Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ದುರ್ಬಳಕೆ ಮಾಡುತ್ತಿದೆ: ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ದುರ್ಬಳಕೆ ಮಾಡುತ್ತಿದೆ: ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 05, 2024 | 2:45 PM

ಜೆಡಿಎಸ್ ನಾಯಕರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರಲ್ಲದೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಗೋಧ್ರಾದಂಥ ಘಟನೆ ಕರ್ನಾಟಕದಲ್ಲಿ ಮರುಕಳಿಸಬಹುದು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದನ್ನು ಕುಮಾರಸ್ವಾಮಿ ಖಂಡಿಸಿದರು.

ಬೆಂಗಳೂರು: ಕೆಲದಿನಗಳಿಂದ ನಾಪತ್ತೆಯಾದಂತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಅವರ ಮಿತ್ರಪಕ್ಷವಾದ ಬಿಜೆಪಿ, ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯ (Srikanth Pujari) ಬಂಧನ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ (protest) ನಡೆಸುತ್ತಿದ್ದರೂ ಕುಮಾರಸ್ವಾಮಿ ಮತ್ತು ಮತ್ತು ಅವರ ಪಕ್ಷದ ಪ್ರಮುಖರು ಜೊತೆಗೂಡದೆ ಹೋಗಿದ್ದು ಕನ್ನಡಿಗರಲ್ಲಿ ಅಚ್ಚರಿ ಮೂಡಿಸಿತ್ತು. ಅದಕ್ಕೆ ಬೇರೆ ಕಾರಣವಿದೆ ಅಂತ ಜನಕ್ಕೆ ಗೊತ್ತಿಲ್ಲದಿಲ್ಲ. ಇಲ್ಲಿ ಕುಮಾರಸ್ವಾಮಿ ಮಾತಾಡುವುದನ್ನು ಕೊಂಚ ಗಮನಿಸಿ. ಕಳೆದ ಎರಡು-ಮೂರು ದಿನಗಳಿಂದ ಅಂತ ಮೂರ್ನಾಲ್ಕು ಬಾರಿ ಹೇಳುತ್ತಾ ಅದರಲ್ಲೇ ಸುಮಾರು ಹೊತ್ತು ಗಿರಕಿ ಹೊಡೆಯುತ್ತಾರೆ. ಸ್ವಲ್ಪ ಸಮಯದವರೆಗೆ ಮಾಧ್ಯಮದವರೊಂದಿಗೆ ಮಾತಾಡದಿರುವುದು ಸಹ ಅವರ ತಡವರಿಕೆಗೆ ಕಾರಣವಾಗಿರಬಹುದು. ನಂತರ ವಿಷಯಕ್ಕೆ ಬರುವ ಅವರು 30 ವರ್ಷಗಳ ಹಿಂದಿನ ಪ್ರಕರಣ ಕೆದಕಿ, ಸುಳ್ಳು ಮೊಕದ್ದಮೆಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡುತ್ತಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ