ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತ ಒಪ್ಪಿಕೊಂಡು ಬರಲಿಚ್ಛಿಸುವವರಿಗೆ ಬಾಗಿಲು ತೆರೆದಿದೆ: ಡಿಕೆ ಶಿವಕುಮಾರ್
ಹಾಗೆಯೇ ಬಿಜೆಪಿ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೊಡದಿದ್ದಾಗ ಕಾಂಗ್ರೆಸ್ ಕೊಟ್ಟಿತು. ಬೆಂಗಳೂರು ಪುಲಿಕೇಶನಗರದ ಟಿಕೆಟ್ ಅನ್ನು ಕಾಂಗ್ರೆಸ್ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಕೊಡದೆ ಹೋದಾಗ, ಅವರು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿದರು.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಅಸಮಾಧಾನಗೊಂಡಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆಯೇ ಅಂತ ಕೇಳಿದಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC president DK Shivakumar) ತಾರ್ಕಿಕ ಉತ್ತರ ನೀಡಿದರು. ಚುನಾವಣೆ ಸಮಯದಲ್ಲಿ ಟಿಕೆಟ್ ಸಿಗದವರು ರೊಚ್ಚಿಗೆದ್ದು ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದು ಸಾಮಾನ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly polls) ಬಿಜೆಪಿ ಆಯನೂರು ಮಂಜುನಾಥ್ ಮತ್ತು ಎಂಪಿ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡದೆ ಹೋದಾಗ ಜೆಡಿಎಸ್ ಪಕ್ಷ ನೀಡಿತು. ಹಾಗೆಯೇ ಬಿಜೆಪಿ, ಜಗದೀಶ್ ಶೆಟ್ಟರ್ (Jagadish Shettar) ಮತ್ತು ಲಕ್ಷ್ಮಣ ಸವದಿ (Laxman Savadi) ಅವರಿಗೆ ಟಿಕೆಟ್ ಕೊಡದಿದ್ದಾಗ ಕಾಂಗ್ರೆಸ್ ಕೊಟ್ಟಿತು. ಬೆಂಗಳೂರು ಪುಲಿಕೇಶನಗರದ ಟಿಕೆಟ್ ಅನ್ನು ಕಾಂಗ್ರೆಸ್ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಕೊಡದೆ ಹೋದಾಗ, ಅವರು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿದರು.
ಚುನಾವಣೆ ಸಮಯದಲ್ಲಿ ಇದೆಲ್ಲ ಮಾಮೂಲು, ಮೊದಲಿಂದ ನಡೆದುಕೊಂಡು ಬಂದಿರುವ ಸಂಗತಿ, ತಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬರಲು ಇಚ್ಛಿಸುವವರಿಗೆ ಸ್ವಾಗತ ಎಂದು ಶಿವಕುಮಾರ್ ಹೇಳಿದರು. ಅಂದರೆ ಬಂಡಾಯವೆದ್ದಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಾಗಿಲು ತೆರೆದಿವೆಯೇ ಅಂತ ಕೇಳಿದಾಗ ಶಿವಕುಮಾರ್, ಪಕ್ಷದ ರಣನೀತಿಯನ್ನು ಬಹಿರಂಗಗೊಳಿಸುವುದು ತಮಗಿಷ್ಟವಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಕನಕಪುರದಲ್ಲಿ ದಾಳಿ ಭೀತಿ, ಅರ್ಜಿ ವರ್ಗಾವಣೆಗೆ ಯತ್ನಾಳ್ ಮನವಿ; ಡಿಕೆ ಶಿವಕುಮಾರ್ಗೆ ಹೈಕೋರ್ಟ್ ನೋಟಿಸ್