ಕೊಲ್ಕತ್ತಾದಲ್ಲಿ ಈಸ್ಟ್-ವೆಸ್ಟ್ ಮೆಟ್ರೋ ಕಾರಿಡಾರ್ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದು ಜೈ ಶ್ರೀರಾಮ್ ಘೋಷಣೆಗಳು!
ಮೂಲಗಳ ಪ್ರಕಾರ ಕೊಲ್ಕತ್ತಾದ ಅಂಡರ್ ಗ್ರೌಂಡ್ ಮೆಟ್ರೋ ಕಾರಿಡಾರ್ ಸೇವೆಯು ಐಟಿ ಹಬ್ ಸಾಲ್ಟ್ ಲೇಕ್ ಸೆಕ್ಟರ್ ವಿ ನಂಥ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲು ನೆರವಾಗಲಿದೆ. ಪ್ರಧಾನ ಮೋದಿ ಈಸ್ಟ್-ವೆಸ್ಟ್ ಕಾರಿಡಾರ್ ಇಂದು ಉದ್ಘಾಟಿಸಿದ್ದು ನಿಜವಾದರೂ ಪ್ರಯಾಣಿಕರ ಸೇವೆ ಕೆಲದಿನಗಳ ನಂತರ ಆರಂಭವಾಗಲಿದೆ.
ಕೋಲ್ಕತ್ತಾ: ಕೇವಲ 5 ದಿನಗಳ ಅವಧಿಯಲ್ಲಿ ಎರಡನೇ ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಗರದಲ್ಲಿಂದು ಸುಮಾರು 15,400 ಕೋಟಿ ರೂ. ಮೊತ್ತದ -ನಾನಾ ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ದೇಶದಲ್ಲೇ ಮೊದಲ ಅಂತರಜಲ ಮೆಟ್ರೋ ಸೇವೆ (underwater Metro service) ಆಗಿರುವ 4.8 ಕಿಮೀ ಉದ್ದದ ಈಸ್ಟ್-ವೆಸ್ಟ್ ಮೆಟ್ರೋ ಕಾರಿಡಾರ್ ಹೌರಾ ಮೈದಾನ-ಎಸ್ಪಲಾಂಡೆ ವಿಭಾಗ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ ಯೋಜನೆಗಳಲ್ಲಿ ಒಂದಾಗಿದೆ. ಹೌರಾದಲ್ಲಿ ಭೂಮಟ್ಟದಿಂದ ಸುಮಾರು 30 ಮೀಟರ್ ಆಳದಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ವಿಸ್ತರಣೆಯ ಒಟ್ಟು ವೆಚ್ಚ ರೂ. 4,965 ಕೋಟಿ ಎಂದು ಹೇಳಲಾಗಿದೆ. ಪ್ರಧಾನ ಮಂತ್ರಿಯವರು ಉದ್ಘಾಟನೆಗೆ ಆಗಮಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನ ಜೈ ಶ್ರೀರಾಮ್, ಜೈಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಅವರನ್ನು ಸ್ವಾಗತಿಸಿದರು. ನೆರೆದ ಜನರಲ್ಲಿ ಸಂಭ್ರಮ, ಹರ್ಷೋಲ್ಲಾಸ ಮತ್ತು ರೋಮಾಂಚನವನ್ನು ದೃಶ್ಯಗಳಲ್ಲಿ ಗಮನಿಸಬಹುದು. ಪ್ರಧಾನಿ ಮೋದಿ ಅವರೆಡೆ ಕೈ ಬೀಸಿ ಅಭಿನಂದನೆ ಸ್ವೀಕರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ, ದೇಶದಿಂದ ಭಯೋತ್ಪಾದನೆ, ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆ ಮಾಡ್ತಾರೆ: ಅಮಿತ್ ಶಾ