ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲವೆಂದ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಘೋಷಣೆ ಮಾಡಿದರು!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಿನ ಅಥವಾ 2029 ರ ಲೋಕಸಭಾ ಚುನಾವಣೆ ಬಗ್ಗೆ ಯೋಚಿಸುತ್ತಿಲ್ಲ ಅವರು 2047 ರ ಭಾರತದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷ ತುಂಬುವ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ಅದು ವಿಶ್ವದ ನಂಬರ್ ವನ್ ರಾಷ್ಟ್ರ ಎನಿಸಿಕೊಂಡಿರಬೇಕು ಎಂಬ ಕನಸನ್ನು ಅವರು ಇಟ್ಟುಕೊಂಡಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ತನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಸುಮಲತಾ ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲವೆಂದ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಘೋಷಣೆ ಮಾಡಿದರು!
|

Updated on: Apr 03, 2024 | 2:03 PM

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಲ್ಲ ಅನ್ನೋದು ಈಗ ಅಫೀಶಿಯಲ್! ಮೊನ್ನೆ ಮಾಧ್ಯಮದವರಿಗೆ ಹೇಳಿದ ಹಾಗೆ ಮಂಡ್ಯದಲ್ಲಿ ತಮ್ಮ ಬೆಂಬಲಿಗರ ಸಮ್ಮುಖ ಇಂದು ಅವರು ತಮ್ಮ ನಿರ್ಧಾರ ಪ್ರಕಟಿಸಿದ ಅವರು ವಿದ್ಯುಕ್ತವಾಗಿ ಬಿಜೆಪಿ (BJP) ಸೇರುವ ಘೋಷಣೆ ಮಾಡಿದರು. ಟಿಕೆಟ್ ಸಿಗದಿದ್ದರೆ ಪಕ್ಷ ಬಿಟ್ಟು ಹೋಗುವವರನ್ನು ನೋಡಿದ್ದೇವೆ ಅದರೆ ತಾನು ಗೆದ್ದಿರುವ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದೇನೆ ಎಂದು ಸುಮಲತಾ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಈಗಿನ ಅಥವಾ 2029 ರ ಲೋಕಸಭಾ ಚುನಾವಣೆ ಬಗ್ಗೆ ಯೋಚಿಸುತ್ತಿಲ್ಲ ಅವರು 2047 ರ ಭಾರತದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷ ತುಂಬುವ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ಅದು ವಿಶ್ವದ ನಂಬರ್ ವನ್ ರಾಷ್ಟ್ರ ಎನಿಸಿಕೊಂಡಿರಬೇಕು ಎಂಬ ಕನಸನ್ನು ಅವರು ಇಟ್ಟುಕೊಂಡಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ತನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಸುಮಲತಾ ಹೇಳಿದರು. ದೇಶ ಚೆನ್ನಾಗಿದ್ದರೆ ರಾಜ್ಯ ಚೆನ್ನಾಗಿರುತ್ತದೆ, ರಾಜ್ಯ ಚೆನ್ನಾಗಿದ್ದರೆ ನಾವಿರುವ ಜಿಲ್ಲೆ ಚೆನ್ನಾಗಿರುತ್ತದೆ, ನಮ್ಮ ಜಿಲ್ಲೆ ಮಂಡ್ಯ ಚೆನ್ನಾಗಿರಬೇಕೆನ್ನುವುದೇ ತನ್ನ ಸ್ವಾರ್ಥ ಎಂದು ಸುಮಲತಾ ಅಂಬರೀಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲೋಕಸಭಾ ಚುನಾವಣೆ 2024: ಬಿಜೆಪಿ ಟಿಕೆಟ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಸುಮಲತಾ ಅಂಬರೀಶ್​

Follow us