ನಾಮಪತ್ರ ಸಲ್ಲಿಸುವ ಮೊದಲು ಪೊಲೀಸರೊಂದಿಗೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಕಿರಿಕ್!

ನಾಮಪತ್ರ ಸಲ್ಲಿಸುವ ಮೊದಲು ಪೊಲೀಸರೊಂದಿಗೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಕಿರಿಕ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 4:36 PM

ಅವರ ಕೂಗಾಟದಿಂದ ತಾಳ್ಮೆ ಕಳೆದುಕೊಂಡ ಚಂದ್ರಶೇಖರ್ ಐದಕ್ಕಿಂತ ಹೆಚ್ಚು ಜನರನ್ನು ಒಳಗಡೆ ಕಳಿಸಬಾರದೆಂದು ಆದೇಶವಿದೆ ಅದನ್ನು ಪಾಲಿಸುತ್ತಿದ್ದೇವೆ, ಇದರಲ್ಲಿ ತಮಾಷೆ ಎಂಥದ್ದೂ ಇಲ್ಲ ಎಂದರು. ನಂತರ ವಿಷಯ ಮನವರಿಕೆ ಮಾಡಿಕೊಂಡ ಸೋಮಣ್ಣ ಐವರೊಂದಿಗೆ ಒಳಗಡೆ ಹೋಗಿ ನಾಮಪತ್ರ ಸಲ್ಲಿಸಿದರು.

ತುಮಕೂರು: ಪೊಲೀಸ್ (police) ಮತ್ತು ಜನಪ್ರತಿನಿಧಿಗಳ ನಡುವೆ ನಡೆಯುವ ತಿಕ್ಕಾಟಗಳು ಅಪರೂಪವೇನಲ್ಲ. ಆದರೆ ವಿ ಸೋಮಣ್ಣ (V Somanna) ಅವರಂಥ ಹಿರಿಯ ಮತ್ತು ಸಜ್ಜನ ರಾಜಕಾರಣಿ ಪೊಲೀಸರ ಜೊತೆ ವಾಗ್ವಾದಕ್ಕಿಳಿಯುವುದು ಖಂಡಿತವಾಗಿಯೂ ಅಪರೂಪವೇ. ಅಸಲಿಗೆ ನಡೆದಿದ್ದೇನೆಂದರೆ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ (DC office) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಹೋದಾಗ ತುಮಕೂರು ಡಿವೈಎಸ್ ಪಿ ನೇತೃತ್ವದ ಪೊಲೀಸ್ ತಂಡ ಅವರನ್ನು ತಡೆದು ಅಭ್ಯರ್ಥಿ ಸೇರಿ ಐದು ಜನಕ್ಕಿಂತ ಜಾಸ್ತಿ ಒಳಗಡೆ ಹೋಗುವಂತಿಲ್ಲ ಎಂದು ತಿಳಿಸಿತು. ಅಷ್ಟಕ್ಕೆ ಕೋಪಾವಿಷ್ಟರಾದ ಸೋಮಣ್ಣ ಏನು ತಮಾಷೆ ಮಾಡುತ್ತಿದ್ದೀರಾ ಅನ್ನುತ್ತಾ ಪೊಲೀಸರ ಮೇಲೆ ರೇಗಾಡತೊಡಗಿದರು. ಅವರ ಕೂಗಾಟದಿಂದ ತಾಳ್ಮೆ ಕಳೆದುಕೊಂಡ ಚಂದ್ರಶೇಖರ್ ಐದಕ್ಕಿಂತ ಹೆಚ್ಚು ಜನರನ್ನು ಒಳಗಡೆ ಕಳಿಸಬಾರದೆಂದು ಆದೇಶವಿದೆ ಅದನ್ನು ಪಾಲಿಸುತ್ತಿದ್ದೇವೆ, ಇದರಲ್ಲಿ ತಮಾಷೆ ಎಂಥದ್ದೂ ಇಲ್ಲ ಎಂದರು. ನಂತರ ವಿಷಯ ಮನವರಿಕೆ ಮಾಡಿಕೊಂಡ ಸೋಮಣ್ಣ ಐವರೊಂದಿಗೆ ಒಳಗಡೆ ಹೋಗಿ ನಾಮಪತ್ರ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಮಕೂರು ಬಿಜೆಪಿ ಟಿಕೆಟ್​ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?