ಲೋಕಸಭಾ ಚುನಾವಣೆ 2024: ಬಿಜೆಪಿ ಟಿಕೆಟ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಸುಮಲತಾ ಅಂಬರೀಶ್​

ಬಿಜೆಪಿ ಟಿಕೆಟ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಂಡ್ಯದಿಂದ ಸ್ಪರ್ಧೆ ಮಾಡುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಲೋಕಸಭಾ ಚುನಾವಣೆ 2024: ಬಿಜೆಪಿ ಟಿಕೆಟ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಸುಮಲತಾ ಅಂಬರೀಶ್​
ಸಂಸದೆ ಸುಮಲತಾ ಅಂಬರೀಶ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 26, 2024 | 12:28 PM

ಮಂಡ್ಯ, ಫೆಬ್ರವರಿ 26: ಬಿಜೆಪಿ (BJP) ಟಿಕೆಟ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಂಡ್ಯದಿಂದ (Mandya) ಸ್ಪರ್ಧೆ ಮಾಡುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದರು. ಮಂಡ್ಯ ರೈಲು ನಿಲ್ದಾಣವನ್ನು (Mandya Railway Station) ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಇಂದು (ಫೆ.26) ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ಟೆಕೆಟ್ ಕೇಳಿಯೇ ಕೇಳುತ್ತೇನೆ.   ನನಗೆ ನನ್ನದೇ ಆದ ಆತ್ಮವಿಶ್ವಾಸ ಇದೆ. ಜೆಡಿಎಸ್​ ಪಕ್ಷ ಎನ್​ಡಿಎ ಭಾಗ, ನಾನು ಸಹ ಎನ್​ಡಿಎ ಭಾಗ. ಮಂಡ್ಯ ಸ್ಥಿತಿಗತಿ ಕುರಿತು ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ರವಿವಾರ (ಫೆ.25) ರಂದು ನಡೆದ ಸಭೆಯಲ್ಲಿ ಕಳೆದ ಐದು ವರ್ಷದಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ಚರ್ಚೆಗಳು ಆದವು. ತುಂಬಾ ಸಕಾರಾತ್ಮ ಅಂಶಗಳು ಹೊರ ಬಂದವು. ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ನಿಲ್ಲಿ ಎಂದು ಹೇಳಿದರು. ಮಂಡ್ಯವನ್ನು ಬಿಡಬೇಡಿ, ನಾವು ನಿಮ್ಮನ್ನು ನಂಬಿದ್ದೇವೆ ಎಂದಿದ್ದಾರೆ. ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಜೆಡಿಎಸ್‌-ಬಿಜೆಪಿ ಜೊತೆ ಮೈತ್ರಿ ಆದರೆ ನನ್ನ ಜೊತೆ ದ್ವೇಷ ಇರುತ್ತಾ? ಜೆಡಿಎಸ್ ಎನ್‌ಡಿಎದ ಒಂದು ಭಾಗವಾಗಿದೆ. ಅದೇ ರೀತಿ ನಾನು ಸಹ ಎನ್‌ಡಿಎದ ಒಂದು ಭಾಗವಾಗಿದ್ದೇನೆ ಎಂದರು.

ಬಿಜೆಪಿ ಮಹಿಳಾ ಮಿಸಲಾತಿ ತಂದಿದೆ. ಹೀಗಾಗಿ ಬಿಜೆಪಿ ನನಗೆ ಮಂಡ್ಯ ಟಿಕೆಟ್‌ ನೀಡುತ್ತೆ ಎಂಬು ವಿಶ್ವಾಸವಿದೆ.  ಮೈತ್ರಿ ಅಂತ ಬಂದ ಮೇಲೆ ಜೆಡಿಎಸ್​ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿಯಾದರೆ ಮೈತ್ರಿ ವಿಶ್ವಾಸದಿಂದ ಇರಿ ಎಂದು ಜೆಡಿಎಸ್ ಅವರನ್ನು ಕೇಳುವೆ. ಯಾರಿಗೆ ಟಿಕೆಟ್ ನೀಡುತ್ತೇವೆ ಅಂತ ವರಿಷ್ಠರು ಹೇಳುತ್ತಾರೆ. ಅವರು ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಒಂದು ವೇಳೆ ಜೆಡಿಎಸ್​ನವರಿಗೆ ಟಿಕೆಟ್ ಸಿಕ್ಕರೆ, ಅವರೊಂದಿಗೆ ವಿಶ್ವಾಸದಿಂದ ಇರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:  ಸಂಸದೆ ಸುಮಲತಾ ಅಂಬರೀಶ್​ ಬಿಜೆಪಿಯಲ್ಲೇ ಇರುತ್ತಾರೆ: ಸಚಿವ ಪ್ರಹ್ಲಾದ ಜೋಶಿ

ಇದು ಕೊನೆಯಲ್ಲ, ಮುಂದೆ ಏನಾಗುತ್ತೆ ನೋಡಿ. ಬೆಂಬಲ ನೀಡುವಂತೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕೇಳಿದ್ದೇನೆ. ಅವರ ಕ್ಷೇತ್ರಕ್ಕೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಅವರ ಮೇಲೆ ಅಪಾರ ಗೌರವವಿದೆ. ಪಾಂಡವಪುರದಲ್ಲಿ ನಾನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲಿಸಿದ್ದೆ. ಅವರಿಗೂ ಮನಸಾಕ್ಷಿ ಇರಬೇಕು ಅಲ್ವಾ, ಅಕ್ರಮ ಗಣಿಗಾರಿ ಪರ ನಾನು ಹೋರಾಡಿದ್ದೇನೆ. ಆಗ ರೈತ ಸಂಘದ ಜೊತೆ ನಾನು ನಿಂತಿದ್ದೆ. ಈಗ ನನ್ನನ್ನು ಬೆಂಬಲಿಸಲಿ ಎಂದುನಾನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಆರೋಪಕ್ಕೆ ತಿರುಗೇಟು​ ನೀಡಿದ ಸುಮಲತಾ

ಒಂದು ಕಾಲದಲ್ಲಿ ರೈಲಿನಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಸುಸಜ್ಜಿತವಾದ ರೆಲ್ವೆ ವ್ಯವಸ್ಥೆ ಇದೆ. ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕೇಂದ್ರಕ್ಕೆ ಪ್ರತ್ಯೇಕ ರಾಜ್ಯಗಳಿಲ್ಲ. ಅವರು ಅಭಿವೃದ್ಧಿ ಮಾಡುವುದೆ ರಾಜ್ಯಗಳನ್ನು. ತೆರಿಗೆ ಹಣವನ್ನು ಬ್ಯಾಂಕ್‌ನಲ್ಲಿಟ್ಟುಕೊಂಡು ಬೇರೆಡೆ ಖರ್ಚು ಮಾಡಲು ಆಗಲ್ಲ.  ತೆರಿಗೆ ಹಣ ಎಷ್ಟು ವಾಪಾಸ್ ಬಂತು ಅನ್ನುವುದರ ಜೊತೆಗೆ, ರಾಜ್ಯಕ್ಕೆ ಸಿಗುತ್ತಿರುವ ಯೋಜನೆಗಳನ್ನು ಗಮನಿಸಬೇಕು. ಪ್ರಧಾನಿ ಮೋದಿ ಅವರು ಎಲ್ಲರನ್ನು ಸಮನಾಗಿ ಕಾಣುತ್ತಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ವಿಶ್ವದಲ್ಲೇ ದೇಶದ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಮೊದಲೆಲ್ಲ ಭಾರತ ಅಂದರೇ ಬಡದೇಶ ಎನ್ನುತ್ತಿದ್ದರು. ಈಗ ಇಂಡಿಯಾ ಅಂತನೂ ಹೇಳಲ್ಲ, ಭಾರತದಿಂದ ಬಂದಿದ್ದೀರಾ ಅಂತ ಹೆಮ್ಮೆ ಪಡುತ್ತಾರೆ. ಪ್ರಧಾನ ಸೇವಕ ಎಂದು ಹೇಳಿಕೊಂಡು ಮೋದಿ ಅವರು ಸೇವೆ ಮಾಡುತ್ತಿದ್ದಾರೆ. ಭಾರತವನ್ನು ನಂ1 ಮಾಡುವುದು ಮೋದಿ ಅವರ ಗುರಿ, ಅದರಲ್ಲಿ ಸ್ವಾರ್ಥ ಇಲ್ಲ. ಎಲ್ಲ ಜಾತಿ, ಪಕ್ಷ, ಧರ್ಮ ಎಲ್ಲರೂ ನಮ್ಮವರೆ. ಮಂಡ್ಯದಲ್ಲಿ ಎಲ್ಲರೂ ನಮ್ಮವರೆ. ಮಂಡ್ಯ ಅಭಿವೃದ್ಧಿ ಆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಅಭಿವೃದ್ಧಿಯಲ್ಲಿ ಭೇದ ಇರಬಾರದು. ಮೊನ್ನೆಯಷ್ಟೆ ಪ್ರಧಾನಿಗಳನ್ನು ಭೇಟಿಯಾಗಿದ್ದೆ. ಮದ್ದೂರು ಭೇಟಿಯನ್ನು ನೆನಪಿಟ್ಟುಕೊಂಡು ಜನರ ಪ್ರೀತಿಯ ಸ್ವಾಗತ ಸ್ಮರಿಸಿದರು. ಇಂಡಿಯಾ ಜಗತ್ತಿನಲ್ಲಿ ನಂ1 ಆದರೆ ಮಂಡ್ಯ ಕರ್ನಾಟಕದಲ್ಲಿ ನಂ1 ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:54 am, Mon, 26 February 24