ನಾಮಪತ್ರ ಸಲ್ಲಿಕೆ ವೇಳೆಯೇ ಕಿರಿಕ್ ಮಾಡಿಕೊಂಡ ಬಿಜೆಪಿ ಅಭ್ಯರ್ಥಿ ಸೋಮಣ್ಣ: ವಿಡಿಯೋ ನೋಡಿ
ತುಮಕೂರು ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಪೊಲೀಸರ ನಡುವೆ ಕಿರಿಕ್ ಉಂಟಾಗಿರುವಂತಹ ಘಟನೆ ನಡೆದಿದೆ. ನಾಮಪತ್ರ ಸಲ್ಲಿಸಲು ಡಿಸಿ ಕಚೇರಿ ಒಳಗೆ ಬಿಡುವ ವಿಚಾರವಾಗಿ ತುಮಕೂರು ಡಿವೈಎಸ್ಪಿ ಚಂದ್ರಶೇಖರ ಮತ್ತು ಸೋಮಣ್ಣ ನಡುವೆ ಕಿರಿಕ್ ಆಗಿದೆ.
ತುಮಕೂರು, ಮಾರ್ಚ್ 03: ತುಮಕೂರು ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V. Somanna) ಮತ್ತು ಪೊಲೀಸರ ನಡುವೆ ಕಿರಿಕ್ ಉಂಟಾಗಿರುವಂತಹ ಘಟನೆ ನಡೆದಿದೆ. ನಾಮಪತ್ರ ಸಲ್ಲಿಸಲು ಡಿಸಿ ಕಚೇರಿ ಒಳಗೆ ಬಿಡುವ ವಿಚಾರವಾಗಿ ತುಮಕೂರು ಡಿವೈಎಸ್ಪಿ ಚಂದ್ರಶೇಖರ ಮತ್ತು ಸೋಮಣ್ಣ ನಡುವೆ ಕಿರಿಕ್ ಆಗಿದೆ. ‘ಏನ್ ತಮಾಷೆ ಮಾಡ್ತಿದ್ದೀರಾ’ ಎಂದು ಪೊಲೀಸರಿಗೆ ಸೋಮಣ್ಣ ಪ್ರಶ್ನೆ ಮಾಡಿದ್ದು, ‘ತಮಾಷೆ ಏನಿಲ್ಲ, ಐವರಿಗೆ ಮಾತ್ರ ಅವಕಾಶ ಅಷ್ಟೇ’ ಎಂದು ಪೊಲೀಸರು ಹೇಳಿದ್ದಾರೆ. ‘ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಸೇರಿ ಐವರಿಗೆ ಮಾತ್ರ ಅವಕಾಶ. ನಾಮಪತ್ರ 3 ಸೆಟ್ ಇದೆ ಮುಖಂಡರನ್ನು ಬಿಡಿ’ ಎಂದ ಸೋಮಣ್ಣ, ‘ಇಲ್ಲಾ ಸರ್ ಎಲ್ಲರನ್ನೂ ಒಳಗೆ ಬಿಡಲು ಆಗಲ್ಲ’ವೆಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ನೋಡಿ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.