ಇವರು ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಏನು ಮಾಡಿದ್ದಾರೆ ನೋಡಿ, ವಿಡಿಯೋ ಇದೆ

ಇವರು ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಏನು ಮಾಡಿದ್ದಾರೆ ನೋಡಿ, ವಿಡಿಯೋ ಇದೆ

ಸಾಧು ಶ್ರೀನಾಥ್​
|

Updated on: Mar 06, 2024 | 11:51 AM

Mancherial District : ನಿಂಬೆಹಣ್ಣು ಮತ್ತು ಬೂಜುಗುಂಬಳ ಕಾಯಿಗಳಿಂದ ಪೂಜೆಗಳು ನಡೆಸಿದ್ದಾರೆ. ಈ ಹಿಂದೆಯೂ ಇಲ್ಲಿ ಉತ್ಖನನ ನಡೆದಿರುವ ಕುರುಹುಗಳಿವೆ ಎನ್ನುತ್ತಾರೆ ಗ್ರಾಮಸ್ಥರು. ಗುಪ್ತ ನಿಧಿಗಳಿಗಾಗಿ ದಿಢೀರ್ ಉತ್ಖನನ ನಡೆಸುತ್ತಿರುವುದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ.

ಎಲ್ಲರೂ ದೇವಸ್ಥಾನಕ್ಕೆ ಭಯ ಭಕ್ತಿಯಿಂದ ಮುಂಭಾಗದಿಂದ ಹೋಗ್ತಾರೆ. ಆದರೆ ಇವರು ಮಾತ್ರ ದೇವಸ್ಥಾನದ ಹಿಂಭಾಗಕ್ಕೆ ತೆರಳಿ ಕಾಳ ಕಾರ್ಯಾಚರಣೆ ಮಾಡಿದ್ದಾರೆ. ಆಂಧ್ರ ಪ್ರದೇಶದ ಮಂಚಿರ್ಯಾಲ ಜಿಲ್ಲೆಯಲ್ಲಿ (Mancherial District) ಗುಪ್ತ ನಿಧಿ (hidden treasure) ಅಗೆದಿರುವ ಘಟನೆ ಇದೀಗ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ನೆನ್ನಲ ಮಂಡಲದ ಕುಷ್ನಪಲ್ಲಿ ಅರಣ್ಯ ಪ್ರದೇಶದ ಕೃಷ್ಣಪಲ್ಲಿ ಗ್ರಾಮದ ಪೋಷಮ್ಮ ದೇವಸ್ಥಾನದ ಬಳಿ ಅಪರಿಚಿತರು (Miscreants) ನಿಧಿಗಾಗಿ ಆಳವಾದ ಕಂದಕ ಅಗೆದಿದ್ದಾರೆ. ದೊಡ್ಡ ಆಲದ ಮರದ ಪಕ್ಕದಲ್ಲಿ ದುಷ್ಕರ್ಮಿಗಳು ಎರಡು ಮೀಟರ್ ಅಗಲ ಹಾಗೂ ಒಂದು ಮೀಟರ್ ಆಳದ ಗುಂಡಿ ತೋಡಿದ್ದಾರೆ.

ನಿಂಬೆಹಣ್ಣು ಮತ್ತು ಬೂಜುಗುಂಬಳ ಕಾಯಿಗಳಿಂದ ಪೂಜೆಗಳು ನಡೆಸಿದ್ದಾರೆ. ಈ ಹಿಂದೆಯೂ ಇಲ್ಲಿ ಉತ್ಖನನ ನಡೆದಿರುವ ಕುರುಹುಗಳಿವೆ ಎನ್ನುತ್ತಾರೆ ಗ್ರಾಮಸ್ಥರು. ಗುಪ್ತ ನಿಧಿಗಳಿಗಾಗಿ ದಿಢೀರ್ ಉತ್ಖನನ ನಡೆಸುತ್ತಿರುವುದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಅಷ್ಟರಲ್ಲಿ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಒಂದೂವರೆ ವರ್ಷಗಳ ಹಿಂದೆ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ಬಂಧನ