ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿ ಅರೆಸ್ಟಾಗಿರುವ ಮುನಾವರ್ ಅಹ್ಮದ್ ಬೆಂಗಳೂರಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ
ದಾವಣಗೆರೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಮುನಾವರ್ ಇತ್ತೀಚಿನ ದಿನಗಳಲ್ಲಿ ಬೆಂಗಳೂರುಗೆ ಶಿಫ್ಟ್ ಆಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಮತ್ತು ಕಾಂಗ್ರೆಸ್ ಪಕ್ಷದ ಎರಡನೇ ಹಂತದ ನಾಯಕರಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಇತರ ಹಲವಾರು ಪ್ರಮುಖ ನಾಯಕರ ಜೊತೆ ಮುನಾವರ್ ನ ಫೋಟೋಗಳಿವೆ.
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅವರ ಒಬ್ಬನಾಗಿರುವ ಮೊಹಮ್ಮದ್ ಶಫಿ ನಾಶಿಪುಡಿಯ (Mohammad Shafi Nashipudi) ಮನೆಯನ್ನು ನಾವು ನಿನ್ನೆ ನಿಮಗೆ ತೋರಿಸಿದೆವು. ಎರಡನೇ ಆರೋಪಿಯಾಗಿರುವ ಮುನಾವರ್ ಅಹ್ಮದ್ (Munawar Ahmed) ಮೂಲತಃ ದಾವಣಗೆರೆಯವನಾದರೂ ಬೆಂಗಳೂರಲ್ಲಿ ವಾಸವಾಗಿದ್ದಾನೆ. ಟಿವಿ9 ಬೆಂಗಳೂರು ವರದಿಗಾರ, ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಯಮಹಲ್ ರಸ್ತೆಯಲ್ಲಿ (Jayamahal road) ಅವನು ವಾಸವಾಗಿರುವ ಬಾಡಿಗೆ ಮನೆಯ ಮುಂದೆ ನಿಂತು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಕೇವಲ ಎರಡು ತಿಂಗಳು ಹಿಂದೆ ಮುನಾವರ್ ಈ ಮನೆಗೆ ಶಿಫ್ಟ್ ಆಗಿದ್ದನಂತೆ. ಅವನ ಬಂಧನದ ಬಳಿಕ ಕುಟುಂಬದ ಬೇರೆ ಸದಸ್ಯರು ಮನೆಗ ಬೀಗ ಜಡಿದು ಪ್ರಾಯಶಃ ದಾವಣಗೆರೆಗೆ ಹೋಗಿರಬಹುದು. ದಾವಣಗೆರೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಮುನಾವರ್ ಇತ್ತೀಚಿನ ದಿನಗಳಲ್ಲಿ ಬೆಂಗಳೂರುಗೆ ಶಿಫ್ಟ್ ಆಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಮತ್ತು ಕಾಂಗ್ರೆಸ್ ಪಕ್ಷದ ಎರಡನೇ ಹಂತದ ನಾಯಕರಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಇತರ ಹಲವಾರು ಪ್ರಮುಖ ನಾಯಕರ ಜೊತೆ ಮುನಾವರ್ ನ ಫೋಟೋಗಳಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಧಿಕೃತ ಎಫ್ ಎಸ್ ಎಲ್ ವರದಿ ಆಧಾರದ ಮೇಲೆ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಲಾಗಿದೆ: ಜಿ ಪರಮೇಶ್ವರ್