ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದವನನ್ನೇ ಬಂಧಿಸಿದ ಪೊಲೀಸ್ರು
ಇನ್ಸ್ಯೂರೆನ್ಸ್ ಕ್ಲೈಂಗಾಗಿ ತನ್ನ ಅಂಗಡಿಯ ಚಿನ್ನ ಕಳುವಾಗಿದೆ ಎಂದು ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದ ಜುವೆಲ್ಲರಿ ಅಂಗಡಿ ಮಾಲೀಕನ ಕಳ್ಳಾಟ ಬಟಾಬಯಲಾಗಿದ್ದು, ಇದೀಗ ದೂರು ನೀಡಿದ್ದವನೇ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು, (ಜುಲೈ 31): ಇನ್ಸ್ಯೂರೆನ್ಸ್ ಕ್ಲೈಂಗಾಗಿ ಜುವೆಲ್ಲರಿ ಶಾಪ್ (Jewellery Shop) ಮಾಲೀಕನ ಕಳ್ಳಾಟ ಬಟಾಯಲಾಗಿದೆ. ಹೌದು..2.7 ಕೆಜಿ ಚಿನ್ನ (Gold) ಕಳ್ಳತನವಾಗಿದೆ ಎಂದು ನಾಟಕವಾಡಿ ದೂರು ನೀಡಿದ್ದ ಬೆಂಗಳೂರಿನ (bengaluru) ನಗರತ್ ಪೇಟೆಯಲ್ಲಿ ವ್ಯಕ್ತಿಯನ್ನೇ ಪೊಲೀಸರು ಬಂಧಿಸಿದ್ದಾರೆ. ನಗರತ್ ಪೇಟೆಯಲ್ಲಿರುವ ಕೈಲಾಶ್ ಜುವೆಲ್ಲರಿ ಅಂಗಡಿ ಮಾಲೀಕ ರಾಜ್ ಜೈನ್ ಎನ್ನುವಾತನನ್ನು ಬಂಧಿಸಿ 2.7 ಕೆಜಿ ಚಿನ್ನ ಕಳ್ಳತನ ಬಗ್ಗೆ ವಿಚಾರಣೆ ನಡೆಸಿದಾಗ ಕಳ್ಳಾಟ ಬಯಲಿಗೆ ಬಂದಿದೆ.
ಬೆಂಗಳೂರಿನ ನಗರತ್ ಪೇಟೆಯಲ್ಲಿ ಜುವೆಲ್ಲರಿ ಶಾಪ್ ಹೊಂದಿರುವ ಮಾಲೀಕ ರಾಜ್ ಜೈನ್, ತನ್ನ ಅಂಗಡಿ ಹುಡುಗರು ಹೈದರಾಬಾದ್ಗೆ ಚಿನ್ನ ಸಾಗಿಸುತಿದ್ದ ವೇಳೆ ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ಹೊಂಡಾ ಆ್ಯಕ್ಟೀವ್ ನಲ್ಲಿ ಮಾರ್ಕೆಟ್ ಫ್ಲೈ ಓವರ್ ಮೇಲೆ ತೆರಳುತಿದ್ದ ಹುಡುಗರನ್ನ ದುಷ್ಕರ್ಮಿಗಳು ಅಡ್ಡಗಟ್ಟಿ ಸುಲಿಗೆ ಮಾಡಿದ್ದಾರೆ ಎಂದು ಜ್ಯುವಲರಿ ಮಾಲೀಕ ರಾಜ್ ಜೈನ್ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು, ತನಿಖೆ ವೇಳೆ ಇಬ್ಬರು ಸಿಬ್ಬಂದಿಯನ್ನು ಬಳಸಿಕೊಂಡು ಜ್ಯುವೆಲೆರಿ ಅಂಗಡಿ ಮಾಲೀಕನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅಂಗಡಿ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಿದ ಅಸಲಿ ಸಂಗತಿ ಬಯಲಾಗಿದೆ. ಇನ್ಸ್ಯೂರೆನ್ಸ್ ಕ್ಲೈಂಗಾಗಿ ಈ ರೀತಿ ಮಾಡಿರುವುದಾಗಿ ಕೈಲಾಶ್ ಜ್ಯುವಲರಿ ಮಾಲೀಕ ರಾಜ್ ಜೈನ್ ಒಪ್ಪಿಕೊಂಡಿದ್ದಾನೆ. ಸದ್ಯ ಅಂಗಡಿ ಮಾಲೀಕ ರಾಜ್ ಜೈನ್ ಹಾಗೂ ಇಬ್ಬರು ಬಾಲಾಪರಾಧಿಗಳನ್ನ ಬಂಧಿಸಿಧಿಸಿದ್ದು, ಬಂಧಿತರಿಂದ 2.7ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನಷ್ಟು ಬೆಂಗಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:13 pm, Mon, 31 July 23