25 ಲಕ್ಷ ರೂ. ಪಡೆದು ಬೆಂಗಳೂರು ವ್ಯಕ್ತಿಗೆ ವಂಚಿಸಿದ ಖದೀಮರು, ತಿರುಪತಿಗೆ ಕರೆಸಿಕೊಂಡು ನಾಮ ಹಾಕಿದವರು ಯಾರು?

ನೋಟು ಬದಲಾವಣೆ ಹೆಸರಲ್ಲಿ ತಿರುಪತಿಗೆ ಕರೆಸಿಕೊಂಡು ಬೆಂಗಳೂರಿನ ವ್ಯಕ್ತಿಗೆ ಉಂಡೆ ನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

25 ಲಕ್ಷ ರೂ. ಪಡೆದು ಬೆಂಗಳೂರು ವ್ಯಕ್ತಿಗೆ ವಂಚಿಸಿದ ಖದೀಮರು, ತಿರುಪತಿಗೆ ಕರೆಸಿಕೊಂಡು ನಾಮ ಹಾಕಿದವರು ಯಾರು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jul 31, 2023 | 2:03 PM

ಬೆಂಗಳೂರು, (ಜುಲೈ 31): 500 ರೂ. ಮುಖಬೆಲೆಯ ನೋಟು(Note Exchange) ಕೊಟ್ಟರೆ ಒಂದೂವರೆ ಪಟ್ಟು ಹೆಚ್ಚು ಹಣ(Money) ಕೊಡುವುದಾಗಿ ಹೇಳಿ ಬೆಂಗಳೂರಿನ (Bengaluru) ಸಿವಿಲ್‌ ಕಾಂಟ್ರ್ಯಾಕ್ಟರ್‌ ಕಡೆಯಿಂದ 25 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿರುವುದು ಮಾಡಿರುವುದು ಬೆಳಕಿಗೆ ಬಂದಿದೆ. 500 ರೂ. ಮುಖಬೆಲೆ ನೋಟಿಗೆ 2 ಸಾವಿರ ರೂ. ಕೊಡುವುದಾಗಿ ತಿರುಪತಿಗೆ(tirupati )ಕರೆಸಿಕೊಂಡು ಉಂಡೆ ನಾಮ ಹಾಕಿದ್ದಾರೆ. ಈ ಬಗ್ಗೆ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿವು, ಶಿವಕುಮಾರಸ್ವಾಮಿ, ಶ್ರೀನಿವಾಸ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಬೈಕ್ ಕೀ ವಿಚಾರಕ್ಕೆ ಸಹೋದ್ಯೋಗಿಗಳ ಮಧ್ಯೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ

ಶಿವು ಎನ್ನುವಾತ ಸುರೇಶ್​ ಎನ್ನುವವರಿಗೆ ಎರಡು ತಿಂಗಳ ಹಿಂದೆ ಕರೆ ಮಾಡಿದ್ದು, ಕೇಂದ್ರ ಸರ್ಕಾರವು ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟ್ ಬ್ಯಾನ್ ಮಾಡಲಿದೆ. ತಮ್ಮ ಬಳಿ ಕೋಟ್ಯಾಂತರ ರೂಪಾಯಿ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳಿವೆ. ಅವುಗಳನ್ನ ಐದು ನೂರು ರೂಪಾಯಿ ನೋಟುಗಳನ್ನಾಗಿ ಬದಲಾಯಿಸುತ್ತಿದ್ದೇವೆ. ನೀವು ನಮಗೆ ಐದು ನೂರರ ಮುಖಬೆಲೆಯ 25 ಲಕ್ಷ ರೂ ಹಣ ನೀಡಿದರೆ, ನಾವು 2000 ಮುಖಬೆಲೆಯ 37.5 ಲಕ್ಷ ರೂಪಾಯಿ ನೀಡುತ್ತವೆ’ ಎಂದು ನಂಬಿಸಿದ್ದ.

ಇದನ್ನು ನಂಬಿದ್ದ ಸುರೇಶ್, ಮೇ ತಿಂಗಳ ಅಂತ್ಯದಲ್ಲಿ ಹಣದ ಸಮೇತ ಮಂತ್ರಾಲಯಕ್ಕೆ ಹೊರಡಲು ಸಿದ್ಧರಾಗಿದ್ದರು. ಅಷ್ಟರಲ್ಲಿ ಆರೋಪಿಗಳು ಮತ್ತೆ‌ ಕರೆ ಮಾಡಿ, ಮಂತ್ರಾಲಯ ಬೇಡ ನಾವು ತಿರುಪತಿಯಲ್ಲಿ ಇದ್ದೇವೆ ಇಲ್ಲಿಗೆ ಬನ್ನಿ’ ಎಂದು ಹೇಳಿದ್ದರು. ಅದರಂತೆ ಸುರೇಶ್ ತಿರುಪತಿಗೆ ತೆರಳಿದ ಬಳಿಕ ಅಲ್ಲಿಂದ ನೆಲ್ಲೂರಿಗೆ ಬರುವಂತೆ ಸೂಚಿಸಿದ್ದು, ಅಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿ ನಿಮ್ಮನ್ನ ಭೇಟಿಯಾಗಲಿದ್ದಾನೆ ಎಂದಿದ್ದರು. ಆರೋಪಿಗಳ ಸೂಚನೆಯಂತೆ ಸುರೇಶ್​ ಸಹ ನೆಲ್ಲೂರಿಗೆ ತೆರಳಿದಾಗ ಶ್ರೀನಿವಾಸ್ ಎನ್ನುವಾತ ಆಟೋದಲ್ಲಿ ಬಂದು ಭೇಟಿಯಾಗಿದ್ದ. ಬಳಿಕ ಆಫೀಸಿಗೆ ಕರೆದೊಯ್ದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನ ತೋರಿಸಿದ್ದಾನೆ. ಬಳಿಕ ‘ಎಲ್ಲವೂ ಒರಿಜಿನಲ್ ನೋಟು,ಯಾವ ಮೋಸವೂ ಇಲ್ಲ. ನೀವು ತಂದಿರುವ ಐದು ನೂರರ ನೋಟುಗಳನ್ನ ನೀಡಿ ಎಂದು ಕೇಳಿ ಪಡೆದುಕೊಂಡಿದ್ದರು. ನಂತರ ‘ನೀವು ಹೊರಗಡೆ ಕಾಯುತ್ತಿರಿ, ನಾವು ಬಂಡಲ್ ಮಾಡಿಕೊಂಡು ಬರುತ್ತೇವೆ ಎಂದು ಸೂಚಿಸಿದ್ದರು.

ನಂತರ ಹೊರಗಡೆ ಬಂದಿದ್ದ ಮತ್ತೋರ್ವ ವ್ಯಕ್ತಿ ನೀವು ಇಲ್ಲೇ ಇದ್ದರೆ ಯಾರಿಗಾದರೂ ಅನುಮಾನ ಬಂದು ಪೊಲೀಸರಿಗೆ ತಿಳಿಸುತ್ತಾರೆ. ಹಣವನ್ನು ನೆಲ್ಲೂರು ಟೋಲ್ ಬಳಿ ಕಲೆಕ್ಟ್ ಮಾಡಿಕೊಳ್ಳಿ ಎಂದು ತಿಳಿಸಿದ್ದರು. ಆರೋಪಿಗಳ ಸೂಚನೆಯಂತೆ ಟೋಲ್‌ ಬಳಿ ಎಷ್ಟು ಕಾದರೂ ಸಹ ಯಾರೂ ಬರಲಿಲ್ಲ. ಅನುಮಾನಗೊಂಡ ಸುರೇಶ್ ಆರೋಪಿ ಶಿವು ಮತ್ತು ಶಿವಕುಮಾರ್ ಸ್ವಾಮಿಗೆ ಕರೆ ಮಾಡಿದ್ದಾರೆ. ಆಗ ಆರೋಪಿಗಳು, ತಾವು ತಿರುಪತಿಯಲ್ಲಿ ಎರಡು ಸಾವಿರ ರೂ ಮುಖಬೆಲೆಯ ಐದು ಕೋಟಿ ರೂ. ಹಣದ ಮತ್ತೊಂದು ವ್ಯವಹಾರದಲ್ಲಿದ್ದೇವೆ. ಇಲ್ಲಿಯೇ ಬನ್ನಿ ಎಂದು ಲೈವ್ ಲೊಕೇಷನ್ ಸಹ ಶೇರ್ ಮಾಡಿದ್ದರು. ಇದನ್ನು ನಂಬಿದ್ದ ಸುರೇಶ್ ಹಾಗೂ ಅವರ ಸ್ನೇಹಿತ ತಿರುಪತಿಗೆ ತೆರಳಿ ಕರೆ ಮಾಡಿದ್ದಾರೆ. ಆಗಲೂ ಸಹ ಆರೋಪಿಗಳು ನಾವು ಬೆಂಗಳೂರಿಗೆ ತೆರಳಿದ್ದೇವೆ ಅಲ್ಲಿಯೇ ನಿಮಗೆ ಹಣ ಕೊಡುತ್ತೇವೆ ಎಂದಿದ್ದಾರೆ. ಆದರೆ ಬೆಂಗಳೂರಿಗೆ ಬಂದು ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸದೇ ವಂಚಿಸಿದ್ದಾರೆ.

ಎರಡು ತಿಂಗಳು ಕಾದ ಬಳಿಕ ವಂಚನೆಗೊಳಗಾದ ಸುರೇಶ್ ಅಂತಿಮವಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಸದ್ಯ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ