ದಾವಣಗೆರೆ: ಸೂಳೆಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ ಆರೋಪ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಸೂಳೆಕೆರೆಗೆ ಹಾರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕವಿತಾ ಮತ್ತು ಮಗಳು ನಿಹಾರಿಕಾ ಕಾಣೆಯಾಗಿದ್ದಾರೆ ಎಂದು ಪತಿ ಮಂಜುನಾಥ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಸೂಳೆಕೆರೆಯಲ್ಲಿ ತಾಯಿ ಮಗಳ ಶವ ಪತ್ತೆಯಾಗಿದೆ.
ದಾವಣಗೆರೆ ಅ.16: ಚನ್ನಗಿರಿ (Channagiri) ತಾಲೂಕಿನ ಕೆರೆಬಿಳಚಿ ಬಳಿ ಇರುವ ಸೂಳೆಕೆರೆಗೆ (Sulekere) ಹಾರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಕವಿತಾ (27) ಹಾಗೂ ಪುತ್ರಿ ನಿಹಾರಿಕಾ (05) ಮೃತ ದುರ್ದೈವಿಗಳು. ಪತ್ನಿ ಕವಿತಾ ಮತ್ತು ಮಗಳು ನಿಹಾರಿಕಾ ಕಾಣೆಯಾಗಿದ್ದಾರೆ ಎಂದು ಪತಿ ಮಂಜುನಾಥ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಇಂದು (ಅ.16) ಸೂಳೆಕೆರೆಯಲ್ಲಿ ತಾಯಿ ಮಗಳ ಶವ ಪತ್ತೆಯಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರೇಹಳ್ಳಿ ಗ್ರಾಮದ ಕವಿತಾ ಅವರು ಆರು ವರ್ಷದ ಹಿಂದೆ ಹೊನ್ನೆಬಾಗಿ ಗ್ರಾಮದ ಮಂಜುನಾಥ ಎಂಬುವರನ್ನು ಮದುವೆ ಆಗಿದ್ದರು. ದಂಪತಿಗೆ ನಿಹಾರಿಕಾ ಎಂಬ ಮಗಳಿದ್ದಳು. ಪತಿ ಹಾಗೂ ಅವರ ಕುಟುಂಬಸ್ಥರು ಕವಿತಾಗೆ ಕಳೆದ ಕೆಲವು ವರ್ಷಗಳಿಂದ ವರದಕ್ಷಿಣೆ ಕಿರುಕಳ ನೀಡಿತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಕವಿತಾ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ
ನೆಲಮಂಗಲ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭೀಮೇಶ್ವರ ಬಡಾವಣೆಯಲ್ಲಿ ನಡೆದಿದೆ. ಕಿರಣ್ (22) ಮೃತ ಯುವಕ. ಮನೆಯಲ್ಲಿ ಯಾರು ರೂಂನ ಪ್ಯಾನಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೋಷಕರು ಕೆಲಸಕ್ಕೆ ಬಾರದಿದ್ದಕ್ಕೆ ಮಗಳಿಗೆ ನಾಯಿ ಛೂ ಬಿಟ್ಟ ಮಾಲೀಕ, ಯುವತಿ ಗುಪ್ತಾಂಗಕ್ಕೆ ಗಾಯ
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆ: ಕೊಲೆ ಶಂಕೆ
ಬೆಂಗಳೂರು: ನಗರದ ಆರ್ಎಂಸಿ ಯಾರ್ಡ್ ಸಮೀಪದ ಸೋಮೇಶ್ವರನಗರದ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಶವದ ಹೊಟ್ಟೆ, ಎದೆಭಾಗ ಮತ್ತು ಕೈಕಾಲುಗಳ ಮೇಲೆ ಮಚ್ಚಿನಿಂದ ಹೊಡೆದಿರುವ ಗಾಯಗಳಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಹಾಲಕ್ಷ್ಮಿಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Mon, 16 October 23