವಕರ ಒಳಗೆ ನುಗ್ಗಿದ್ದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿ ಎಂದು ಹೇಳಿದರು. ಸಂಸದ ಪ್ರತಾಪ್ ಸಿಂಹ (Pratap Simha) ಹೆಸರಲ್ಲಿ ಯುವಕರು ವಿಸಿಟರ್ಸ್ ಪಾಸು ಪಡೆದು ಒಳನುಗ್ಗಿದ್ದನ್ನು ಪತ್ರಕರ್ತರು ಅವರ ಗಮನಕ್ಕೆ ತಂದಾಗ ಅಚಾತುರ್ಯ ನಡೆದಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ಮೊದಲ ದಿನದ ಕಾರ್ಯಕಲಾಪ ನಡೆಯುತ್ತಿದ್ದಾಗ, ಯಜಮಾನರೊಬ್ಬರು, ವಿಧಾನಸಭೆಯನ್ನು ಪ್ರವೇಶಿಸಿ ಶಾಸಕರು ಕೂರುವ ಸೀಟಿನ ಮೇಲೆ ಆಸೀನರಾಗಿದ್ದರು ಎಂದು ಈಶ್ವರಪ್ಪ ಹೇಳಿದರು. ಪ್ರತಾಪ್ ವಿರುದ್ಧ ತನಿಖೆ ನಡೆಯಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಉದ್ಯೋಗವಿಲ್ಲ, ಪ್ರತಾಪ್ ಸಿಂಹನಂಥ ದೇಶಭಕ್ತ ಮತ್ತು ಹಿಂದೂತ್ವವಾದಿಯ ಮೇಲೆ ಶಂಕೆ ಪಡೋದು, ಖಂಡಿಸೋದು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ