ಚಿತ್ರದುರ್ಗದಲ್ಲೊಂದು ವರದಕ್ಷಿಣೆ ಪ್ರಕರಣ, ಎರಡು ವರ್ಷಗಳ ಹಿಂದೆ ಮದುವೆಯಾದ ಮಹಿಳೆಗೆ ಗಂಡನ ಕುಟುಂಬದವರಿಂದ ಕಿರುಕುಳ

ಚಿತ್ರದುರ್ಗದಲ್ಲೊಂದು ವರದಕ್ಷಿಣೆ ಪ್ರಕರಣ, ಎರಡು ವರ್ಷಗಳ ಹಿಂದೆ ಮದುವೆಯಾದ ಮಹಿಳೆಗೆ ಗಂಡನ ಕುಟುಂಬದವರಿಂದ ಕಿರುಕುಳ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 19, 2024 | 11:27 AM

ವರದಕ್ಷಿಣೆಯ ಕಿರುಕುಳ ಆರಂಭಿಸಿದ್ದು ಮತ್ತು ತನ್ನ ಗಂಡ ಹಾಗೂ ಅತ್ತೆ ಮಾವನ ತಲೆ ತುಂಬಿದ್ದು ತಿಪ್ಪೇಸ್ವಾಮಿ ಎಂದು ಯುವತಿ ಹೇಳುತ್ತಾರೆ. ಆಕೆ ಗರ್ಭವತಿಯಾದಾಗ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣು ಮಗು ಅಂತ ಗೊತ್ತಾಗಿ ಗರ್ಭಪಾತವನ್ನೂ ಗಂಡನ ಮನೆಯವರು ಮಾಡಿಸಿರುವರೆಂಬ ಗಂಭೀರ ಆರೋಪ ಅವರು ಮಾಡುತ್ತಾರೆ. ಸದ್ಯಕ್ಕೆ ಅವರು ಗಂಡನ ಮನೆ ಮುಂದೆ ಧರಣಿ ಕೂತು ನ್ಯಾಯ ಕೇಳುತ್ತಿದ್ದಾರೆ.

ಚಿತ್ರದುರ್ಗ: ವರದಕ್ಷಿಣೆ ಕಿರುಕುಳದ (dowry harassment) ಮತ್ತೊಂದು ಪ್ರಕರಣ ಇದು. ಕಿರುಕುಳಕ್ಕೊಳಗಾಗಿರುವೆನೆಂದು ಹೇಳುತ್ತಿರುವ ಈ ಯುವತಿಗೆ 2 ವರ್ಷಗಳ ಹಿಂದೆ ತಂದೆತಾಯಿಗಳು ಚಿತ್ರದುರ್ಗದ ಆದರ್ಶನಗರದಲ್ಲಿರುವ ವಿಕಾಸ್ (Vikas) ಎನ್ನುವವರೊಂದಿಗೆ ಕೇಳಿದನ್ನೆಲ್ಲ ಕೊಟ್ಟು ಮದುವೆ ಮಾಡಿದ್ದಾರೆ. ನಗರದಲ್ಲಿ ರೇಶ್ಮೆ ಸೀರೆಗಳ (silk saris) ಅಂಗಡಿ ಇಟ್ಟುಕೊಂಡಿರುವ ಗಂಡನ ಜೊತೆ ಮದುವೆಯಾದ ಮೊದಲ 6 ತಿಂಗಳವರೆಗೆ ಚೆನ್ನಾಗಿದ್ದೆ ಎಂದು ಹೇಳುವ ಅವರು ಅಲ್ಲಿಂದ ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿದರೆಂದು ಹೇಳುತ್ತಾರೆ. ಆಕೆಯ ಅತ್ತೆ-ಮಾವ, ಮಾವನ ಅಣ್ಣ ತಿಪ್ಪೇಸ್ವಾಮಿ ಎನ್ನುವ ವ್ಯಕ್ತಿ ಸೇರಿ ತನಗೆ ನಡುರಾತ್ರಿವರೆಗೆ ತೊಂದರೆ ಕೊಡುತ್ತಾರೆಂದು ಯುವತಿ ಹೇಳುತ್ತಾರೆ. ಅವರ ಅತ್ತೆಯ ಹೆಸರು ಆಶಾ ಮತ್ತು ಮಾವನ ಹೆಸರು ವಿಜಯಕುಮಾರ್ ಅಂತೆ. ವರದಕ್ಷಿಣೆಯ ಕಿರುಕುಳ ಆರಂಭಿಸಿದ್ದು ಮತ್ತು ತನ್ನ ಗಂಡ ಹಾಗೂ ಅತ್ತೆ ಮಾವನ ತಲೆ ತುಂಬಿದ್ದು ತಿಪ್ಪೇಸ್ವಾಮಿ ಎಂದು ಯುವತಿ ಹೇಳುತ್ತಾರೆ. ಆಕೆ ಗರ್ಭವತಿಯಾದಾಗ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣು ಮಗು ಅಂತ ಗೊತ್ತಾಗಿ ಗರ್ಭಪಾತವನ್ನೂ ಗಂಡನ ಮನೆಯವರು ಮಾಡಿಸಿರುವರೆಂಬ ಗಂಭೀರ ಆರೋಪ ಅವರು ಮಾಡುತ್ತಾರೆ. ಸದ್ಯಕ್ಕೆ ಅವರು ಗಂಡನ ಮನೆ ಮುಂದೆ ಧರಣಿ ಕೂತು ನ್ಯಾಯ ಕೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ದಾವಣಗೆರೆ: ಸೂಳೆಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ ಆರೋಪ