ಹೆಚ್ ಡಿ ಕುಮಾರಸ್ವಾಮಿ ಕುಕ್ಕರ್ ಬಾಂಬ್! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ 4 ಲಕ್ಷಕ್ಕೂ ಹೆಚ್ಚು ಕುಕ್ಕರ್ ಹಂಚಿಕೆ?
ಇದು ಚುನಾವಣೆ ನಡೆಸುವ ರೀತಿಯೇ ಎಂದು ಖಾರವಾಗಿ ಪ್ರಶ್ನಿಸಿದ ಕುಮಾರಸ್ವಾಮಿ ಸುಮಾರು 4 ಲಕ್ಷ ಕುಕ್ಕರ್ ಗಳನ್ನು ಕಾಂಗ್ರೆಸ್ ಪಕ್ಷ ಹಂಚಿದೆ ಮತ್ತು ನಿನ್ನೆ ಒಂದೇ ದಿನ 2.10 ಲಕ್ಷ ಕುಕ್ಕರ್ ಗಳನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಂಚಲಾಗಿದೆ ಎಂದು ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Rural Constituency) ನಡೆಯುತ್ತಿರುವ ಅವ್ಯವಹಾರವನ್ನು ವಿಡಿಯೋ ಮತ್ತು ಫೋಟೋಗಳ ಸಮೇತ ಮಾಧ್ಯಮಗಳ ಗಮನಕ್ಕೆ ತಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ (DK Suresh), ಮುಖ್ಯ ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಣೆ ಮಾಡಿದ ನಂತರ ನಿರ್ಭಿಡೆಯಿಂದ ಮತದಾರರಿಗೆ ಕುಕ್ಕರ್ ಗಳನ್ನು ಹಂಚುತ್ತಿದ್ದಾರೆ ಮತ್ತು ಎಲ್ಲ ಗೊತ್ತಿದ್ದು ಸಹ ರಾಜ್ಯ ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳದೆ ನಿಷ್ಕ್ರಿಯ ಸ್ಥಿತಿಯಲ್ಲಿ ಕುಳಿತಿದೆ ಎಂದು ಕುಮಾರಸ್ವಾಮಿ ಹೇಳಿದರು. ಇದು ಚುನಾವಣೆ ನಡೆಸುವ ರೀತಿಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು ಸುಮಾರು 4 ಲಕ್ಷ ಕುಕ್ಕರ್ ಗಳನ್ನು ಕಾಂಗ್ರೆಸ್ ಪಕ್ಷ ಹಂಚಿದೆ ಮತ್ತು ನಿನ್ನೆ ಒಂದೇ ದಿನ 2.10 ಲಕ್ಷ ಕುಕ್ಕರ್ ಗಳನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಂಚಲಾಗಿದೆ ಎಂದು ಹೇಳಿದರು. ಸಾಕ್ಷಿ ಸಮೇತ ದೂರಿನ ಹೊರತಾಗಿಯೂ ರಾಜ್ಯ ಚುನಾವಣಾ ಆಯೋಗ ಕ್ರಮ ಜರುಗಿಸದ ಕಾರಣ ಮುಖ್ಯ ಚುನಾವಣಾ ಆಯೋಗ ಮಧ್ಯೆಪ್ರವೇಶಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ಪಡೆ ಭದ್ರತೆ ಬೇಕು: ಕುಮಾರಸ್ವಾಮಿ ಬೇಡಿಕೆ, ಕೊಟ್ಟ ಕಾರಣ ಇಲ್ಲಿದೆ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

