ವಿಧಾನಸಭೆಯಲ್ಲಿ ತೊಡೆತಟ್ಟಿದ್ದ ಸಿದ್ದರಾಮಯ್ಯ ಬರೀ ಅಹಂಕಾರದ ಮಾತುಗಳನ್ನಾಡುತ್ತಾರೆ: ಹೆಚ್ ಡಿ ಕುಮಾರಸ್ವಾಮಿ

ವಿಧಾನಸಭೆಯಲ್ಲಿ ತೊಡೆತಟ್ಟಿದ್ದ ಸಿದ್ದರಾಮಯ್ಯ ಬರೀ ಅಹಂಕಾರದ ಮಾತುಗಳನ್ನಾಡುತ್ತಾರೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 1:22 PM

ಜೆಡಿಎಸ್ ಈಗ ಬಿಜೆಪಿ ಜೊತೆ ಕೈ ಜೋಡಿಸಿರುವುದರಿಂದ ಪಕ್ಷದ ಹೆಸರಲ್ಲಿರುವ ಜಾತ್ಯಾತೀತ ಪದವನ್ನು ತೆಗೆದು ಹಾಕಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದಕ್ಕೆ ಜವಾಬು ನೀಡಿದ ಕುಮಾರಸ್ವಾಮಿ ಅಸಲಿಗೆ, ಒಕ್ಕಲಿಗ, ಲಿಂಗಾಯತ ಅಂತ ಜಾತಿ ರಾಜಕಾರಣ ಮಾಡುತ್ತಿರೋದೇ ಕಾಂಗ್ರೆಸ್ ಪಕ್ಷ, ಅವರಿಂದ ಹೇಳಿಸಿಕೊಳ್ಳಬೇಕಾದ್ದು ಏನೂ ಇಲ್ಲ ಎಂದರು

ಮೈಸೂರು: ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೊತೆಯಿರಲು ನಗರಕ್ಕೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಡೋದೆಲ್ಲ ಅಹಂಕಾರದ ಮಾತುಗಳು ಅಂತ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹಿಂದೆ ವಿಧಾನ ಸಭೆಯಲ್ಲಿ ಅವರು ಪೈಲ್ವಾನರ ಹಾಗೆ ಭುಜ ಮತ್ತು ತೊಡೆ ತಟ್ಟಿದ್ದರಲ್ಲ? ಅಂಥ ಕೆಲಸಗಳನ್ನು ತಾವು ಯಾವತ್ತೂ ಮಾಡಿಲ್ಲ ಎಂದರು. ಜೆಡಿಎಸ್ ಈಗ ಬಿಜೆಪಿ ಜೊತೆ ಕೈ ಜೋಡಿಸಿರುವುದರಿಂದ ಪಕ್ಷದ ಹೆಸರಲ್ಲಿರುವ ಜಾತ್ಯಾತೀತ ಪದವನ್ನು ತೆಗೆದು ಹಾಕಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದಕ್ಕೆ ಜವಾಬು ನೀಡಿದ ಕುಮಾರಸ್ವಾಮಿ ಅಸಲಿಗೆ, ಒಕ್ಕಲಿಗ, ಲಿಂಗಾಯತ ಅಂತ ಜಾತಿ ರಾಜಕಾರಣ ಮಾಡುತ್ತಿರೋದೇ ಕಾಂಗ್ರೆಸ್ ಪಕ್ಷ, ಅವರಿಂದ ಹೇಳಿಸಿಕೊಳ್ಳಬೇಕಾದ್ದು ಏನೂ ಇಲ್ಲ ಎಂದರು. ತಾನು ಎರಡು ದಿನಗಳ ಕಾಲ ಮೈಸೂರು ಮತ್ತು ಚಾಮರಾಜನಗರ ಕ್ಷೆತ್ರಗಳಲ್ಲಿ ಪ್ರಚಾರ ಮಾಡೋದಾಗಿ ಹೇಳಿದ ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ದೇವೇಗೌಡ ಸಹ ಜೊತೆಗಿರಲಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅಪ್ಪಟ ಒಕ್ಕಲಿಗ: ಸಿದ್ದರಾಮಯ್ಯ