ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿರುವ ಅಭಿವೃದ್ಧಿಯ ಹರಿಕಾರ, ಅವರೊಂದಿಗೆ ಕೆಲಸ ಮಾಡಿದರೆ ಮಂಡ್ಯ ಸಹ ಭಾರೀ ಪ್ರಗತಿ ಕಾಣಲಿದೆ: ಸುಮಲತಾ ಅಂಬರೀಶ್

ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿರುವ ಅಭಿವೃದ್ಧಿಯ ಹರಿಕಾರ, ಅವರೊಂದಿಗೆ ಕೆಲಸ ಮಾಡಿದರೆ ಮಂಡ್ಯ ಸಹ ಭಾರೀ ಪ್ರಗತಿ ಕಾಣಲಿದೆ: ಸುಮಲತಾ ಅಂಬರೀಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 06, 2024 | 2:45 PM

ತಾನು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರೇರಣೆ ಮತ್ತು ಕಾರಣವೆನ್ನುವ ಸುಮಲತಾ, ಅವರು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಅಭಿವೃದ್ಧಿಯ ಹರಿಕಾರ, ಅವರ ನೇತೃತ್ವದಲ್ಲಿ ಭಾರತ ಮಾಡಿರುವ ಸಾಧನೆ ಎಲ್ಲರ ಕಣ್ಣ ಮುಂದಿದೆ, ಅಂಥವರ ಜೊತೆ  ಸೇರಿದರೆ ತನ್ನ ಕ್ಷೇತ್ರವೂ ಅಗಾಧ ಪ್ರಗತಿ ಕಾಣಲಿದೆ ಎಂದು ಅವರು ಹೇಳಿದರು.  

ಮಂಡ್ಯ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತಮಗೆ ಮಂಡ್ಯ ಲೋಕಸಭಾ ಕ್ಷೇತ್ರದ (Mandya LS Constituency) ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ, ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ (party high command) ಬಿಟ್ಟ ವಿಚಾರ, ಆದರೆ ತನಗೆ ಟಿಕೆಟ್ ಸಿಗುವ ಬಗ್ಗೆ ಶೇಕಡಾ 100 ಅಲ್ಲ 500 ರಷ್ಟು ವಿಶ್ವಾಸವಿದೆ ಎಂದು ಸುಮಲತಾ ಹೇಳಿದರು. ಬಿಜೆಪಿ ತನ್ನನ್ನೇ ಯಾಕೆ ಅಭ್ಯರ್ಥಿಯಾಗಿ ಆರಿಸಬೇಕು ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರಿಗೆ ಕೇಳುವುದೇ ವಾಸಿ. ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಆಯ್ಕೆಗೆ ಕೆಲ ಮಾನದಂಡ ಇಟ್ಟುಕೊಂಡಿರುತ್ತಾರೆ. ಹಾಲಿ ಸಂಸದ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುವುದನ್ನು ಗಮನಿಸುತ್ತಾರೆ, ತಮ್ಮ ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸುವುದನ್ನು ನೋಡುತ್ತಾರೆ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲಿ ನಡೆಯುವ ದಿಶಾ ಸಭೆಗಳ ವಿಡಿಯೋ ಪುಟೇಜ್ ಸಹ ಅವರು ತರಿಸಿಕೊಂಡು ವೀಕ್ಷಣೆ ಮಾಡುತ್ತಾರೆ ಎಂದು ಸುಮಲತಾ ಹೇಳಿದರು. ತಾನು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರೇರಣೆ ಮತ್ತು ಕಾರಣವೆನ್ನುವ ಸುಮಲತಾ, ಅವರು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಅಭಿವೃದ್ಧಿಯ ಹರಿಕಾರ, ಅವರ ನೇತೃತ್ವದಲ್ಲಿ ಭಾರತ ಮಾಡಿರುವ ಸಾಧನೆ ಎಲ್ಲರ ಕಣ್ಣ ಮುಂದಿದೆ, ಅಂಥವರ ಜೊತೆ  ಸೇರಿದರೆ ತನ್ನ ಕ್ಷೇತ್ರವೂ ಅಗಾಧ ಪ್ರಗತಿ ಕಾಣಲಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:  ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?