AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ

ಬೆಂಗಳೂರು ನಗರದ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪೀಲ್ ಎಂಬಾತನ ಹತ್ಯೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ
ರೌಡಿಶೀಟರ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ (ಸಾಂದರ್ಭಿಕ ಚಿತ್ರ)
Jagadisha B
| Updated By: Rakesh Nayak Manchi|

Updated on:Jul 31, 2023 | 3:04 PM

Share

ಬೆಂಗಳೂರು, ಜುಲೈ 31: ನಗರದ ಡಿ.ಜೆ.ಹಳ್ಳಿ (D.J.Halli) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪೀಲ್ ಹತ್ಯೆ (Murder) ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ- KCOCA) ಜಾರಿಗೊಳಿಸಿದ್ದಾರೆ. ಜುಲೈ 11ರಂದು ಕಪಿಲ್​ನನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ಆರೋಪಿಗಳಾದ ಶಂಕರ್, ಪವನ್, ನವೀನ್, ರಾಹುಲ್, ಪುನೀತ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಪೀಲ್ ಕೊಲೆಗೆ ಮತ್ತೊಬ್ಬ ರೌಡಿಶೀಟರ್ ಪಲ್ಲರವಿ ಜೈಲಿನಲ್ಲೇ ಕುಳಿತುಕೊಂಡು ಸಂಚು ರೂಪಿಸಿದ್ದ. ಅದರಂತೆ ಆರೋಪಿಗಳು ಸಂಘಟಿತರಾಗಿ ಕೊಲೆ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮತ್ತೊಬ್ಬ ಕೈದಿಯ ಕೊಲೆಗೆ ಯತ್ನ

ಇದೇ ಕಾರಣಕ್ಕೆ ಕಪಿಲ್​ ಕೊಲೆ ಪ್ರಕರಣಕ್ಕೆ ಕೋಕಾ ಕಾಯ್ದೆ ಸೇರ್ಪಡೆ ಮಾಡಲಾಗಿದೆ. ಒಂದೊಮ್ಮೆ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಬಿದ್ದರೆ ಎರಡು ವರ್ಷಗಳ ಕಾಲ ಜಾಮೀನು ಸಿಗುವುದಿಲ್ಲ. ಅದಾಗ್ಯೂ, ಹೈಕೋರ್ಟ್​​ನಲ್ಲಿ ಜಾಮೀನು ಪಡೆದುಕೊಳ್ಳಲು ಅವಕಾಶ ಇದೆ. ಆದರೆ ಕೆಳ ಹಂತದ ನ್ಯಾಯಾಲಯಗಳಲ್ಲಿ ಜಾಮೀನು ಸಿಗುವುದಿಲ್ಲ.

ಕ್ರೈಂ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Mon, 31 July 23