40 ಸಾವಿರ ಕೋಟಿ ರೂ. ಅಕ್ರಮವೆಂದ್ರೆ ನಂಬಲು ಸಾಧ್ಯವೇ? ಯತ್ನಾಳ್​ ಆರೋಪ ತಳ್ಳಿಹಾಕಿದ ಕುಮಾರಸ್ವಾಮಿ

ಬಿಜೆಪಿ ಅವಧಿಯಲ್ಲಿ ಅಕ್ರಮ ನಡೆದೇ ಇಲ್ಲ ಅಂತಾ ಹೇಳುವುದಿಲ್ಲ. 40 ಸಾವಿರ ಕೋಟಿ ರೂ. ಅಕ್ರಮ ಅಂದರೆ ನಂಬಲು ಸಾಧ್ಯವೇ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆರೋಪಿವನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಯತ್ನಾಳ್ ಆರೋಪದ ಬಗ್ಗೆ ವಾಸ್ತವಾಂಶ ಪರಿಶೀಲನೆ ಮಾಡಬೇಕಲ್ವಾ ಎಂದು ಹೇಳಿದ್ದಾರೆ.   

40 ಸಾವಿರ ಕೋಟಿ ರೂ. ಅಕ್ರಮವೆಂದ್ರೆ ನಂಬಲು ಸಾಧ್ಯವೇ? ಯತ್ನಾಳ್​ ಆರೋಪ ತಳ್ಳಿಹಾಕಿದ ಕುಮಾರಸ್ವಾಮಿ
ಜೆಡಿಎಸ್​ ರಾಜ್ಯಾಧ್ಯಕ್ಷ H​.D.ಕುಮಾರಸ್ವಾಮಿ, ಶಾಸಕ ಯತ್ನಾಳ್
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 30, 2023 | 3:10 PM

ಬೆಂಗಳೂರು, ಡಿಸೆಂಬರ್​​ 30: ನಾವು ಈಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. 40 ಸಾವಿರ ಕೋಟಿ ರೂ. ಅವ್ಯವಹಾರ ಅಂತಾ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆರೋಪಿಸಿದ್ದರು. ಇದನ್ನು ಯಾರಾದರೂ ನಂಬುವುದಕ್ಕೆ ಆಗುತ್ತಾ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ (HD Kumaraswamy)  ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಅಕ್ರಮ ನಡೆದೇ ಇಲ್ಲ ಅಂತಾ ಹೇಳುವುದಿಲ್ಲ. 40 ಸಾವಿರ ಕೋಟಿ ರೂ. ಅಕ್ರಮ ಅಂದರೆ ನಂಬಲು ಸಾಧ್ಯವೇ ಎಂದಿದ್ದಾರೆ.

ಎಷ್ಟು ಅಕ್ರಮ ಆಗಿದೆ ಅಂತಾ ನನಗೆ ಗೊತ್ತಿಲ್ಲ. ಯತ್ನಾಳ್ ಆರೋಪದ ಬಗ್ಗೆ ವಾಸ್ತವಾಂಶ ಪರಿಶೀಲನೆ ಮಾಡಬೇಕಲ್ವಾ? ಶಾಸಕ ಯತ್ನಾಳ್​ ವಿರುದ್ಧದ ಕ್ರಮದ ಬಗ್ಗೆ ನಾನೇನು ಹೇಳುವುದಿಲ್ಲ. ಯತ್ನಾಳ್ ಹೇಳಿಕೆ ನಿಜಾಂಶವಲ್ಲ ಅದಕ್ಕೆ ಉತ್ತರಿಸಬೇಕಿಲ್ಲ ಅಂತಾ ಬಿಜೆಪಿ ನಾಯಕರು ಸುಮ್ಮನಾಗಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣೆ ಗೆಲ್ಲಲು ಜಾತಿಗೊಂದು ಡಿಸಿಎಂ ಗುಂಗಿನಲ್ಲಿದ್ದಾರೆ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ನಾನು ಯಾರನ್ನೂ ರಕ್ಷಣೆ ಮಾಡಲು ಹೇಳಿಕೆ ನೀಡುತ್ತಿಲ್ಲ. ಜಯಚಂದ್ರ ನೇತೃತ್ವದಲ್ಲಿ ವರದಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿದಿನ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡುತ್ತಿದ್ದಾರಾ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿಯಲ್ಲಿರುವ ಕೆಲವು ಭಿನ್ನಾಭಿಪ್ರಾಯ ಕಾರಣಕ್ಕೆ ಯತ್ನಾಳ್ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ.ಬಿಜೆಪಿ ಹಾಗೂ ಎನ್​ಡಿಎ ಪರವಾಗಿ ಈಗ ನಾನೇ ಹೇಳುತ್ತಿದ್ದೇನೆ ಎಂದರು.

ಸಂಕ್ರಾಂತಿ ಹಬ್ಬದ ಬಳಿಕ ಸಂತೋಷವಾಗುವ ಸುದ್ದಿಯನ್ನೇ ಕೊಡ್ತೇನೆ

ಸಂಕ್ರಾಂತಿ ಹಬ್ಬದ ಬಳಿಕ ಸಂತೋಷವಾಗುವ ಸುದ್ದಿಯನ್ನೇ ಕೊಡುತ್ತೇನೆ. ಸೀಟು ಹಂಚಿಕೆ ಸೇರಿ ಎಲ್ಲದರ ಬಗ್ಗೆ ನಿಮಗೆಲ್ಲರಿಗೂ ಸಂತೋಷವಾಗುವ ಸುದ್ದಿಯನ್ನೇ ಕೊಡುತ್ತೇನೆ ಎಂದು ಹೇಳಿದ್ದಾರೆ.

ಮತಕ್ಕೋಸ್ಕರ ತಾತ್ಕಾಲಿಕ ಘೋಷಣೆ: ಯಾವುದೂ ಅನುಷ್ಠಾನಕ್ಕೆ ಬರಲ್ಲ

ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಆದೇಶ ವಿಚಾರವಾಗಿ ಮಾತನಾಡಿದ ಅವರು, ಅವರನ್ನು ಸಂತುಷ್ಟಗೊಳಿಸಲು ಹೇಳಿದ್ದಾರೆಯೇ ಹೊರತು ಅವರ ಅಭಿವೃದ್ಧಿಗೋಸ್ಕರ ಅಲ್ಲ. ಯಾವಾಗ ಹಿಜಾಬ್ ವಾಪಸ್ ಹೇಳಿಕೆಗೆ ಟೀಕೆ ಶುರುವಾಯ್ತೋ 24 ಗಂಟೆಯಲ್ಲಿ ಮಾತು ವಾಪಸ್ ಪಡೆದರು. ಮತಕ್ಕೋಸ್ಕರ, ಕೆಲವರನ್ನು ಖುಷಿಪಡಿಸಲು ತಾತ್ಕಾಲಿಕ ಘೋಷಣೆ ಮಾಡುತ್ತಾರೆ. ಇದು ಯಾವುದೂ ಅನುಷ್ಠಾನಕ್ಕೆ ಬರಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ: ಪರೋಕ್ಷವಾಗಿ ಯತ್ನಾಳ್ ವಿರುದ್ಧ ಗುಡುಗಿದ ವಿಜಯೇಂದ್ರ

ಎಲ್ಲಿದೆ ಇವರ ಹತ್ತಿರ ದುಡ್ಡು? ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ. ಕೊಟ್ಟಾಯ್ತಾ ಇವರು? ಹಿಜಾಬ್ ವಿಷಯದಲ್ಲಿ ಆ ರೀತಿ ನಡೆದುಕೊಂಡವರು ನಮಗೆ ರಕ್ಷಣೆ ಕೊಡ್ತಾರಾ ಅಂತಾ ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕು. 10 ಸಾವಿರ ಕೋಟಿ ರೂ. ಕೊಡ್ತೀನಿ ಅಂತಾ ಹೇಳಿರುವುದು ಅವರ ಹಿಂದೆ ಇರುವವರ ಉದ್ದಾರಕ್ಕೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ