ನಗರತ್ಪೇಟೆ ಗಲಾಟೆ, ಹನುಮಭಕ್ತರ ಪ್ರತಿಭಟನೆಯಲ್ಲಿ ಶಾಸಕ ಸುರೇಶ್ ಕುಮಾರ್ರನ್ನು ಎಳೆದಾಡಿದ ಪೊಲೀಸರು
ಪೊಲೀಸರ ವರ್ತನೆಯಿಂದ ಕೋಪಾವಿಷ್ಠರಾದ ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ಹನುಮ ಭಕ್ತರನ್ನು ಯಾವ ಕಾರಣಕ್ಕಾಗಿ ಬಂಧಿಸಿದ್ದು, ಬಿಡಿ ಅವರನ್ನು ಅಂತ ಅವರು ಆರ್ಭಟಿಸಿದ ಕೂಡಲೇ ಮೆತ್ತಗಾದ ಪೊಲೀಸರು ಮುಕೇಶ್ ಸೇರಿದಂತೆ ವಶಕ್ಕೆ ಪಡೆದಿದ್ದ ಎಲ್ಲ ಹಿಂದೂ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು.
ಬೆಂಗಳೂರು: ನಗರದ ನಗರತ್ ಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ಹಿಂದೂ ಯುವಕ ಮುಕೇಶ್ ತನ್ನ ಪಾಡಿಗೆ ಹನುಮಾನ್ ಚಾಲೀಸಾ (Hanuman Chalisa) ಕೇಳುತ್ತಾ ಕುಳಿತಿದ್ದಾಗ 6-7 ಜನರನ್ನೊಳಗೊಂಡ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಸ್ಥಳೀಯ ಶಾಸಕ ಸುರೇಶ್ ಕುಮಾರ್ (MLA Suresh Kumar) ಅವರನ್ನು ಪೊಲೀಸರು ಎಳೆದಾಡಿದ ಪ್ರಸಂಗ ನಡೆಯಿತು. ಮಫ್ತಿಯಲ್ಲಿದ್ದ ಒಬ್ಬ ಪೊಲೀಸ್ (police constable) ಜನಪ್ರತಿನಿಧಿ ಮತ್ತು ಮಾಜಿ ಸಚಿವರೂ ಆಗಿರುವ ಸುರೇಶ್ ಅವರೊಂದಿಗೆ ಒರಟಾಗಿ ವರ್ತಿಸುವುದರ ಜೊತೆಗೆ ಬಿಜೆಪಿ ಶಾಸಕರೊಂದಿಗೆ ಏರುಧ್ವನಿಯಲ್ಲಿ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪೊಲೀಸರ ವರ್ತನೆಯಿಂದ ಕೋಪಾವಿಷ್ಠರಾದ ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ಹನುಮ ಭಕ್ತರನ್ನು ಯಾವ ಕಾರಣಕ್ಕಾಗಿ ಬಂಧಿಸಿದ್ದು, ಬಿಡಿ ಅವರನ್ನು ಅಂತ ಅವರು ಆರ್ಭಟಿಸಿದ ಕೂಡಲೇ ಮೆತ್ತಗಾದ ಪೊಲೀಸರು ಮುಕೇಶ್ ಸೇರಿದಂತೆ ವಶಕ್ಕೆ ಪಡೆದಿದ್ದ ಎಲ್ಲ ಹಿಂದೂ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದವನನ್ನೇ ಬಂಧಿಸಿದ ಪೊಲೀಸ್ರು