ಉತ್ತರ ಕರ್ನಾಟಕ ಭಕ್ಷ್ಯಗಳನ್ನು ಸಚಿವರೊಂದಿಗೆ ಕೂತು ಸವಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ
ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೊಸರನ್ನು ಮಣ್ಣಿನ ಪಾತ್ರೆಗಳಲ್ಲಿ ಮಾರೋದುಂಟು. ಊಟಕ್ಕೆ ಕೂತಾಗಲೂ ಮೊಸರನ್ನು ಚಿಕ್ಕಗಾತ್ರದ ಮಣ್ಣಿನ ಮಡಕೆಯಲ್ಲಿ ಇಟ್ಟಿರುತ್ತಾರೆ. ಇಲ್ಲಿ ಅದನ್ನು ಕಾಣಬಹುದು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಮುಂದೆ ಒಂದು ಮೊಸರಿನ ಮಡಕೆ ಇದೆ. ಉತ್ತರ ಕರ್ನಾಟಕದಲ್ಲಿ ಮೊಸರು ಮತ್ತು ಶೇಂಗಾ ಹಿಂಡಿ ಇಲ್ಲದ ಊಟ ಅಪೂರ್ಣವೆನಿಸುತ್ತದೆ. ರೊಟ್ಟಿ ಜೊತೆ ಪಲ್ಯಗಳು ಮತ್ತು ಮೊಸರು, ಶೇಂಗಾ ಪುಡಿ ಚಟ್ನಿ ಇರಲೇಬೇಕು.
ಬೆಳಗಾವಿ: ಸುವರ್ಣಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಿರಿ ಧಾನ್ಯ ಮತ್ತು ಸಾವಯವ ಮೇಳದ ಪೂರ್ವಭಾವಿ ಕಾರ್ಯಕ್ರಮದ ಉದ್ಘಾಟನೆ ಬಳಿಕ ಶಾಸಕರು, ಸಚಿವರು, ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಜೊತೆಗೂಡಿ ಉತ್ತರ ಕರ್ನಾಟಕದ ಭರ್ಜರಿ ಲಂಚ್ ಸವಿದರು. ವಿಪಕ್ಷ ನಾಯಕ (Leader of Opposition) ಆರ್ ಅಶೋಕ (R Ashoka) ಅವರು ಸಚಿವರುಗಳೊಂದಿಗೆ ಕೂತು ಊಟ ಮಾಡಿದ್ದು ವಿಶೇಷ ಅನಿಸಿತು. ದೃಶ್ಯಗಳಲ್ಲಿ ಕಾಣುತ್ತಿರುವಂತೆ ಅವರು ಎಂಸಿ ಸುಧಾಕರ್, ಡಿ ಸುಧಾಕರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಹೆಚ್ ಸಿ ಮಹಾದೇವಪ್ಪ ಮತ್ತು ಜಿ ಪರಮೇಶ್ವರ್ ಅವರೊಂದಿಗೆ ಕೂತು ಊಟ ಮಾಡುತ್ತಿದ್ದಾರೆ. ಅವರ ಬದಿಯ ಟೇಬಲ್ ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟ್ಟಿ (Basavaraj Horatti), ವಿಧಾನಸಭಾಧ್ಯಕ್ಷ ಯುಟಿ ಖಾದರ್ (UT Khader), ಹೆಚ್ ಕೆ ಪಾಟೀಲ್ ಮೊದಲಾದವರೆಲ್ಲ ಉತ್ತರ ಕರ್ನಾಟಕದ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ